Book Watchers

ಮುನವ್ವರ್ ಜೋಗಿಬೆಟ್ಟು

ಊರು ಉಪ್ಪಿನಂಗಡಿ ಪಟ್ಟಣಕ್ಕೆ ಸಮೀಪ ಜೋಗಿಬೆಟ್ಟು . ಇಷ್ಟದ ಲೇಖಕ ತೇಜಸ್ವಿ ಮತ್ತು ಹಳ್ಳಿ ಸೊಗಡಿನಲ್ಲೇ ಬೆಳೆದಿದ್ದರಿಂದ ಪ್ರಾಣಿ ಪ್ರಪಂಚ, ಪರಿಸರದ ಬಗ್ಗೆ ವಿಶೇಷ ಕಾಳಜಿ. ಪ್ರಸ್ತುತ ಕೆಂಡ ಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ' ಪರಿಸರ ಕಥನ' ಅಂಕಣಗಳು ಬರೆಯುತ್ತಿದ್ದಾರೆ. ಇವರ ' ಮೊಗ್ಗು' ಮತ್ತು ' ಇಶ್ಖಿನ ಒರತೆಗಳು' ಕವನ ಸಂಕಲನ ಬಿಡುಗಡೆಯಾಗಿದೆ.ಇವರ ಲೇಖಕನ, ಕಥೆ , ಕವಿತೆಗಳು ಪ್ರಜಾವಾಣಿ, ವಾರ್ತಾ ಭಾರತಿ, ವಿಶ್ವವಾಣಿ ಮತ್ತು ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿರುತ್ತದೆ.

Articles

ಕಾಡುವ 'ಮಲೆ‌ನಾಡಿನ ರೋಚಕ ಕಥೆಗಳು'

ಕೆಂಪು ಕಂಡರೆ ಎಗರಾಡುವ ' ಲಕ್ಷ್ಮಿ' ಎಂಬ ದನ ಮತ್ತು ಅಮ್ಮ,  ತದ್ವತ್ತಾಗಿ ನಮ್ಮನೆಯಂತೆ ಹೋಲುತ್ತದೆ. ಕಾಡ ಮಧ್ಯೆ ಕರು ಹಾಕಿದ ನಮ್ಮ ದನ ಹುಡುಕಿ ತರಲು ಹೋದ ನಮ್ಮನ್ನಟ್ಟಿಸಿಕೊಂಡ ಬಂದ ದನ, ಅಮ್ಮನೆದುರು ಮುಗ್ಧ ಮಗುವಿನಂತೆ ಶಾಂತವಾದದ್ದು ನೆನೆಯುವಾಗ‌ ಅದೇ ನೆನಪುಗಳನ್ನು ಸರಿದೂಗಿಸುತ್ತದೆ.

Read More...

ಓದುಗರೂ 'ಗುಣಮುಖ'ರಾಗಬಹುದು

ನಾದಿರ್ ನಿಜಕ್ಕೂ ಹುಚ್ಚನಾಗಿದ್ದಾನಾ? ಹುಚ್ಚನಾದವನು ಪ್ರಬುದ್ಧನಾಗಿ ಮಾತನಾಡಬಲ್ಲನೇ? ಎಂಬಷ್ಟು ಆಳಕ್ಕೆ ಕೊಂಡೊಯ್ಯುತ್ತದೆ. ನೇಪಥ್ಯದಲ್ಲಿದ್ದ ಈ ಬಿಡಿ ಚರಿತ್ರೆಯೊಂದು ನಾಟಕವಾದುದೇ ಲಂಕೇಶರ ಸೋಪಜ್ಞತೆ

Read More...

