Book Watchers

ಲಕ್ಷ್ಮಣ ಕೊಡಸೆ

ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.

Articles

ಸ್ತ್ರೀವಾದಿ ನೆಲೆಯಲ್ಲಿ ಸಾಹಿತ್ಯ ಪರಂಪರೆಯ ಅಧ್ಯಯನ

ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕವಾಗಿ ಉಂಟಾಗಿದ್ದ ಶರಣ ಚಳವಳಿಯ ಹಿನ್ನೆಲೆಯಲ್ಲಿ ಸ್ತ್ರೀವಾದಿ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಿದ ಲೇಖನ `ಮುಕ್ತಾಯಕ್ಕ ಮತ್ತು ಅನುಭವ', `ಮಹಿಳೆ-ಅಂದು ಇಂದು', `ಜನಪದ ಸಾಹಿತ್ಯದಲ್ಲಿ ಮಾತೃತ್ವದ ಪರಿಕಲ್ಪನೆ', `ವಚನ ಸಾಹಿತ್ಯ ಮತ್ತು ಜಾತಿ ಪದ್ಧತಿ' ಲೇಖನಗಳು ಅಪಾರ ಓದಿನ ಹಿನ್ನೆಲೆಯಲ್ಲಿ ನಿರೂಪಿತವಾಗಿವೆ. ಈ ಒಂದೊಂದು ವಿಷಯದ ವ್ಯಾಪ್ತಿ ಅಗಾಧವಾಗಿದ್ದರೂ ತಮ್ಮ ಉದ್ದೇಶಕ್ಕೆ ಬೇಕಿರುವಷ್ಟನ್ನು ಅಡಕವಾಗಿ ಸಂಗ್ರಹಿಸಿಕೊಳ್ಳುವ ಕೌಶಲ್ಯವನ್ನು ಲೇಖಕಿ ಇಲ್ಲಿ ಪ್ರದರ್ಶಿಸಿದ್ದಾರೆ.

Read More...