Book Watchers

ಕಮಲಾ ಹೆಮ್ಮಿಗೆ

ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20 ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಅನಾಥಪ್ರಜ್ಞೆ ಹಾಗೂ ರಮ್ಯಪ್ರಜ್ಞೆಗಳೆರಡೂ ಒಟ್ಟಿಗೆ ಕಮಲಾ ಅವರ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ರೀತಿ ಕುತೂಹಲಕರ.

Articles

ಸುಕ್ರಜ್ಜಿಯ ಸುಂದರ ಭಾವಚಿತ್ರಗಳ ‘ಹಾಲಕ್ಕಿ ಕೋಗಿಲೆ’

'ನಾನು ಬದುಕಿರುವುದು ಹಾಡಿಗಾಗಿ ,ಸಾಯುವುದು ಹಾಡಿಗಾಗಿಯೇ' ಎಂದು ಸ್ಪಷ್ಟ ಹೇಳುವ ಪದ್ಮಶ್ರೀ ಸುಕ್ರಜ್ಜಿಯವರು ಬಹುಮುಖ ವ್ಯಕ್ತಿತ್ವ ಹೊಂದಿದವರು. ಅವರ ಸಾಮಾಜಿಕ ಕಳಕಳಿ, ವನೌಷಧಿ ಜ್ಞಾನ, ಗಾಯನ, ಸರಳತೆ, ಎಲ್ಲರಿಗೂ ಮಾದರಿ.

Read More...