ಕೌತುಕಗಳೊಂದಿಗೆ ಎದುರುಗೊಳ್ಳುವ ವಿಸ್ಮಯ ವಿಶ್ವ

ಜಗತ್ತು ಕಂಡ ಅತೀ ದೊಡ್ಡ ಜಲದುರಂತಗಳಲ್ಲೊಂದಾದ ಟೈಟಾನಿಕ್ ಅಂತ್ಯ ಕಣ್ಣಿಗೆ ಕಟ್ಟಿದಂತೆ ಸವಿವರವಾಗಿದೆ. ಬಂದರು ಬಿಡುವ ಮೊದಲೇ ಗತ್ತು ಗೈರತ್ತುಗಳಿಂದ 'ಮುಳುಗಲು ಸಾಧ್ಯವಿಲ್ಲದ ಪಟ್ಟಣವೆಂದು' ಬೀಗಿದ ಅಹಂಕಾರದ ನುಡಿಗಳ್ಯಾವುವೂ ಪ್ರಕೃತಿ ವಿಕೋಪಕದ ಮುಂದೆ ಹೇಳ ಹೆಸರಿಲ್ಲದೆ ಸಮಾಧಿಯಾಗುವುದ ಭೀಭತ್ಸ ಚಿತ್ರಣ. ನುರಿತ ಕ್ಯಾಪ್ಟನ್ಗಳು ಭೀಮಕಾರದ ಮಂಜು ಗಡ್ಡೆಗಳ ಎದುರು ಕಿಂಕರ್ತವ್ಯಮೂಢರಾಗುವುದನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

Read More...

ದೇವರೇಕೆ ದಾರಿ ತಪ್ಪಿಸಿದನು? 

ಪುಸ್ತಕ ಓದುತ್ತಾ, ಮಂಜುನಾಥರು ನಮ್ಮನ್ನೇ ಕಾಳಿಂಗ ಹತ್ತಿಸಿ ಬಿಡುತ್ತಾರೆ. ಮುಂದೆ ಹೋದಂತೆ ನಮಗೂ ಕಥೆ ಹೇಳುತ್ತಾ ಅಲ್ಲೆಲ್ಲಾ ಸುತ್ತಾಡಿಸಿ ಬರುತ್ತಾರೆ. "ನೀವು ಕಾಳಿಂಗನನ್ನು ಓಡಿಸಿ, ನಾನು ಹಿಂದೆ ಕುಳಿತು ಕಥೆ ಹೇಳುತ್ತೇನೆ "ಎನ್ನುವಾಗ  ವಿಕ್ರಮಾದಿತ್ಯನ ಬೆಂಬಿಡದ ಬೇತಾಳದ ನೆನಪಾಗುತ್ತದೆ. ಕನಸುಗಳು ಅದ್ಭುತವಾಗಿ ಅವರಿಗೆ ಕೊನರಿದೆ, ಬಲಿತು ಹೂವಾಗಿ ಕಾಯಿಯಾಗಿದೆ. ಅನುಭವಗಳು ಅವರ ತಿಜೋರಿಯಲ್ಲಿ ದಟ್ಟವಾಗಿದೆ.

Read More...

ನಾನು ಸನ್ಯಾಸಿಯಾಗಲು ಹೊರಟಿದ್ದೆ

ಪುಸ್ತಕ ಓದಿ ಮುಗಿಸಿದಂತೆ ಕನ್ನಡಕ್ಕೊಬ್ಬ ಪ್ರತಿಭಾವಂತ ಬರಹಗಾರರು ಸಿಕ್ಕಿದರೆಂಬ ಖುಷಿ‌ಯೊಂದು ಆವರಿಸುತ್ತದೆ. ಕೊನೆಗೊಮ್ಮೆ ಈ ಶೂನ್ಯತೆ ನಿಮಗೂ‌ ಕಾಡಬಹುದೇನೋ, ನಾನು ಸನ್ಯಾಸಿಯಾಗಲು ಹೊರಟಿದ್ದೆ ಎಂಬ ಕಥೆ ಕೇವಲ ಮುನ್ನುಡಿಯಂತೆ ಭಾಸವಾದರೂ, ಎಲ್ಲೂ ಕಥೆಯ ಮೂಲವಾಗುವುದೇ ಇಲ್ಲ

Read More...

With us

Top News
Exclusive
Top Events