Book Watchers

ಎಚ್.ಎಸ್. ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ. ಎ. ಪದವಿ ಪಡೆದ ಅವರು ಸದ್ಯ ಮೈಸೂರಿನ ತಿ. ನರಸೀಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಸುವಿನಕೊಪ್ಪಲಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು- ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಅವರು ಪುಸ್ತಕ ವಿಮರ್ಶೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಮೈಸೂರಿನಲ್ಲೇ ವಾಸವಿದ್ದಾರೆ. ಅವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Articles

ಮಾನವತೆಗೆ ಸದ್ದಿಲ್ಲದೇ ಕುದಿಯುವ ಮಾಂತ್ರಿಕ ವಾಸ್ತವ ಕಥನ : ಹಾಣಾದಿ

"ದನ,ಕುರಿ,ಕೋಳಿ, ಮೀನು ಎಲ್ಲಾ ತಿಂತಿ ಅಲ್ಲ ನಿಂದು ಹೊಟ್ಟಿನೋ,ಮಟ್ಟಿನೋ" ಅಂತ ನಮ್ಮಪ್ಪ ಕೇಳಿದ "ಅರೆ ಮಾಲಕ್,ಅದು ನಮ್ಮ ಖಾನಾ ಅದ.ನಿಮಗೆ ಮೊದಲು ನೆಲ ಇತ್ತು ಬೆಳದರಿ ಉಂಡ್ರಿ, ನಮಗ ನೆಲ ಇರಲಿಲ್ಲ ಇವೆಲ್ಲ ತಿಂದಿ ಬದಕ್ತಾ ಇದಿವಿ.ಈಗ ಅದೇ ರೂಢಿ ಬಿದ್ದದ ಮಾಲಕ್. ನೆಲ ಕೊಡಲ್ಲ ಗೌರ್ಮೆಂಟ್ ಮ್ಯಾಲಿಂದ ದನ ತಿನ್ಬೇಡ ಅಂದ್ರ ನಾವೇನ್ ಗಿಡದಲ್ಲಿ ರೊಕ್ಕ ಬೆಳಿತಿವ್ ಏನು ?

Read More...

ತೇಜೋ ತುಂಗಭದ್ರಾ : ಮಾನವತೆಯ ಹೆಸರಲ್ಲಿ ಓದಿ ಓದಿ ಮರುಳಾಗಿ ಎಂದು ಹೇಳುವ ತೋರುಗಾಣಿಕೆಯ ಕತೆ

ಪೋರ್ಚುಗಲ್ ನ ಲಿಸ್ಬನ್ ನಲ್ಲಿ ಆರಂಭವಾಗುವ ಕತೆ, ತೆಂಬಕಪುರ,ವಿಜಯನಗರ ಮತ್ತು ಗೋವಾದಲ್ಲಿ ನಡೆದು, ಕಡೆಗೆ ಗೋವಾದಲ್ಲಿ ಕೊನೆಗೊಳ್ಳುತ್ತದೆ. ಪೋರ್ಚುಗಲ್ ನ ಲಿಸ್ಬನ್ ನಲ್ಲಿ ವಾಸವಾಗಿದ್ದ ಕ್ಯಾಥಲಿಕ್ ಗೇಬ್ರಿಯಲ್ ಮತ್ತು ಯಹೂದಿ ಬೆಲ್ಲಾ ಹಾಗೂ ತೆಂಬಕಪುರದಲ್ಲಿ ಬಂದು ವಾಸಮಾಡುತ್ತಿದ್ದ ವೈಷ್ಣವ ಕೇಶವ ಮತ್ತು ತೆಂಬಕಪುರದ ನಿವಾಸಿ ಶೈವ ಹಂಪವ್ವ ಈ ಎರಡೂ ಜೋಡಿಗಳ ಪ್ರೇಮವನ್ನು ಪೊರ್ಚುಗೀಸ್, ಆದಿಲ್ ಶಾಹಿ ಅರಸರು ಮತ್ತು ವಿಜಯನಗರ ಅರಸರುಗಳ ಆಳ್ವಿಕೆಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಆಡಳಿತ ಅಂದರೆ ಇಡೀ ಪ್ರಭುತ್ವ ಹೇಗೆ ಸಾಮಾನ್ಯರ ಬದುಕನ್ನು ಸರ್ವನಾಶಮಾಡುತ್ತವೆ ಎಂಬುದನ್ನು ವಸುದೇಂದ್ರರ ಬರಹದ ಕೌಶಲ ಓದುಗನ ಮನವನ್ನು ಕಲಕಿ,ಮುಟ್ಟಿಸುತ್ತದೆ.

