ಗಜ಼ಲ್‌ಗಳ ಮೂಲಕ ಪರಿಚಿತರಾಗಿರುವ ಚೇತನಾ ಕುಂಬ್ಳೆ ಅವರು ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಕುಂಬ್ಳದವರು. ಸಾಹಿತ್ಯಾಸಕ್ತರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಸುಕಿನಲ್ಲಿ ಬಿರಿದ ಹೂಗಳು (ಗಜಲ್ ಸಂಕಲನ), ಪಡಿನೆಳಲು (ವಿಮರ್ಶಾ ಸಂಕಲನ) ಇವರ ಪ್ರಮುಖ ಕೃತಿಗಳು
ರಾಮನಿಂದ ಪರಿತ್ಯಕ್ತಳಾದ ಸೀತೆ ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳ ಬೆಳವಣಿಗೆಯನ್ನು ಕಾಣುತ್ತಾ ಅವರ ಸಂಭ್ರಮದಲ್ಲಿ ತನ್ನ ಖುಷಿಯನ್ನು ಅರಸುತ್ತಿರುತ್ತಾಳೆ. ಅದೇ ಸಂದರ್ಭದಲ್ಲಿ ಈ ಪಾತ್ರಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಈ ಕಥೆಗಳ ಶೀರ್ಷಿಕೆಗಳೂ ಅರ್ಥಪೂರ್ಣವಾಗಿದ್ದು ಆಕರ್ಷಣೀಯವಾಗಿದೆ.