Book Watchers

ಕವಿತಾ ಭಟ್‌

’ಬತ್ತದ ಕಣಜ’ ಗಂಗಾವತಿಯಲ್ಲಿ ಹುಟ್ಟಿ ಬೆಳೆದ ಕವಿತಾ ಭಟ್‌ ಅವರು ಮದುವೆಯ ನಂತರ ಬದುಕು ಕಂಡದ್ದು ಹಸಿರಿನ ಸೀರೆಗೆ ಕಡಲ ಅಂಚು ಹೊತ್ತ ಉತ್ತರ ಕನ್ನಡದ ಕುಮಟಾದಲ್ಲಿ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಗೃಹಿಣಿಯಾಗಿರುವ ಅವರು ಸಾಹಿತ್ಯ ಮತ್ತು ಸಂಗೀತಾಸಕ್ತರು. ಪುಸ್ತಕಗಳನ್ನು ಓದುವುದು ಮತ್ತು ಓದಿದ ಪುಸ್ತಕಗಳ ಕಿರುಪರಿಚಯ ಮಾಡಿ ಓದುವ ಗೀಳು ಹತ್ತಿಸುವ ಮುಖ್ಯ ಹವ್ಯಾಸ ಇವರದು. ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು ವಿಶ್ವವಾಣಿ, ಉದಯವಾಣಿ, ಹೊಸದಿಗಂತ ಸೇರಿದಂತೆ ಕೆಲ ಪತ್ರಿಕೆಗಳಿಗೆ ಹಾಗೂ ಓ ಮನಸೇ ಪಾಕ್ಷಿಕಕ್ಕೆ ಬರೆಯುವ ಹವ್ಯಾಸಿ ಲೇಖಕಿ.

Articles

ಗಂಡು ಹೆಣ್ಣನ ಸಂಬಂಧ ಅನಾವರಣ ‘ಸಮುದ್ಯತಾ’

ಭ್ರಮೆ ಎನ್ನಿಸಿಕೊಳ್ಳಬಹುದಾದ ಐವತ್ತು ವರ್ಷಗಳ ಹಿಂದಿನ ಘಟನೆಗಳು ಮತ್ತೆ ಮರುಕಳಿಸಿ, ಎಲ್ಲವೂ ನಿಜದ ನೆಲೆಯ ಮೇಲೆ ವಾಸ್ತವವಾಗುತ್ತವೆ. ಅಲ್ಲಿಗೆ ಕಥೆ ಮುಗಿಯುವುದಿಲ್ಲ. ಪ್ರತಿ ಐವತ್ತು ವರ್ಷಗಳಿಗೊಮ್ಮೆಯಂತೆ ಮತ್ತೆ ಅದೇ ಸಮುದ್ಯತಳ ಪತ್ರ, ಅದೇ ಮರದ ಟೇಬಲ್ಲಿನಲ್ಲಿ ಮತ್ತಿನ್ಯಾರಿಗೋ ಸಿಕ್ಕು....ಹೀಗೆ ಮುಂದುವರೆಯುತ್ತಲೇ ಹೋಗುತ್ತವೆ.

Read More...

’ಡುಮಿಂಗ’ನಲ್ಲಿನ ಹೊಸ ಬಗೆಯ ಕತೆಗಳು..

ಕೈ ಮಾಡಿದಲ್ಲಿ ನಿಲ್ಲಿಸಿ ಹತ್ತಿಸಿಕೊಳ್ಳುವ ನಮ್ಮ ಮಲೆನಾಡಿನ ಬಸ್ಸುಗಳಂತೆ ಈ ಕತೆಗಳು ಓದಿಸಿಕೊಂಡು ಹೋಗುವ ಓಘವೇ ಓಘ! ಒಂದಿಷ್ಟು ತಿರುವು ಹಾದು, ಮತ್ತೊಂದಿಷ್ಟು ಊರು, ಸಂತೆ, ಗೌಜು ಗದ್ದಲಗಳನ್ನೆಲ್ಲ ಕಾಣಿಸಿ ಯಾವುದೋ ಒಂದು ಅಜ್ಞಾತ ಜಾಗದಲ್ಲಿ ತಟ್ಟನೆ ಇಳಿಸಿಬಿಟ್ಟು ಕಂಗಾಲು ಮಾಡುವಂತೆ, ಎಲ್ಲೆಂದರಲ್ಲಿ ಓದುಗರನ್ನು ಒಂಟಿಯಾಗಿ ಬಿಟ್ಟು ಓಡಿಬಿಡುತ್ತವೆ.

Read More...