Book Watchers

ಗೀತಾ ವಸಂತ

ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ ಗೀತಾ ವಸಂತ ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಅವರ ಪ್ರಮುಖ ವಿಮರ್ಶಾ ಕೃತಿಗಳು. ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ಅವರ ಮಹಾಪ್ರಬಂಧ.

Articles

ಕತೆಯ ಬೈನಾಕ್ಯುಲರ್‌ನಲ್ಲಿ ಕಂಡ ’ಹಮಾರಾ ಬಜಾರ್‌’ ಬಿಂಬಗಳು

’ಹಮಾರಾ ಬಜಾಜ್’ ಎಂಬ ಶೀರ್ಷಿಕೆಯನ್ನೇ ಹೊತ್ತು ನೀಳ್ಗತೆಯೊಂದು ಸಂಕಲನದಲ್ಲಿದೆ. ಅಲ್ಲಿ ಬರುವ ಎರಡು ರೂಪಕಗಳು ವಿಕ್ರಮ್‌ರ ಕತೆಗಳ ನೋಟದ ಕ್ರಮವನ್ನು ತುಂಬ ಸಶಕ್ತವಾಗಿ ಕಟ್ಟಿಕೊಡುತ್ತವೆ. ಒಂದು, ಅಪ್ಪನ ಕಾಲದ ಹಳೆಯ ಬಜಾಜ್ ಸ್ಕೂಟರ್. ಕಥಾನಾಯಕ ನವೀನ ಈ ಸ್ಕೂಟರನ್ನು ಮತ್ತೆ ಪಡೆಯಲು ಹೆಣಗುವುದು ಹಾಗೂ ಕೊನೆಯಲ್ಲಿ ಅದು ಸಿಕ್ಕಾಗ ಅದನ್ನು ನಿರಾಕರಿಸುವುದು ಕಥೆಯ ಕೇಂದ್ರ ಪ್ರಜ್ಞೆಯನ್ನು ಸಾಂಕೇತಿಕವಾಗಿ ಕಾಣಿಸುತ್ತದೆ.

Read More...