Book Watchers

ಲಕ್ಷ್ಮೀದೇವಿ ಪತ್ತಾರ

ವೃತ್ತಿಯಲ್ಲಿ ಶಿಕ್ಷಕರಾಗಿರುವ ಲಕ್ಷ್ಮೀದೇವಿ ಪತ್ತಾರ ಅವರು ಸಾಹಿತ್ಯಾಸಕ್ತರು, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಕತೆ, ಕವಿತೆ ಲೇಖನಗಳನ್ನು ಹಲವು ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಶಸ್ಸಿನ ದಾರಿದೀ ಆಗೂ ಕತ್ತಲಿಗಂಟಿದ ಬೆಳಕು ಇವರು ರಚಿಸಿದ ಕೃತಿಗಳು. ಇವರಿಗೆ ಕಾವ್ಯ ಮಾಣಿಕ್ಯ ರಾಜ್ಯಪ್ರಶಸ್ತಿ, ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

Articles

ಸಂಗೀತ ಲೋಕಕ್ಕೆ ಕರೆದೊಯ್ಯುವ ಅದ್ಭುತ ಕೃತಿ `ಏನು ಜನ! ಎಂಥ ಗಾನ!

ಏನು ಜನ! ಎಂಥ ಗಾನ! ಸಂಗೀತ ಲೋಕಕ್ಕೆ ಕರೆದೊಯ್ಯುವ ಅದ್ಭುತ ಕೃತಿ. ಪ್ರಾರಂಭದಲ್ಲಿ ಇವರು ಬರೆದ “ಹೇ ಸ್ವರಧಮಲ ಧಾರವಾಡ” ಧಾರವಾಡ ಜಿಲ್ಲೆಯವಳಾದ ನನಗೆ ತುಂಬಾ ಅಪ್ಯಾಯಮಾನವಾಗಿ ಕಂಡಿತು. ಮೊದಲೇ ಧಾರವಾಡದ ಬಗ್ಗೆ ಅತೀವ ಪ್ರೀತಿ, ಅಭಿಮಾನವಿರುವ ನನಗೆ ಈ ಕೃತಿ ಓದಿದ ಮೇಲೆ ಮತ್ತಷ್ಟು ಅಭಿಮಾನ ,ಹೆಮ್ಮೆ ಮೂಡಿತು. ಕಾರಣ ಗಜೇಂದ್ರಗಡಕರರವರು ಧಾರವಾಡದ ಪ್ರತಿಭಾವಂತ, ಜಗತ್ಪ್ರಸಿದ್ಧ ಸಂಗೀತಗಾರರಾದ ಭೀಮಸೇನ ಜೋಸಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗೂರು ಮಲ್ಲಿಕಾರ್ಜುನ ಮನ್ಸೂರ್, ಅಲ್ಲದೆ ವರಕವಿ, ಚಿಂತಕ, ದ.ರಾ.ಬೇಂದ್ರೆಯವರ ಬಗ್ಗೆ ನಮಗೆ ಗೊತ್ತಿಲ್ಲದ ಅಪರೂಪದ ಘಟನೆಗಳ ಜೋತೆಗೆ ವ್ಯಕ್ತಿ ಶ್ರೇಷ್ಟತೆ, ಗುಣ ವಿಶೇಷತೆಗಳನ್ನು ಬರೆದಿರುವುದನ್ನು ಈ ಕೃತಿಯಲ್ಲಿ ಕಾಣುತ್ತೇವೆ. ಅಲ್ಲದೆ ಈ ಎಲ್ಲ ಪ್ರಸಿದ್ಧ ಗಾಯಕರು ಹಾಡುವ ರಾಗಗಳ ಬಗ್ಗೆ ಜೀವನ ಶೈಲಿ ಬಗ್ಗೆ ಮನೋಜ್ಞವಾಗಿ ಬರೆದಿದ್ದಾರೆ. 

Read More...