Book Watchers

ರಾಜು ಹಗ್ಗದ

ವೃತ್ತಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಆಗಿರುವ ರಾಜು ಹಗ್ಗದ ಅವರಿಗೆ ಓದು ನೆಚ್ಚಿನ ಹವ್ಯಾಸ. ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಇಣಚಗಲ್‌ ಗ್ರಾಮದವರು. ತಮ್ಮ ನಿರಂತರ ಓದು, ಸಾಹಿತ್ಯ ರಚನೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇತ್ತಿಚೆಗೆ ಕೃತಿಗಳ ವಿಮರ್ಶೆಯತ್ತ ಆಸಕ್ತಿ ತೋರಿದ್ದಾರೆ.

Articles

ಅನುಭವದ ಮೂಸೆಯಲ್ಲಿ ಮೂಡಿದ ಭಾವ ‘ಗುಬ್ಬಿ ಎಂಜಲು’

ಇಲ್ಲಿನ ಪ್ರಬಂಧಗಳು ನಮ್ಮನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತವೆ, ಇನ್ನೂ ಕೆಲವು ಮಾಲ್ಗುಡಿ ಡೇಸ್ ನೆನಪಿಸುವಂತವುಗಳು, ಪಕ್ಷಿಪ್ರಪಂಚದ ಚಿತ್ರಣಗಳಿವೆ, ಅಂತಸ್ತಿಗೆ ತಕ್ಕಂತೆ ವರಹುಡುಕುವವರ ಕಥನವಿದೆ, ಕ್ಷೌರಿಕನ ಲೋಕಜ್ಞಾನದ ಮಾತುಗಳಿವೆ, ಸತಿ-ಪತಿಗಳ ಸುಂದರ ಸಂಸಾರದ ಸಿಹಿಮಾತುಗಳಿವೆ ಹೀಗೆ ತಮ್ಮ ಅನುಭವದ ಮೂಸೆಯಲ್ಲಿ ಮೂಡಿದ ಭಾವಗಳನ್ನು ಸರಳವಾಗಿ ಸುಲಲಿತವಾಗಿ ತಮ್ಮ ಪ್ರಬಂಧಗಳಲ್ಲಿ ಚಿತ್ರಿಸಿದ್ದಾರೆ‌.

Read More...

ಗ್ರಾಮೀಣ ಜನಜೀವನದ ಚಿತ್ರಣ ‘ಏಕತಾರಿ’

'ಬಾಲಕನ ಕಣ್ಣಲ್ಲಿ ಕಂಡ ಸಾವು' ಕಥೆಯಲ್ಲಿ ಬಾಲಕನ ಕಣ್ಣಲ್ಲಿ ಕಂಡ ಸಾವಿನ ಚಿತ್ರಣ ನಮ್ಮೊಳಗಿನ ಹಿಂಸಾತ್ಮಕ ಚಿತ್ರಣವನ್ನು ಚಿತ್ರಿಸುತ್ತದೆ. 'ಅಟ್ಟ' ಕಥೆಯಲ್ಲಿ ಬಾಲಕ ತನ್ನ ಅತ್ತೆಯ ಕುಬುಸದ ಕಾರಣಕ್ಕೆ ಹೋಗಬೇಕಿತ್ತು ಎಂಬ ಕೊರಗಿನಲ್ಲಿ ಅವನಲ್ಲಿ ರೂಪುಗೊಳ್ಳುವ ಭಾವಲೋಕವನ್ನು ಚಿತ್ರಿಸುತ್ತದೆ.

Read More...

ಮಕರಂಧವನ್ನು ಬೀರಿದ ‘ಮರುಭೂಮಿಯ ಹೂ’

ದಿನಗಳುರುಳಿದಂತೆ ಆ ದಿನ ಮಾರಿಸ್ ಗೂ ಬಂದಾಗ ಅವಳು ಅನುಭವಿಸಿದ ನೋವು ಯಾತನೆಗಳನ್ನು ಕೇಳಿದರೆ ಎಂಥವರೆದೆಯೂ ಅದುರುತ್ತದೆ. ಅಬ್ಬಾ! ಎರಡು ದಿನ ಮೂರ್ಚೆಹೋಗಿ ಬಿದ್ದ ಮಾರಿಸ್ ಎದ್ದು ಕಣ್ಣುಬಿಟ್ಟಾಗ ತನ್ನ ಪಕ್ಕದಲ್ಲಿರುವ ಕಲ್ಲಮೇಲೆಲ್ಲಾ ಯಾವುದೋ ಪ್ರಾಣಿಯನ್ನು ಕತ್ತರಿಸಿದಂತೆ ರಕ್ತ ಚೆಲ್ಲಿತ್ತು ಹಾಗೂ ಯೋನಿಛೇದದಿಂದ ತುಂಡಾದ ಮಾಂಸದ ತುಣುಕುಗಳು ಬಿದ್ದಿದ್ದವು

Read More...

ರೋಚಕತೆಯ ವೈಜ್ಞಾನಿಕ ಕಾದಂಬರಿ ‘ಭೂಗರ್ಭಯಾತ್ರೆ’

ಭೂಮಿಯ ಅಂತರಾಳದಲ್ಲಿ ಜಗತ್ತನ್ನು ಚಿತ್ರಿಸುತ್ತ, ಜ್ವಾಲಾಮುಖಿಯ ದ್ವಾರಗಳ ಮೂಲಕ ಪಯಣಿಸುವ ಮೂವರು ಅನೇಕ ಕಷ್ಟಗಳನ್ನು ಎದುರಿಸಿ ಭೂಗರ್ಭದ ಆಳವನ್ನು ತಲುಪುತ್ತಾರೆ. ರೋಚಕತೆಯಿಂದ ಕೂಡಿದ ಪಯಣದ ಮಾರ್ಗದಲ್ಲಿ ಅಲ್ಲಲ್ಲಿ ಅನುಭವಿಸಿದ ತಾಪತ್ರಯಗಳು, ಪ್ರಾಣವನ್ನು ಕಳೆದುಕೊಳ್ಳುವಂತ ಬಂದೊದಗಿದ ಸಂದಿಗ್ದ ಪರಿಸ್ಥಿತಿಗಳು ಮೂವರ ನಡುವೆ ನಡೆದ ಜಗಳಗಳು, ಭೂಮಿಯ ಒಳಮೇಲ್ಮೈ ಚಿತ್ರಣಗಳನ್ನು ಇಲ್ಲಿ ಕಾಣಬಹುದು.

Read More...

ವಿನೂತ ಪ್ರಯೋಗದ ‘ಎಲ್’

"ಇದು ಕಾದಂಬರಿಯಲ್ಲ, ಕಾವ್ಯ. ಇದರ ಲಯ ಕವಿತೆಯದ್ದು, ಇದು ಕಾಡುವ ತೀವ್ರತೆ ಕವನದ್ದು." ಎಂಬ ನರೇಂದ್ರ ಪೈ ಅವರ ಮಾತಿನಂತೆ ಇದು ಕಾದಂಬರಿಯಾದರೂ ಕಾದಂಬರಿ ಅಲ್ಲವೇ ಅಲ್ಲ. ಇಲ್ಲಿ ಕಾವ್ಯದ ಲಯ, ಭಾವತೀವ್ರತೆ ಇದ್ದೆ ಇದೆ. ಇದೊಂದು ವಿಭಿನ್ನ ಪ್ರಯೋಗವೇ ಸರಿ.

Read More...