Book Watchers

ಮುನವ್ವರ್ ಜೋಗಿಬೆಟ್ಟು

ಊರು ಉಪ್ಪಿನಂಗಡಿ ಪಟ್ಟಣಕ್ಕೆ ಸಮೀಪ ಜೋಗಿಬೆಟ್ಟು . ಇಷ್ಟದ ಲೇಖಕ ತೇಜಸ್ವಿ ಮತ್ತು ಹಳ್ಳಿ ಸೊಗಡಿನಲ್ಲೇ ಬೆಳೆದಿದ್ದರಿಂದ ಪ್ರಾಣಿ ಪ್ರಪಂಚ, ಪರಿಸರದ ಬಗ್ಗೆ ವಿಶೇಷ ಕಾಳಜಿ. ಪ್ರಸ್ತುತ ಕೆಂಡ ಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ' ಪರಿಸರ ಕಥನ' ಅಂಕಣಗಳು ಬರೆಯುತ್ತಿದ್ದಾರೆ. ಇವರ ' ಮೊಗ್ಗು' ಮತ್ತು ' ಇಶ್ಖಿನ ಒರತೆಗಳು' ಕವನ ಸಂಕಲನ ಬಿಡುಗಡೆಯಾಗಿದೆ.ಇವರ ಲೇಖಕನ, ಕಥೆ , ಕವಿತೆಗಳು ಪ್ರಜಾವಾಣಿ, ವಾರ್ತಾ ಭಾರತಿ, ವಿಶ್ವವಾಣಿ ಮತ್ತು ಇತರ ಪತ್ರಿಕೆಗಳಲ್ಲೂ ಪ್ರಕಟವಾಗಿರುತ್ತದೆ.

Articles

ಪರ್ವತದಲ್ಲಿ ಪವಾಡ

1972ರಲ್ಲಿ ಆಂಡಿಸ್ ಪರ್ವತ ಪ್ರದೇಶದಲ್ಲಿ ಒಂದು ವಿಮಾನ ಪತನವಾದಾಗಿನಿಂದ ಆರಂಭವಾಗುವ ಕಥೆ ; ಕಥೆಗಾರನ ಆ ಬದುಕುವ ಛಲ ಮನುಷ್ಯನ ಆತ್ಮ ವಿಶ್ವಾಸದ ಗಟ್ಟಿತನಕ್ಕೆ ಸ್ಪೂರ್ತಿದಾಯಕ. ಆತ್ಮಹತ್ಯೆಯ ಪ್ರಯತ್ನದಲ್ಲಿರುವ ಯಾವನೇ ಒಬ್ಬ ವ್ಯಕ್ತಿಯನ್ನು ಬದುಕಿಗೆ ಮರಳಿಸಲು ಇದೇ ಪುಸ್ತಕವನ್ನು ಶಿಫಾರಸ್ಸು ಮಾಡಬಲ್ಲೆ. ಶೀತ ಗಾಳಿ ಮಾತ್ರವಲ್ಲ, ರೆಫ್ರಿಜರೇಟರ್ನ ತಂಪನ್ನೂ ಸಹಿಸದ ನಮ್ಮಂತವರಿಗೆ ಮಂಜಿನ ದಪ್ಪ ಪದರಗಳ ಬಗ್ಗೆ , ಅದರ ಕಷ್ಟದ ಬಗ್ಗೆ ಏನೇನೂ ಅನುಭವಕ್ಕೆ ಬಾರದು.

Read More...

ಸಾಸಿವೆ ತಂದವಳು

ಇಡೀ ಪುಸ್ತಕ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಓದಲು ಕುಳಿತ ನಾನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಲು ಬಾಕಿ.  ನನ್ನ ಪೂರ್ವಾಗ್ರಹವೆಲ್ಲಾ ಜರ್ರನೇ ಇಳಿದೇ ಹೋಗುವಂತಹ ಶೈಲಿ. ಕ್ಯಾನ್ಸರ್ ರೋಗವೊಂದರ ಹುಟ್ಟು ಮತ್ತು ಶಮನದ ಪಡಿಪಾಟಲು, ಸಂಕಟ ಮಾತ್ರವನ್ನೇ ಎದುರು ನೋಡುತ್ತಿದ್ದವನಿಗೆ ಭಾರತಿ ಅಕ್ಕ ಒಂದು ಪತ್ತೆ ದಾರಿ ಕಥೆಯಂತೆಯೇ ಓದಿಸಿ ಹಚ್ಚಿ ಬಿಟ್ಟರು. ಯಾವುದೇ ರೋಗದ ಲಕ್ಷಣಗಳನ್ನು ಓದಿದರೂ ಅದನ್ನು ನನ್ನೊಳಗೂ ಹುಡುಕಿಕೊಳ್ಳುವ ಖಯಾಲಿಗೆ ನಾನೂ ಹೊರತಾಗಿರಲಿಲ್ಲ.

