Book Watchers

ಕ್ಷಿತಿಜ್ ಬೀದರ್

ಕನ್ನಡದ ಪ್ರಮುಖ ಕಥೆಗಾರ ಕ್ಷಿತಿಜ ಬೀದರ್‌ ಅವರು ಸಾಹಿತ್ಯ, ಓದಿನಲ್ಲಿ ಬಹು ಮೋಹಕತೆ ಉಳ್ಳವರು. ಮೂಲ ಹೆಸರು ಬಸವರಾಜ್‌ ಮಠಪತಿ. ಕ್ಷಿತಿಜ ಬೀದರ್‌ ಮತ್ತು ಕಿಂಸ್ತಘ್ನು ತುಮಕೂರು ಅವರ ಕಾವ್ಯನಾಮಗಳು. ಅವರ ಹಲವಾರು ಕಥೆಗಳು, ಲೇಖನಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮುಕ್ತ, ಅಸ್ಪಷ್ಟ ಕಾದಂಬರಿಗಳನ್ನು ರಚಿಸಿದ್ದಾರೆ. ಮುನ್ಸಿ ಪ್ರೇಮಚಂದ ಅವರ ’ಮುದ’ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತ ’ಕಥಾ ಸ್ಪೋಟ’ ಎಂಬ ಕಥಾ ಸಂಕಲನವನ್ನು ಹೊರತರುವಲ್ಲಿ ನಿರತರಾಗಿದ್ಧಾರೆ. ಈವರೆಗೆ ಸುಮಾರು 14 ಕಾದಂಬರಿ, 250 ಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ.

Articles

ಎಂ.ವ್ಯಾಸರ ಕಥಾ ಅಸ್ತ್ರಗಳು

ಸೆಲೆಬ್ರಿಟಿಗಳ ಆಕರ್ಷಣೆ, ಕೌತುಕ, ಒಂದಾಗುವ ತುಡಿತ ಬರಹಗಾರ ಮತ್ತು ಅಭಿಮಾನಿ ನಡುವಿನ ಸಂಬಂಧದಲ್ಲಿ ಅವರ ಪ್ರವರ ಬಿಚ್ಚಿ ಕೊಳ್ಳುವ ಕತೆ 'ಕುಜ'. ಋಗ್ಣ ಶಯ್ಯದಲ್ಲಿರುವ ವ್ಯಕ್ತಿಯು ದೈವಿ ಸುಖವೆಂಬ ಭ್ರಮೆಯಲ್ಲಿ ಆಲಿಂಗನಕ್ಕೆದುರಾಗುವುದು, ಬೆತ್ತಲೆಯಿಂದ ಭ್ರಮೆ ಕಳೆದು ಕೊಳ್ಳ ಬೇಕೆಂಬ ಬಿಡುಗಡೆ ಭಾವ....,

Read More...

ಭಾವಾಂದೋಲನದ ಪ್ರತೀಕವೇ 'ತಪ್ತ'

ವ್ಯಾಸರ ಕತೆಗಳಲ್ಲಿ ಬರುವ ಸಾವುಗಳು ಹಲವಾರು ಅರ್ಥದಲ್ಲಿ ಬದುಕುವ ಛಲವನ್ನು ಪ್ರತಿನಿಧಿಸುತ್ತವೆ . ಯಾರನ್ನೂ ಬಿಡದ, ಸದಾ ಕಾಡುವ ವಿಷಾದದಿಂದ ಪಾರಾಗುವ ತಂತ್ರವನ್ನು ವಿಷಾದದಿಂದಲೇ ಬಗೆದು ತೋರಲು ವ್ಯಾಸರು ಸದಾ ತಮ್ಮ ಕಥಾ ಕೃಷಿಯಲ್ಲಿ ತಪೋನಿರತರಾಗಿರುತ್ತಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಪ್ರಕಾಶಿಸುವ ನಿಮಿತ್ತ ಋಣಿಯಾಗಿದ್ದಾರೆ. ಲಕ್ಷ್ಮೀಶ ತೋಳ್ಪಾಡಿಯವರ ಕೆಲವು ಟಿಪ್ಪಣಿಗಳು ಮುನ್ನುಡಿಯಾಗಿವೆ. ಡಾ.ವರದರಾಜ ಚಂದ್ರಗಿರಿ ' ತಪ್ತ ' ಸಂಕಲನದ ಬಗ್ಗೆ ಎರಡು ಮಾತು ನಿವೇದಿಸಿಕೊಂಡಿದ್ದಾರೆ.

Read More...

ಮುಕ್ತಗೊಂಡ 'ಸ್ನಾನ' 

'ಸ್ನಾನ' ಮೈಲಿಗೆಯ ಸಂಕೇತವೆನಿಸಿದರೂ ಆಧ್ಯಾತ್ಮಿಕ ಸೂಕ್ಷ್ಮತೆಯನ್ನು ಗುರುತಿಸಬಹುದಾದ ಕಥಾ ಹಂದರ...! ಕುಂಡಲಿನಿ ಯೋಗದ ಸಾರವನ್ನು ಸತ್ಯನ ಪಾತ್ರದಲ್ಲಿ ಸಾಕ್ಷಾತ್ಕರಿಸಿದ್ದಾರೆ. ಮಠದ ಸ್ವಾಮಿಗಳಾದವರ ಆಂತರಿಕ ತುಮುಲ ತಲ್ಲಣಗಳ ಚಿಕಿತ್ಸಾತ್ಮಕ ವಿವರಣೆಗಳು ಕುತೂಹಲಕಾರಿಯಾಗಿವೆ

Read More...