Book Watchers

ರಾಜು ಹಗ್ಗದ

ವೃತ್ತಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಆಗಿರುವ ರಾಜು ಹಗ್ಗದ ಅವರಿಗೆ ಓದು ನೆಚ್ಚಿನ ಹವ್ಯಾಸ. ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಇಣಚಗಲ್‌ ಗ್ರಾಮದವರು. ತಮ್ಮ ನಿರಂತರ ಓದು, ಸಾಹಿತ್ಯ ರಚನೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇತ್ತಿಚೆಗೆ ಕೃತಿಗಳ ವಿಮರ್ಶೆಯತ್ತ ಆಸಕ್ತಿ ತೋರಿದ್ದಾರೆ.

Articles

ಹೆಣ್ಣುಮಕ್ಕಳ ಕರಾಳ ಬದುಕಿನ ಕಥನ 'ಕೆಂಗುಲಾಬಿ’

ಕೊನೆಯ ಪುಟಗಳಲ್ಲಿ  ಶಾರದೆ, ಮಗಳ ಶವವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದಾಗ… ಕತಾನಾಯಕ ಮಲ್ಲೇಶಿ ಎಲ್ಲಿ ಹೋಗಿದ್ದಾಳೆ ಶಾರದಾ? ಎಂದು ಅಲ್ಲೆ ಕುಳಿತ ಮುದುಕಿಯನ್ನು ಕೇಳಿದಾಗ. ಮುದುಕಿ ದುಡ್ಡು ಹೊಂದಿಸಲಿಕ್ಕೆ ಹೋಗಿದ್ದಾಳೆ ಸರ್

Read More...

ಅಧ್ಯಯನದ ಕ್ಯಾನ್ವಾಸಿನಲ್ಲಿ ‘ತೇಜೋ ತುಂಗಭದ್ರಾ’

ತೆಂಬಕಪುರದ ತೆಂಬಕಸ್ವಾಮಿಯ ಸುತ್ತಲೂ ಬಿತ್ತರಗೊಳ್ಳುವ ತೆಂಬಕ್ಕ, ಮಾಪಳ, ಕೇಶವ, ಹಂಪಮ್ಮಳ ಬದುಕಿನ ಕಥನಗಳು ಅಂದಿನ‌ ಕಾಲದ ಜನಸಾಮಾನ್ಯರ ಬದುಕಿನ ಕಥನವೇ ಆಗಿದೆ. ಕಾದಂಬರಿಯ ಕ್ಯಾನ್ವಾಸ್ ಬಹುದೊಡ್ಡದು. ಅದರಂತೆ ಆ ಬೃಹತ್ ಕ್ಯಾನ್ವಾಸ್ ಗೆ ತಕ್ಕಷ್ಟೇ ಅಧ್ಯಯನವೂ ಇದೆ.

Read More...

ವಿಚಾರಸರಣಿಯ ‘ಅಂಗದ ಧರೆ’

'ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ' ಎಂಬ ಮಾತಿನಂತೆ ಗುರುವಿನ ಹುಡುಕಾಟಕ್ಕೆ ಹೊರಟ ಸಿದ್ದರಾಮರು ಆರಂಭದಲ್ಲಿ ತಮ್ಮದೇ ಆದ ಧ್ಯೇಯಗಳನ್ನು ಹೊಂದಿದ್ದರು. ಗುರು ಹೇಗಿರಬೇಕು ಎಂದರೆ ತನಗೆ ಅರಿಯದಿರುವ ಬಹಳಷ್ಟು ವಿಚಾರಧಾರೆಗಳನ್ನು ಅರಿವಿಲ್ಲವೆಂದು ಒಪ್ಪಿಕೊಳ್ಳಬೇಕು.

Read More...

ಕಾಡುವ ಮಾತಂಗಿ ’ಪ್ರಿಯೇ ಚಾರುಶಿಲೆ’

ಕಾದಂಬರಿ ಒಂದು ರಾತ್ರಿಯಲ್ಲಿ ಐಳ ಹಾಗೂ ಮಾತಂಗಿಯರಿಬ್ಬರ ನಡುವೆ ನಡೆಯುವ ಹಲವಾರು ಸಂಭಾಷಣೆಗಳ ಪ್ರೇಮದ ಗುಚ್ಚವಾಗಿದೆ. ಯಾರೂ ಮಾಡದ್ದನ್ನು ನಾನು ಮಾಡುವೆ ಎಂಬ ಹುಂಬು ಹಂಬಲ ಮಾತಂಗಿಗೆ. ಅದು ಐಳನೆದುರು ಒಂದೆರಡು ಬಾರಿ ನಡೆದು ಹೋಗುತ್ತದೆ.

Read More...

ನಾನು ಕಂಡಂತೆ ’ಹಾಣಾದಿ’

ಮಾಂತ್ರಿಕ ಲೋಕದ ಕಥಾ ಹಂದರದಂತೆ ಗೋಚರಿಸಿದರೂ ಮಾಂತ್ರಿಕತೆಯಿಂದ ದೂರವಿರುವ ಕಥೆಯಾಗಿದೆ. ಅಪ್ಪ, ಗುಬ್ಬಿ ಆಯಿ, ಬಾದಾಮಿ ಮರ, ಕಂಟಿ, ತೊತ್ಯಾ,  ಈ ಪ್ರಮುಖ ಪಾತ್ರಗಳೊಂದಿಗೆ ಮಾತಿಗಿಳಿಯುವ ಸಿಟಿಯಿಂದ ಬಂದ ಪಾತ್ರಧಾರಿ ಅದೇ ಊರಿನ ಮಗನಾಗಿರುತ್ತಾನೆ.

Read More...