Book Watchers

ರಾಜು ಹಗ್ಗದ

ವೃತ್ತಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಆಗಿರುವ ರಾಜು ಹಗ್ಗದ ಅವರಿಗೆ ಓದು ನೆಚ್ಚಿನ ಹವ್ಯಾಸ. ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಇಣಚಗಲ್‌ ಗ್ರಾಮದವರು. ತಮ್ಮ ನಿರಂತರ ಓದು, ಸಾಹಿತ್ಯ ರಚನೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇತ್ತಿಚೆಗೆ ಕೃತಿಗಳ ವಿಮರ್ಶೆಯತ್ತ ಆಸಕ್ತಿ ತೋರಿದ್ದಾರೆ.

Articles

ಮನದ ಕತ್ತಲನ್ನು ಹೊರ ಸೂಸುವ ‘ಕಂದೀಲು’

ಒಂದು ಕಾಲದಲ್ಲಿ ಕಂದೀಲು ರಂಗಪ್ಪನ ಮೂಲಕ ವಾಡೆಗೆ ಹಾಗೂ ಇಡೀ ಊರಿಗೆ ಕಾವಲಿನ ಪ್ರತೀಕವಾಗಿದ್ದರೆ ಇಂದು ಅದೇ ಕಂದೀಲಿನ ಕಮರಿದ ಬೆಳಕು ಕುಸುಮಿಯ ಹಾದರದ ಬದುಕಿಗೆ ಬೆಳಕೂ ಆಗಿತ್ತು. ಅದಕ್ಕೆ ನೋವು ವೇದನೆಯೂ ಕುಸುಮಿಯ ಎದೆಯೊಳಗಿತ್ತು.

Read More...

ಶಿಕ್ಷಕರ ಭವಣೆಯನ್ನು ತೆರೆದಿಡುವ ‘ರಂಗಣ್ಣನ ಕನಸಿನ ದಿನಗಳು’

ಎರಡು ಮೂರು ರೂಪಾಯಿ ವೇತನದಲ್ಲೇ ಎಲ್ಲವನ್ನು ನಿಭಾಯಿಸಿ ಶಾಲೆಯ ಖರ್ಚುವೆಚ್ಚಗಳನ್ನು ನಿಭಾಯಿಸಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುವುದರೊಳಗೆ ಶಿಕ್ಷಕರು ಸೋತು ಸುಣ್ಣವಾಗುತ್ತಿದ್ದರು.

Read More...

ಭಾವ ಹೊತ್ತು ನಿಲ್ಲುವ ‘ಅಕಥ ಕಥಾ’

ಕಥೆಗಳು ಒಂದಕ್ಕೊಂದು ವಿಭಿನ್ನ ಮಾದರಿಯಲ್ಲಿದ್ದು ಬದುಕಿನ ಬೇರೆ ಬೇರೆ ವಿಷಯಗಳ ಕುರಿತಾಗಿದ್ದು ಓದುಗರನ್ನು ಆವರಿಸಿಕೊಳ್ಳುತ್ತವೆ. 'ಅತಿಲೋಕಸುಂದರಿ', 'ಬಾರೋ ಗೀಜಗ' 'ನೀಲಿ ಆಕಾಶದ ಹಣ್ಣು', 'ಹೊಳೆಯ ಬದಿಯ ಬೆಳಗು' ನನಗೆ ತುಂಬಾ ಇಷ್ಟವಾದ ಕಥೆಗಳು. ಇನ್ನುಳಿದಂತೆ ಎಲ್ಲ ಕಥೆಗಳು ಬಗೆಬಗೆಯ ಭಾವ ಹೊತ್ತು ನಿಂತಿವೆ.

Read More...

ಬರೆಹಗಾರನೋದಬೇಕಾದ ‘ಓದುಗರಿದ್ದಾರೆ ಮರೆಯದಿರಿ’

'ಓದುಗ ಇಂಥದ್ದೇ ಪುಸ್ತಕ ಓದಬೇಕು ಎಂದು ನಿರ್ಧರಿಸುವುದು ಲೇಖಕನ ಕೆಲಸವಲ್ಲ, ಪ್ರಕಾಶಕನ ಹಕ್ಕೂ ಅಲ್ಲ. ಹೀಗಾಗಿ ಒಂದು ಪುಸ್ತಕ ಕೊಳ್ಳುವುದು ಮತ್ತು ಬಿಡುವುದು ಓದುಗರ ಖಾಸಗಿ ನಿರ್ಧಾರ'. ಎಂದು ಓದುಗರ ಅಂತರಂಗವನ್ನು ಅರಿತ ಜೋಗಿಯವರ ಲೇಖನ ಮನಮುಟ್ಟುವಂತಹುದು.

Read More...

ರಾಜ ಮನೆತನದಲ್ಲೊಂದು ಪ್ರೀತಿಯ ಸಾಮ್ರಾಜ್ಯ ‘ಪ್ರೇಮ ಖಡ್ಗ’

ಯುವನಾಶ್ವ, ನಾಗಶ್ರೀಯ ಪಾತ್ರದ ಸುತ್ತಲೂ ರೂಪುಗೊಂಡ ಪ್ರೇಮಕಥೆ ಒಂದು ಸಾಮ್ರಾಜ್ಯದೊಂದಿಗೆ ತಳುಕುಹಾಕಿಕೊಂಡು ಸಾಮ್ರಾಜ್ಯದ ರಾಜಕೀಯ ಏಳುಬೀಳಿಗೆ ಆ ರಾಜಮನೆತನಕ್ಕೆ ರಾಣಿಯ ಅಂಗರಕ್ಷಕನಾಗಿ ಸೇರಿಕೊಂಡ ಯುವನಾಶ್ವ ಕಾರಣನಾಗುವುದು.

Read More...