Book Watchers

ಎಲ್. ಸಿ. ಸುಮಿತ್ರ

ಜನಪ್ರಿಯ ಲೇಖಕಿ ಸುಮಿತ್ರ ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ. ತಾಯಿ ಹೊನ್ನಮ್ಮ, ತಂದೆ ಎಲ್.ಚಂದ್ರಪ್ಪಗೌಡ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿದ್ದು, ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ(ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ), ಹೂ ಹಸಿರಿನ ಮಾತು ಇವು ಸುಮಿತ್ರ ಅವರ ಪ್ರಮುಖ ಕೃತಿಗಳಾಗಿವೆ.

Articles

ಆದರ್ಶದ ಬದುಕಿನ ಅವಲೋಕನ ‘ನಾನು ಕಸ್ತೂರ್‌’

ಹದಿಮೂರು ವರ್ಷಗಳ ಕಸ್ತೂರ ಬಾ ತಮಗಿಂತ ಕಿರಿಯರಾದ ಮೋಹನ ದಾಸ್ ರನ್ನು ಮದುವೆಯಾದಾಗಿನಿಂದ ಪ್ರಾರಂಭಿಸಿ, ಮೊದಲ ಮಗ ಹರಿಲಾಲ್ ಹುಟ್ಟಿದ ಮೇಲೆ ಗಾಂಧಿಯವರು ಇಂಗ್ಲೆಂಡ್ ಗೆ ಕಾನೂನು ಕಲಿಯಲು ಹೋದಾಗ ಅನುಭವಿಸಿದ ಒಂಟಿತನ, ಆಮೇಲೆ ದಕ್ಷಿಣ ಆಫ್ರಿಕಾದ ಬದುಕು, ಹೋರಾಟ, ಅಲ್ಲಿದ್ದಾಗ ಗಾಂಧಿಯವರ ವ್ಯಕ್ತಿತ್ವ, ರೂಪುಗೊಂಡ ಬಗೆ, ತಮ್ಮ ಮೇಲೆ ಆದ ಪರಿಣಾಮ, ಬಹಳ ಸೂಕ್ಷ್ಮವಾಗಿ ಕಸ್ತೂರ ಬಾ ಅವರೇ ಹೇಳುತ್ತಿದಾರೆ ಎಂಬಂತಹ ನಿರೂಪಣೆ.

Read More...