Book Watchers

ಗಿರಿಜಾ ಶಾಸ್ತ್ರಿ

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು 1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು. ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು.

Articles

ಮಾಸ್ತಿಯವರ ಕಥನಕೋಶ `ಮಹಾಕಥನದ ಮಾಸ್ತಿ'

ಮಾಸ್ತಿಯವರ ಕಥಾ ಲಕ್ಷ್ಯವಾದ “ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯಲ್ಲಿ” (ಯಶವಂತ ಚಿತ್ತಾಲರು) ಮಾಸ್ತ್ತಿಯವರು ಗ್ರ್ರಹಿಸಿದ್ದೆಷ್ಟು, ಕಂಡೆದ್ದೆಷ್ಟು?, ಕಂಡದ್ದನ್ನು ಇನ್ನೊಬ್ಬರಿಗೆ ಕತೆಮಾಡಿ ಹೇಳುವಲ್ಲಿ ಮಾಸ್ತಿಯವರ ಯಾವ ನಂಬಿಕೆಗಳು ಬದುಕಿನ ಧೋರಣೆಗಳು ಕೆಲಸಮಾಡಿವೆ ಎಂಬುದನ್ನು ಬಹಳ ಅನನ್ಯವಾಗಿ ನಿಮ್ಮ ಈ ಕೃತಿ ಬಯಲಾಗಿಸಿದೆ.

Read More...

ಜೋಳಿಗೆಗೆ ದಕ್ಕಿದ ಸಮರ್ಥ ಅಭಿವ್ಯಕ್ತಿ `ಜೋಗತಿ ಜೋಳಿಗೆ'

ಜೋಗತಿ ಎನ್ನುವ ಶಬ್ದವೇ ಜಂಗಮ ಸ್ವರೂಪದ್ದು. ಒಂದು ಪ್ರದೇಶಕ್ಕಾಗಲೀ, ನಿರ್ಧಿಷ್ಟ ಗುರಿಗಾಗಲೀ ಅಂಟಿಕೊಂಡಿರುವಂತಹುದಲ್ಲ. ಇಂತಹುದಕ್ಕೆ ಅಳಿವಿಲ್ಲ.  ಜೋಳಿಗೆ ಅನುಭವ ಸ್ವರೂಪಿಯಾದುದು. ಅದಕ್ಕೆ ಬಿದ್ದಷ್ಟು ಮಾತ್ರ ಅಭಿವ್ಯಕ್ತಿಗೆ ದಕ್ಕುತ್ತದೆ.

Read More...