Book Watchers

ಪ್ರಸನ್ನ ಸಂತೇಕಡೂರು

ಪ್ರಸನ್ನ ಸಂತೇಕಡೂರು ಸಮಕಾಲೀನ ಕನ್ನಡ ಕಥೆಗಾರ ಹಾಗೂ ವಿಜ್ಞಾನಿ. ಇವರು ಮೂಲತಃ ಶಿವಮೊಗ್ಗ ಸಮೀಪದ ಸಂತೇಕಡೂರಿನವರು. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ವಿಜ್ಞಾನದ ಜೊತೆಗೆ ಸಾಹಿತ್ಯದಲ್ಲಿಯೂ ಕೂಡ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ ಇವರು "ಮಾಯಾಪಂಜರ" ಮತ್ತು "ಎತ್ತಣ ಅಲ್ಲಮ ಎತ್ತಣ ರಮಣ?" ಎರಡು ಕೃತಿಗಳನ್ನು ಹೊರತಂದಿದ್ದಾರೆ.

Articles

ಪ್ರಯೋಗಾತ್ಮಕ ಒಂದು ದೃಶ್ಯ ಮೂರು ಸ್ಪರ್ಶದ ‘ಕಾಗೆ’

ಈ ಕಥಾಸಂಕಲನ ತುಂಬಾ ಪ್ರಯೋಗಾತ್ಮಕವಾದದ್ದು. ಹಿಂದೆ ಪುಟ್ಟಣ್ಣ ಕಣಗಾಲರು ಗಿರಡ್ಡಿ ಗೋವಿಂದರಾಜು, ವೀಣಾ ಶಾಂತೇಶ್ವರ ಮತ್ತು ಈಶ್ವರ ಚಂದ್ರರ ಮೂರು ಕತೆಗಳನ್ನು ಸೇರಿಸಿ ಕಥಾಸಂಗಮ ಎಂಬ ಚಲನಚಿತ್ರ ಮಾಡಿದ್ದರು. ಈ ಕಥಾಸಂಕಲನವು ನಮಗೆ ಆ ಪ್ರಯತ್ನವನ್ನು ಜ್ಞಾಪಕ ತರುತ್ತದೆ.

Read More...

“ಹಿಜಾಬ್” ಕಾದಂಬರಿ ಎರಡು ಮಾತುಗಳು

ಕಾದಂಬರಿಯ ವಸ್ತು ಮಾತ್ರವಲ್ಲ ಅದನ್ನು ನಿರೂಪಿಸುವುದರಲ್ಲಿಯೂ ಲೇಖಕರು ಗೆದ್ದಿದ್ದಾರೆ. ಮಿನೊಸೊಟ ಅಮೆರಿಕಾದ ದೇಶದ ಉತ್ತರ ಭಾಗಕ್ಕೆ ಬರುವ ಸಾವಿರ ಸರೋವರಗಳ ನಾಡು ಎಂದು ಕರೆಯಲ್ಪಡುವ ರಾಜ್ಯ. ಅಲ್ಲಿನ ಒಂದು ಅಮೋಕ ಎಂಬ ಚಿಕ್ಕ ಪಟ್ಟಣದಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸುವ ಬೇರೆ ಬೇರೆ ಘಟನೆಗಳನ್ನು ಸೇರಿಸಿ ಆಧುನಿಕ ಜಗತ್ತಿನ ಬಹು ದೊಡ್ಡ ಸಮಸ್ಯೆಯನ್ನು ಕಾದಂಬರಿಯಾಗಿ ಅದ್ಭುತವಾಗಿ ಚಿತ್ರಿಸುವಲ್ಲಿ ಕೂಡ ಲೇಖಕರು ಯಶಸ್ವಿಯಾಗಿದ್ದಾರೆ.

Read More...