Read More...

ಮೃಗಶಿರ : ಬದುಕಿನ ಪ್ರವಾಸ ಮತ್ತು ಪ್ರಸವದ ಕತೆ.

ಪುಟ್ಟಣ್ಣನ ಪಾತ್ರವನ್ನು ಮತ್ತು ಆದರ್ಶವಾದಿ ಸುಬ್ರಾಯಪ್ಪನನ್ನು , ಮಡದಿ ಅನುಸೂಯ ಬದುಕಿದ್ದಾಗಲೇ ಗೌಪ್ಯವಾಗಿ ಕಾಶಿಯಲ್ಲಿ ವರಿಸುವ ಮೇನಕೆಯ ಪಾತ್ರವನ್ನು ಲೇಖಕರು ಸಾಯಿಸಿರುವುದು. ನನಗ್ಯಾಕೋ ಇಲ್ಲಿ ಲೇಖಕರು ನೈತಿಕ ಎಚ್ಚರ ಮತ್ತು ಕತೆಗೆ ನ್ಯಾಯ ಒದಗಿಸುವ  ಮತ್ತು ಓದುಗರ ದೃಷ್ಟಿಯಲ್ಲಿ ಲೇಖಕನ ನೈತಿಕತೆ ಯ ಪರ ಎಂಬ ಗೊಂದಲಕ್ಕೆ ಬಿದ್ದು ಎರಡೂ ಪಾತ್ರಗಳಿಗೆ ದುರಂತದ ಅಂತ್ಯವನ್ನು ಬೇಕಂತಲೇ ಕೊಟ್ಟರೇನೋ ಅನ್ನಿಸುತ್ತದೆ? ಈ ಒಂದು ಅಂಶ ಬಿಟ್ಟರೆ ' ಮೃಗಶಿರ' ಕಾದಂಬರಿ ಕನ್ನಡ ಸಾಹಿತ್ಯದ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು ಎಂದು ಹೇಳಬಹುದು.

Read More...

ಇದು ಹಿಂದೂ ಪುರಾಣದ ’ಭಾರತ ಒಂದು ಮರು ಶೋಧನೆ...’

*ನಿಮಗೆ ಗಾಂಧಿ, ಅಂಬೇಡ್ಕರ್ ಸರಿಯಾಗಿ ಅರ್ಥವಾಗದ ಹೊರತು ಭಾರತೀಯ ಸಮಾಜ ಎಂದೂ ಅರ್ಥವಾಗಲ್ಲ. * ಇವತ್ತು ಭಾರತಿಯ ಸಮಾಜ ಹೊತ್ತಿ ಉರಿಯುತ್ತಿದೆ. ಧರ್ಮ, ಜಾತಿ, ಅಸಮಾನತೆಗಳ ಬೆಂಕಿ ಇಡೀ ಸಮಾಜದ ಬುಡವನ್ನು ಸುಡುತ್ತಿದೆ. ಇಂಥ ಹೊತ್ತಲ್ಲಿ ಸಂಶೋಧನಾ ಕೃತಿಗಳು ಬೆಂದ ಬುಡಕ್ಕೆ ನೀರಾಕುವ ಕೆಲಸ ಮಾಡಬೇಕೆ ಹೊರತು, ಬೆಂಕಿಹಚ್ಚುವ ಕೆಲಸವನ್ನಲ್ಲ‌.

Read More...