Book Watchers

ಕಪಿಲ ಪಿ. ಹುಮನಾಬಾದೆ

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್ ನವರು. 1996 ಜನವರಿ 25ರಂದು ಜನನ. 2019 ನೇ ಸಾಲಿನ ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯ ಟಾಪ್ 25 ಕಥೆಗಳಲ್ಲಿ ಇವರ ಬಾಗಿಲು ಎಂಬ ಸಣ್ಣಕಥೆ ಆಯ್ಕೆಯಾಗಿದೆ. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯ ನಿರ್ವೈಸುತ್ತಿದ್ದಾರೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಎಂ.ಎ ಎರಡನೇ ವರ್ಷದ ವಿದ್ಯಾರ್ಥಿ.

Articles

ಬೆಂಬಿಡದೆ ಕಾಡುವಂತಹ ಪದ್ಯಗಳು

ಕವನ ಸಂಕಲನದ ಹೆಸರಿನ ಮೂಲಕವೇ ಕೂತೂಹಲ ಹುಟ್ಟಿಸುವ ಇಲ್ಲಿನ ಪದ್ಯಗಳು, ಸಹಜವಾಗಿ ನಮ್ಮ ಬಿಸಿಲು ಉಂಡ  ಬನದೊಳಗಿನ ಹಣ್ಣುಗಳ ರುಚಿಯಂತೆ ಇವೆ. " ಪ್ರಸ್ತುತ ಸಂಕಲನದ ಮೂಲಕ ವಿಕ್ರಮ ವಿಸಾಜಿ ಕನ್ನಡ ಕಾವ್ಯದಲ್ಲಿ ಇನ್ನೊಮ್ಮೆ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದ್ದಾನೆ" - ಎಚ್ ಎಸ್ ಶಿವಪ್ರಕಾಶ್ ಅವರು ಬೆನ್ನುಡಿಯಲ್ಲಿ ಬರೆದಿರುವ ಈ ಮಾತು ಇಲ್ಲಿನ ಪದ್ಯಗಳು ಓದಿದಾಗ ನಿಜ ಅನಿಸುತ್ತದೆ.

Read More...

ಗದ್ಧಲಗಳ ಮಧ್ಯೆ ಕೈಹಿಡಿದು ಓದಿಸುವ ‘ಕಥಾಗತ’

ಇಲ್ಲಿನ ಎಲ್ಲಾ ಕಥೆಗಳು ಒಂದಕ್ಕೊಂದು ಅಂಟಿಕೊಂಡು ಬೇರೆಯಾಗಿ ಬದುಕಲು ಸಾಧ್ಯವೆ ಇಲ್ಲದಂತಿವೆ. ಒಳಗಲ ಜೋತಿಯ ಕಥೆ ಓದಿದವನಿಗೆ ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು ಒಂದು ರೀತಿಯಲ್ಲಿ ಮುಂದುವರಿಕೆಯ ತಂತು ಎನಿಸುತ್ತದೆ.

Read More...