Book Watchers

ಮಾರುತಿ ದಾಸಣ್ಣವರ

ಕವಿ ಮಾರುತಿ ದಾಸಣ್ಣವರ ಬೆಳಗಾವಿ ಜಿಲ್ಲೆಯ ಗೋಕಾವಿ ತಾಲೂಕಿನ ಹೊಸಹಟ್ಟಿ ಗ್ರಾಮದವರು. ವೃತ್ತಿಯಿಂದ ಶಿಕ್ಷಕರು. ಸಾಹಿತ್ಯ ಓದು, ಬರವಣಿಗೆಯಲ್ಲಿ ಅಪಾರ ಆಸಕ್ತಿ. ಉತ್ತಮ ವಾಗ್ಮಿಯೂ ಆದ ಅವರ ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳು, ಚಿಂತನೆಗಳೂ ಸೇರಿದಂತೆ 23ರೇಡಿಯೊ ಕಾರ್ಯಕ್ರಮಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇತ್ತಿಚಿನ ದಿನಗಳಲ್ಲಿ ವಿಮರ್ಶೆಗೂ ಮುನ್ನಡಿ ಇಟ್ಟಿದ್ದಾರೆ. ಅವರ ’ಮಬ್ಬುಗತ್ತಲೆಯ ಮಣ್ಣ ಹಣತೆ’ ಕಥಾ ಸಂಕಲನ ಮತ್ತು ಎರಡು ಕವನ ಸಂಕಲನ ಪ್ರಕಟಣೆ ಕಂಡಿವೆ.

Articles

ಕನ್ನಡ ಕಥಾ ಸಾಹಿತ್ಯದ ಭರವಸೆ `ಫೂ ಮತ್ತು ಇತರ ಕಥೆಗಳು’

ಇಲ್ಲಿನ ಕಥೆಗಳನ್ನು ಕಥೆಗಾರ ಹೇಳಿದ್ದಾನೆನ್ನುವುದಕ್ಕಿಂತ ಕಥೆಗಳೇ ಕಥೆಗಾರನಿಂದ ಹೇಳಿಸಿಕೊಂಡಿವೆ ಎನಿಸಿಬಿಡುವಷ್ಟು ಸಹಜವಾಗಿದೆ ನಿರೂಪಣೆ. ತಂತ್ರದ ಭಾರಕ್ಕೆ ಕುಗ್ಗದೇ ವಿಡಂಬನಾತ್ಮಕ ಹಾಸ್ಯದ ದಾರದಲ್ಲಿ ಸನ್ನಿವೇಶಗಳನ್ನು ಪೋಣಿಸಿದ ನೈಪುಣ್ಯತೆ ಅಚ್ಚರಿ ಮೂಡಿಸುತ್ತದೆ.

Read More...

ರಾಧೆಯ ಮಾಯದ ಗಾಯಗಳು ‘ದಾಹಗಳ ಮೈ ಸವರುತ್ತಾ’

ಮೊದಲ ಕವಿತೆಗಳಲ್ಲಿರಬಹುದಾದ ಆವೇಶದ ತೀವ್ರತೆ ಇದೆಯಾದರೂ ಅದು ಸಂಯಮದ ಕೊರತೆಯೆಂದೆನಿಸುವುದಿಲ್ಲ. ಮತ್ತೊಮ್ಮೆ, ಇನ್ನೊಮ್ಮೆ ಓದಬೇಕೆನಿಸುವ, ಹೊಟ್ಟೆಕಿಚ್ಚಾಗುವಷ್ಟು ಚೆಂದ ಬರೆಯುವ ರಮ್ಯ ಅವರ ಕವಿತೆಗಳು ತಮ್ಮ ಆರ್ದ್ರತೆಯಿಂದ ತುಂಬಾ ಕಾಡುತ್ತವೆ. ಬಹುಶಃ ಇದೇ ಕವಿತೆಯ ನಿಜವಾದ ಶಕ್ತಿ.

Read More...

ಓದುಗರನ್ನು ಸೆಳೆಯುವ ‘ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು’

ರಾಘವೇಂದ್ರ ಖಾಸನೀಸರ `ತಬ್ಬಲಿಗಳು', ಚಿತ್ತಾಲರ `ಕತೆಯಾದಳು ಹುಡುಗಿ', ಆನಂದರ `ನಾ ಕೊಂದ ಹುಡುಗಿ', ನಿರಂಜನರ `ಕೊನೆಯ ಗಿರಾಕಿ', ಹೀಗೇ ಹಚ್ಚೆಯಂತೆ ಹಸಿರಾಗಿ ಉಳಿದುಬಿಡಬಲ್ಲ ಬಹುತೇಕ ಕಥೆಗಳು ಈ `ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಕಥಾಸಂಕಲನದಲ್ಲಿವೆ.

Read More...