Book Watchers

ಕೆ.ವಿ. ಸುಬ್ರಹ್ಮಣ್ಯಂ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ.

Articles

ವಿಶಿಷ್ಟ ನೋಟಗಳ ಅಧ್ಯಯನ ಶೀಲತೆ ’ಕರ್ನಾಟಕದ ಆದಿಮ ಚಿತ್ರಕಲೆ’

’ಕರ್ನಾಟಕ ಆದಿಮ ಚಿತ್ರಕಲೆ’ ಪುಸ್ತಕದ 176ಕ್ಕೂ ಹೆಚ್ಚು ಪುಟಗಳಲ್ಲಿ ಮೋಹನ ಆರ್. ರವರು ಬಂಡೆಚಿತ್ರ ಅಧ್ಯಯನಗಳ ಪಕ್ಷನೋಟವನ್ನು ಮೊದಲ ಅಧ್ಯಾಯದಲ್ಲಿ ನೀಡಿದ್ದಾರೆ. ಅಧ್ಯಯನ ಸಾಮಗ್ರಿ, ಮಲಪ್ರಭಾ, ಕೃಷ್ಣಾ, ತುಂಗಾಭದ್ರಾ ಮತ್ತು ವೇದಾವತಿ ನದಿ ತೀರಗಳ ಆದಿಮ ಚಿತ್ರಗಳೇ ಅಲ್ಲದೆ ದಕ್ಷಿಣ ಕರ್ನಾಟಕ ಮತ್ತು ಕೊಂಕಣತೀರ ಪ್ರದೇಶಗಳ ಅನ್ವೇಷಣೆಗಳನ್ನುದಾಖಲಿಸಿದ್ದಾರೆ. 

Read More...

Magazine
With us

Top News
Exclusive
Top Events