Book Watchers

ನಾಗರಾಜ ಷಣ್ಮುಖಪ್ಪ ರಂಗನ್ನವರ

ನಾಗರಾಜ ಷಣ್ಮುಖಪ್ಪ ಅವರು ಬಾಗಲಕೋಟೆಯ ತಳಗಿಹಾಳದವರು. ನಿರಂತರ ಓದಿನ ಆಸಕ್ತಿ. ಸದಾ ಒಂದಿಲ್ಲೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರವಾಸ, ಚಿತ್ರಕಲೆ, ಸಂಗೀತದ ಹವ್ಯಾಸವುಳ್ಳವರು. ಓಶೋ, ಕೃಷ್ಣಮೂರ್ತಿ, ಗುಲ್ಜಾರ್‌, ತೇಜಸ್ವಿ, ಜೋಗಿ, ಬೈರಪ್ಪ, ಹೆಮಿಂಗ್ವೆ, ಕೇಶವ ಮಳಗಿ ಅವರ ನೆಚ್ಚಿನ ಲೇಖಕರು. ಸಾಹಿತ್ಯವನ್ನು ಬಹುವಾಗಿ ಪ್ರೀತಿಸುವ ಅವರು ಗುಲ್ಜಾರ್‌ರ ’ಲ್ಯಾಂಡ್‌ ಸ್ಕೇಪ್, ಪೇಟಿಂಗ್‌, ಹೂ ಕಂಪನ’, ಓಶೋರ ’ಒಂದು ಕಪ್ ಚಹಾ’ ಮುಂತಾದ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಪುಸ್ತಕ ವಿಮರ್ಶೆ ಬರೆಯುವುದರಲ್ಲೂ ಸಕ್ರಿಯರು.

Articles

ಆಡು ಕಾಯೋ ಹುಡುಗನ ದಿನಚರಿ

ಬಾಲ್ಯದ ಲೀಲೆಗಳನ್ನು ಗೊರವರ ತಮ್ಮ ಪದಗಳಲ್ಲಿ ಹೇಳುವುದಾದರೆ.... "ನಾನು ಕ್ಲಾಸು ತಪ್ಪಿಸುತ್ತಿರುವುದನ್ನು ನಿಮ್ಮಪ್ಪನಿಗೆ ಹೇಳುತ್ತೇನೆಂದು ಪಕ್ಕದ ಮನೆಯ 'ಹಚುಗ' ಗೆಳೆಯ ಧಮ್ಕಿ ಹಾಕ್ತಿದ್ದ. ಚೊಣ್ಣದ ಜೇಬಿನ ತುಂಬಾ ತುಂಬಿಕೊಂಡು ಬಂದಿರುತ್ತಿದ್ದ ಬಾರಿಹಣ್ಣನ್ನು ಅವನಿಗೆ ಕೊಟ್ಟು ಅವನ ಪ್ರಾಮಾಣಿಕತೆಯನ್ನು ಕೊಂಡುಕೊಳ್ಳುತ್ತಿದ್ದೆ..."

Read More...

ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

ಅದಾವ ಮೌಲ್ಯಗಳನ್ನು ಟಾಲ್‌ಸ್ಟಾಯ್‌ ಪ್ರತಿಪಾದಿಸಿದ್ದರೋ, ಅವು ಗಾಂಧಿಯವರನ್ನೂ ಪ್ರಭಾವಿಸಿ ಮಹಾತ್ಮನನ್ನಾಗಿಸಿದವು. ತಮ್ಮ ಸಾಹಿತ್ಯ, ಮಿಲಿಟರಿ ಸೇವೆ, ಶೈಕ್ಷಣಿಕ ಪ್ರಯೋಗ, ರೈತರ ಚಳವಳಿ, ಭೂಸುಧಾರಣೆ, ಆಧ್ಯಾತ್ಮ, ಕ್ರಾಂತಿ ಇತರೆ ಕ್ಷೇತ್ರಗಳಲ್ಲಿ ಅವರು ಗಣನೀಯ ಬದಲಾವಣೆ ಮಾಡಿದರು.

Read More...