Read More...

ಶಿವರಾಮ ಕಾರಂತರ ’ಮರಳಿ ಮಣ್ಣಿಗೆ’ ಕಾದಂಬರಿಯ ಓದು

ಹೇಳಿದರೆ ಸಪ್ಪೆಯಾಗಿ ಬಿಡುವ ಸಾಧಾರಣ ಕಥಾ ಪರಿಸರವೇನೋ ನಿಜ. ಆದರೆ, ಕಾರಂತರೆಂಬ ಬೆರಗು ಹುಟ್ಟಿಸುವ ಪ್ರತಿಭೆಯ ಕೈಯಲ್ಲಿ ಈ ಕೃತಿ ಅದ್ಭುತ ಕಲಾ ಕೃತಿಯಾಗಿ ಅರಳಿದೆ. ಓದುತ್ತಾ ಒಮ್ಮೆ ನನಗೆ ಹೀಗೊಂದು ಸಂಶಯ ಬಂತು. ಈ‌ ಲಚ್ಚನ ಮಗ ರಾಮ ಇದ್ದಾರಲ್ಲ, ಅವರೇ ಯಾಕೆ ಶಿವ " ರಾಮ" ಆಗಿರಬಾರದು. 'ಆಗಲಾರ' ಎಂಬ ಯಾವುದೇ ನಿರ್ಭಂಧಗಳಿಲ್ಲ. ತಮ್ಮ ಬದುಕಿನ ಅನುಭವಗಳನ್ನು ಕಾದಂಬರಿಕಾರರು ಕಥೆಗಳಲ್ಲಿ ಹೊಸ ಪಾತ್ರಗಳನ್ನಾಗಿ ಆವಾಹಿಸಿದ್ದಿದೆ.

Read More...

ಬೆಟ್ಟ ಮಹಮ್ಮದನ ಬಳಿ ಬಾರದಿದ್ದರೆ

ಈ ಪುಸ್ತಕಕ್ಕಿರುವುದು ರಾಮ ಚಂದ್ರ ಭಟ್ಟರ ಪರಿವರ್ತನೆ, ಕುಂಞಪ್ಪರ ಒಡನಾಟ ಮಾತ್ರ. ನಡುವೆ ಬದಲಾದ ರಾಮಚಂದ್ರ ಭಟ್ಟರ ಹೊಸ ಸೈದ್ಧಾಂತಿಕತೆ, ಪ್ರಬುದ್ಧ ಮಾತುಗಳೇ ಕೃತಿಯ ಬಗ್ಗೆ ಅಷ್ಟೂ ಚಿತ್ರಿತವಾಗಿರುವಂಥದ್ದು. ಆತ್ಮಗಳು ಬದಲಾಗುವಾಗ ಪವಿತ್ರಾತ್ಮವೊಂದು ತಾತ್ವಿಕವಾಗಿ ಸೇರಿ ಬಿಟ್ಟಿತೋ ಎಂದು ಸಂಶಯ ಪಡುವ ಶ್ರೀ ಲಕ್ಮೀಶ ತೋಳ್ಪಾಡಿಯರು, ತಮ್ಮ ಸಂಶಯಗಳನ್ನು ಅದೆಷ್ಟು ಕರಾರುವಕ್ಕಾಗಿ ಸಮರ್ಥಿಸುತ್ತಾರೆ .

Read More...

'ಗೀಚೆಟ್ಟೆ’ಯೊಳಗಿನ ಸಂತಸ ಮತ್ತು ಸಂಕಟಗಳು

ಆಶಿಖ್ ನನಗೊಬ್ಬ ಪತ್ರಕರ್ತನಾಗಿ ಮಾತ್ರ ಯಾರೋ ಗೆಳೆಯರು ಹೇಳಿ ಜಾಲತಾಣದಲ್ಲಿ  ಪರಿಚಯವಿದ್ದ.ಆದರೆ ಮೊನ್ನೆ ಭೇಟಿಯಾಗಿ ಕೇವಲ ನನಗಿಂತ ಎರಡು ವರ್ಷಕ್ಕೆ ಚಿಕ್ಕವನೆಂದು ಹೇಳಿಕೊಂಡು ದಿಗಿಲಿಕ್ಕಿಸಿದ. ಅವನ ವಯಸ್ಸು ಕವಿತೆಯ ಪ್ರಬುದ್ಧತೆಗೇನೂ ಹಾನಿ ಮಾಡಿಲ್ಲ. ಸಾಕ್ಷಾತ್ ಬದುಕಿನ ಡೈರಿಯೊಂದರಿಂದ ಬಿದ್ದು ಸಿಕ್ಕಿದಂತಹ ಕವಿತೆಗಳವು. ಒಂದಿಷ್ಟು ಖುಷಿ, ನೋವು, ಹತಾಷೆ, ಮಮತೆಗಳ ರಾಶಿ ಗುಚ್ಫ.

Read More...