Book Watchers

ದೀಪಾ ಹಿರೇಗುತ್ತಿ

ಉತ್ತರ ಕನ್ನಡ ಜಿಲ್ಲೆಯ ಕಮಟಾ ತಾಲ್ಲೂಕಿನ ಗೋಕರ್ಣದವರಾದ ಕವಿ ದೀಪಾ ಹಿರೇಗುತ್ತಿ ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡವರು. ದಸರಾ ಕವಿಗೋಷ್ಠಿ ಸಂಕ್ರಮಣ, ಪ್ರಜಾವಾಣಿ ಸಂಚಯ ತಿಂಗಳು ಕವನಸರ್ಧೆ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕಲೇಸಂ ಗುಡಿಬಂಡೆ ಪೂರ್ಣಿಮಾ ದತ್ತಿ ಬಹುಮಾನ ಪಡೆದಿದ್ಧಾರೆ. ’ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ.

Articles

ಓದು ಮತ್ತು ಅನುಭವಗಳೆರಡರ ಹದವಾದ ಮಿಶ್ರಣ ನರೇಂದ್ರ ರೈ ದೇರ್ಲಾ ಬರವಣಿಗೆ

ನಗರಗಳಲ್ಲಿ ಮಾತ್ರವಲ್ಲದೆ ಕೊರೋನಾ ಹಳ್ಳಿಗಳಲ್ಲೂ ಕಂಪನ ಉಂಟು ಮಾಡಿದೆ ಆದರೆ ಅದರ ನಡುವೆಯೂ ಕಾರ್ಮೋಡದ ನಡುವಿನ ಬೆಳ್ಳಿರೇಖೆಯಂತಹ ಭರವಸೆಯನ್ನು ಎತ್ತಿ ಹಿಡಿಯುವುದು ಈ ಪುಸ್ತಕದ ವಿಶೇಷತೆ. ಗ್ರಾಮಗಳು ಯಾವತ್ತೂ ನಿಷ್ಕ್ರಿಯವಾಗಲೆ ಇಲ್ಲ, ಅಲ್ಲಿ ಯಾವತ್ತೂ ಒಂದು ಚಲನೆ ಇದೆ ಎನ್ನುವ ಲೇಖಕರು ಅಕಸ್ಮಾತ ನಗರಗಳಂತೆ ಹಳ್ಳಿಗಳು ಲಾಕ್ಡೌನ್ ಆಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಲು ಹೇಳಿ ವಿಚಾರಕ್ಕೆ ಹಚ್ಚುತ್ತಾರೆ.

Read More...