Book Watchers

ಪಿ. ಆರಡಿಮಲ್ಲಯ್ಯ ಕಟ್ಟೇರ

ವೃತ್ತಿಯಿಂದ ಉಪನ್ಯಾಸಕರಾಗಿರುವ ಪಿ. ಆರಡಿಮಲ್ಲಯ್ಯ ಕಟ್ಟೇರ ಅವರು ಯುವ-ಉತ್ಸಾಹಿ ವಿದ್ವಾಂಸರು. ಖಚಿತ ವೈಚಾರಿಕ ನಿಲುವು, ನೇರ ನುಡಿ-ಬರವಣಿಗೆ ಅವರ ವಿಶೇಷ. ಚಳ್ಳಕೆರೆ ತಾಲ್ಲೂಕಿನ ಓಬಯ್ಯನಹಟ್ಟಿಯ ಕಟ್ಟೇರಕಪ್ಲೆಯಲ್ಲಿ ಪರ್ವತಯ್ಯ ಮತ್ತು ಪಾಲಮ್ಮ ಮಗನಾಗಿ ಜನನ. ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೂರನೆಯ ರ್‍ಯಾಂಕ್ ಪಡೆದಿದ್ದು ’ನೀರಗನ್ನಡಿ, ಗಗ್ಗರಿ ನುಡಿಸುವ ಬೆರಳು’ ಎಂಬ ಎರಡು ಕವನ ಸಂಕಲನಗಳು ಪ್ರಕಟವಾಗಿವೆ. ಕುವೆಂಪು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳು ಭಾಷೆಯ ಕುರಿತ ಎರಡು ಲೇಖನಗಳನ್ನು ಪದವಿಗೆ ಪಠ್ಯವಾಗಿಸಿವೆ.

Articles

ಕಪ್ಪು ಕುಲುಮೆ: ವಿಶ್ಲೇಷಣಾತ್ಮಕ ನೋಟ

ವರ್ಗರಹಿತ ಆರ್ಥಿಕ ಪ್ರಜಾಪ್ರಭುತ್ವ, ಡಗ್ಲಾಸ್‌ನ ಆಶಯವಾಗಿತ್ತು. ಡಗ್ಲಾಸ್ ಬಯಸುವ ಸ್ವಾತಂತ್ರ್ಯ ಮತ್ತು ಸುಭದ್ರತೆಯು ಸಾಮಾಜಿಕ ಮಾನ್ಯತೆಯ ಮೂಲದಿಂದ ಉದಯಿಸಿ ರಾಜಕೀಯಾರ್ಥಿಕ ಕ್ಷೇತ್ರಗಳಿಗೆ ವಿಸ್ತರಿಸುತ್ತದೆ.

Read More...

ಕಾರಂತಜ್ಜನ ನೆನಪಿಗೆ 'ಯಕ್ಷಗಾನ ಬಯಲಾಟದ ಸುತ್ತಮುತ್ತ'

ಶಿವರಾಮ ಕಾರಂತರ ಪುಸ್ತಕದ ದೃಷ್ಟಿಕೋನವನ್ನು ವಿದ್ವಾಂಸರು ಇಮ್ಮುಖವಾಗಿ ಗಮನಿಸಿದ್ದಾರೆ. ನಿರೀಕ್ಷೆಗೂ ಮೀರಿ ಜನಪ್ರಿಯವಾದರೂ ಅದರಲ್ಲಿನ ಮಿತಿಗಳನ್ನು ಕಡೆಗಣಿಸದ ಅನೇಕರು  ಈ ಕೃತಿಯ ವಸ್ತುನಿಷ್ಟತೆಯನ್ನು ಪ್ರಶ್ನಿಸಿದ್ದಾರೆ. ಪ್ರಾದೇಶಿಕ ಮತ್ತು ಮೈತ್ರಿಯ ಪೂರ್ವಾಗ್ರಹದ ಛಾಯೆ ಕೃತಿಯಲ್ಲಿ ಢಾಳಾಗಿ ಕಂಡು ಬರುವುದನ್ನು ಯಾರೂ ಕಡೆಗಣಿಸಲಾರರು. ಶುದ್ದಕಲೆಯ ಮೂಲಮಾಪನದ, ರಸನಿಷ್ಟತೆಯ ದೃಷಿಕೋನದಲ್ಲಿರುವ ಮಿತಿಗಳು ಕೃತಿಯಲ್ಲಿವೆ

Read More...