Book Watchers

ಕೃಷ್ಣ ಪ್ರಕಾಶ ಉಳಿತ್ತಾಯ

ಕೃಷ್ಣಪ್ರಕಾಶ ಉಳಿತ್ತಾಯ ವೃತ್ತಿಯಲ್ಲಿ ಕರ್ಣಾಟಕ ಬ್ಯಾಂಕ್ ಉದ್ಯೋಗಿ. ಪ್ರವೃತ್ತಿಯಲ್ಲಿ ಕಲೆಯ ಸೆಳೆತಕ್ಕೆ ಒಳಗಾದವರು. ಕಲಾವಿದರಾಗಿ, ಕಲಾವಿಮರ್ಶಕರಾಗಿ ನಾಡಿನ ಯಕ್ಷಗಾನ ಪರಂಪರೆಯಲ್ಲಿ ಚಿರಪರಿಚಿತರಾಗಿದ್ದಾರೆ. ಕನ್ನಡ ಇಂಗ್ಲೀಷ್, ವೈದಿಕ ಸಾಹಿತ್ಯ ಇವರ ಅಚ್ಚುಮೆಚ್ಚಿನ ಅಧ್ಯಯನವಾಗಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಭಾಷಣಗಳನ್ನು ನೀಡುತ್ತಾ, ಹಲವಾರು ಪತ್ರಿಕೆಗಳಿಗೆ ಲೇಖನವನ್ನೂ ಬರೆದಿದ್ಧಾರೆ. ’ಅಗರಿ ಮಾರ್ಗ’ ಅವರ ಮೊದಲ ಕೃತಿ. ಹಲವಾರು ಯಕ್ಷಗಾನ ಮೇಳಗಳಿಗೆ ಅತಿಥಿ ಕಲಾವಿದರಾಗಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರಿಗೆ ಯುವ ಯಕ್ಷಕಲಾರಾಧಕ ಪ್ರಶಸ್ತಿ ನೀಡಿದೆ ಗೌರವಿಸಿದೆ.

Articles

ಮನ ತಂಪಿಸುವ ’ಮಾತಿಗೆ ಮುನ್ನ’ ಓದು

ಎದೆಯ ತಲ್ಲಣ ಈ ಕಾವ್ಯವನ್ನು ಸೃಜಿಸಿದೆ “ ಬಿಡದೆನ್ನ ನಿನ್ನೆದೆಯ ನೀರಿನಿ೦ದೆರೆದೆನ್ನ” ಕೊನೆಗೆ ಕವಿ ತಾನು ಕ೦ಡ ಹುಡುಗಿಯನ್ನು ಬೇಡುತ್ತಾನೆ ಅಮ್ಮನಾಗಿ “ನಿನ್ನೆದೆಯ ನೀರಿನಿ೦ದ” ಅ೦ದರೆ ಇಲ್ಲಿ ತೋಳ್ಪಾಡಿಯವರು ಕ೦ಡದ್ದು ಕರುಣೆಯನ್ನು. ಎದೆಯ ಕರುಣಾ ಸಮುದ್ರವನ್ನು ಅದಕ್ಕೇ ಕೊನೆಗೆ “ಮನದುರಿಯನಾರಿಸವ್ವ” ಎ೦ಬ ಮಾತು ಬ೦ದದ್ದು ಎನ್ನತ್ತಾರೆ ತೋಳ್ಪಾಡಿಯವರು. 

Read More...

Magazine
With us

Top News
Exclusive
Top Events