Book Watchers

ಮುನವ್ವರ್ ಜೋಗಿಬೆಟ್ಟು

ಊರು ಉಪ್ಪಿನಂಗಡಿ ಪಟ್ಟಣಕ್ಕೆ ಸಮೀಪ ಜೋಗಿಬೆಟ್ಟು . ಇಷ್ಟದ ಲೇಖಕ ತೇಜಸ್ವಿ ಮತ್ತು ಹಳ್ಳಿ ಸೊಗಡಿನಲ್ಲೇ ಬೆಳೆದಿದ್ದರಿಂದ ಪ್ರಾಣಿ ಪ್ರಪಂಚ, ಪರಿಸರದ ಬಗ್ಗೆ ವಿಶೇಷ ಕಾಳಜಿ. ಪ್ರಸ್ತುತ ಕೆಂಡ ಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ' ಪರಿಸರ ಕಥನ' ಅಂಕಣಗಳು ಬರೆಯುತ್ತಿದ್ದಾರೆ. ಇವರ ' ಮೊಗ್ಗು' ಮತ್ತು ' ಇಶ್ಖಿನ ಒರತೆಗಳು' ಕವನ ಸಂಕಲನ ಬಿಡುಗಡೆಯಾಗಿದೆ.ಇವರ ಲೇಖಕನ, ಕಥೆ , ಕವಿತೆಗಳು ಪ್ರಜಾವಾಣಿ, ವಾರ್ತಾ ಭಾರತಿ, ವಿಶ್ವವಾಣಿ ಮತ್ತು ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿರುತ್ತದೆ.

Articles

ನಾನು ಸನ್ಯಾಸಿಯಾಗಲು ಹೊರಟಿದ್ದೆ

ಪುಸ್ತಕ ಓದಿ ಮುಗಿಸಿದಂತೆ ಕನ್ನಡಕ್ಕೊಬ್ಬ ಪ್ರತಿಭಾವಂತ ಬರಹಗಾರರು ಸಿಕ್ಕಿದರೆಂಬ ಖುಷಿ‌ಯೊಂದು ಆವರಿಸುತ್ತದೆ. ಕೊನೆಗೊಮ್ಮೆ ಈ ಶೂನ್ಯತೆ ನಿಮಗೂ‌ ಕಾಡಬಹುದೇನೋ, ನಾನು ಸನ್ಯಾಸಿಯಾಗಲು ಹೊರಟಿದ್ದೆ ಎಂಬ ಕಥೆ ಕೇವಲ ಮುನ್ನುಡಿಯಂತೆ ಭಾಸವಾದರೂ, ಎಲ್ಲೂ ಕಥೆಯ ಮೂಲವಾಗುವುದೇ ಇಲ್ಲ

Read More...

ಜೀವಂತಿಕೆಯ ಜಗತ್ತು

ಪುಸ್ತಕದ ತುಂಬೆಲ್ಲಾ ಒಂದಿಷ್ಟು ಹಾಸ್ಯ, ಒಕ್ಕಣೆಗಳು, ಗಾದೆ, ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಐಶ್ವರ್ಯ ತುಂಬಿ ತುಳುಕುತ್ತದೆ. ಬರೆದರೆ ಹೀಗೆಯೇ ಬರೆಯಬೇಕೆಂದೂ, ಇದೇ ಶೈಲಿಯನ್ನು ಸ್ವೀಕರಿಸಬೇಕೆನಿಸುವ ನಕಲೊಂದು ಮೆದುಳಲ್ಲಿ ನಮಗರಿವಿಲ್ಲದೆ ಅಚ್ಚಾಗುತ್ತದೆ. ಒಂದು ಅಪೂರ್ವ ಪುಸ್ತಕವೊಂದು ಕೊಡ ಮಾಡಿದ್ದಕ್ಕೆ ಲೇಖಕರಿಗೂ, ಪ್ರಕಾಶಕರಿಗೂ ಋಣಿ.

Read More...

ಜಯಂತ್ ಕಾಯ್ಕಿಣಿ ಕಣ್ಣಲ್ಲಿ 'ಚಾರ್ ಮೀನಾರ್'

ಮಂಗಳೂರಿಗೆ ಬಂದ ನಂತರ ನೀರಿಗುಂಟಾದ ಅಭಾವವನ್ನು ಅನುಭವಿಸುವಾಗಲೆಲ್ಲಾ  ನಾನೊಂದು ಚಂದದ ಕಥಾ ಹಂದರದ ತಲಾಶೆಯಲ್ಲಿದ್ದೆ. ಕ್ವಚಿತ್ತಾಗಿ ಕೈಗೆ ಬಂದ ಜಯಂತ್ ಕಾಯ್ಕಿಣಿಯವರ "ಚಾರ್ ಮಿನಾರ್" ಕಥಾ ಸಂಕಲನ ಕುತೂಹಲಕ್ಕೆ ತಳ್ಳಿ ಬಿಟ್ಟಿತು.

Read More...

ಕೆನ್ನಾಯಿಯ ಜಾಡಿನಲ್ಲಿ

ಇದೊಂದು ಅನುಭವ ಕಥಾನಕ. ಯುರೋಪಿಯನ್ನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ,ಸಂಶೋಧನಾತ್ಮಕ ಪುಸ್ತಕಗಳು‌ ನಮ್ಮ ಭಾರತೀಯರೂ ಬರೆಯಲಾರಂಭಿಸುವುದು ಸಾಹಿತ್ಯ ಕ್ಷೇತ್ರದ ಕ್ಷಿಪ್ರ ಪ್ರಗತಿಯ ಅನನ್ಯತೆ. ಅಭ್ಯಸಿಸಿಕೊಂಡು, ವಿಜ್ಞಾನದ ಮಾಹಿತಿಗಳನ್ನು ರಾಶಿ ಹಾಕಿ ಓದುಗರ ಮೇಲೆ‌ ಹೇರದೆ ಬರೆಯುವ ಕೌಶಲ್ಯ‌ ಸಿದ್ಧಿಸುವುದು ಸುಲಭವಲ್ಲ. ಹಾಗೊಮ್ಮೆ ಬರೆಯಲು ಹೊರಟರೆ ಓತಪ್ರೋತ ಅನುಭವಗಳಿಂದ ಕಿರಿಕಿರಿಯಾಗಿ ಓದುಗರ ರಸಭಂಗವಾಗುವ ಸಾಧ್ಯತೆ ಇರುತ್ತದೆ

Read More...

ಅಮ್ಮ ಬರೆದ ಎರಡು ಪತ್ರಗಳು

ಈ ಪುಸ್ತಕದಲ್ಲಿರುವ ಲೇಖನಗಳೆಲ್ಲವೂ ಒಬ್ಬ ಪ್ರಬುದ್ಧ ಚಿಂತಕನಿಗೋ, ತತ್ವಜ್ಞಾನಿಗೋ , ಮನಶ್ಶಾಸ್ತ್ರಜ್ಞನಿಗೋ ಹೊಳೆಯಬೇಕಾದಂಥವುಗಳು. ಇದು ನಿಮಗೆ ಅರ್ಥವಾಗಬೇಕಾದರೆ, 'ಗಂಡಸರು ಯಾಕೆ ಅಳಬಾರದು' ಎನ್ನುವ ಲೇಖನ ನೀವು ಓದಬೇಕು.

Read More...