Book Watchers

ಮಧು ಬಿರಾದಾರ

ಮಧು ಬಿರಾದಾರಾ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸುಸಲಾದ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ, ’ಜಾಗತಿಕ ಕಾವ್ಯದ ಕನ್ನಡ ಅನುವಾದಗಳು: ತಾತ್ವಿಕ ಅಧ್ಯಯನ’ ವಿಷಯ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಸಂಚಯ‌ ಮತ್ತು ಸಂಕ್ರಮಣ ಕಾವ್ಯ ಬಹುಮಾನ ಹಾಗೂ ಕ್ರೈಸ್ಟ್ ಕಾಲೇಜ್ ದ.ರಾ. ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆರು ಭಾರಿ ಬಹುಮಾನಿತರು. ಅವರ ಹಲವಾರು ಲೇಖನಗಳು ಕನ್ನಡ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ.

Articles

'ಥಟ್ ಅಂತ ಬರೆದು ಕೊಡುವ ರಸೀದಿಯಲ್ಲ ಕವಿತೆ'- ಒಂದು ಓದು

ತನ್ನ ಕಾಲದ ವರ್ತಮಾನದ ಬೆಂಕಿ ಉಂಡೆಗೆ ಉರಿಯದೆ ಬೆಳಗುವವನು. ಅಪಾರ ಸಮಚಿತ್ತತೆ, ತಾಳ್ಮೆ ಕಾವ್ಯದ ಸಾಲುಗಳಲ್ಲಿ ಎದ್ದು ಕಾಣುತ್ತವೆ. ಮಧುರಚೆನ್ನರ ನೆಲದ ಈ ಕವಿಯ ಕಾವ್ಯದಲ್ಲಿ ದೇಶಿಯ ಶಬ್ಧ ಲಯಗಳ ಬಗೆಬಗೆಯ ಪ್ರಯೋಗಶೀಲತೆ  ಕಾಣಬಹುದು.

Read More...