Book Watchers

ರಾಜೇಂದ್ರ ಪ್ರಸಾದ್

ಕವಿ ರಾಜೇಂದ್ರ ಪ್ರಸಾದ್ತ ತ್ವಶಾಸ್ತ್ರ, ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ.

Articles

ಒಂದೇ ಗುರಿ ಬೇರೆ ದಾರಿ!

ಹೆಚ್ಚು ಹೆಚ್ಚು ಯುವ ತಲೆಮಾರಿನ ಬರಹಗಾರರು ಮತ್ತು ಓದುಗರೊಂದಿಗೆ ಸ್ನೇಹ ಸಂಬಂಧ ಇಟ್ಟುಕೊಂಡಿರುವ ಕಾರಣವೋ ಏನೋ ಮಳಗಿ ಅವರಿಗೆ ಇವತ್ತಿನ ಹುಡುಗರ ಓದಿನ ಸಮಸ್ಯೆ ಏನು ಎಂಬುದು ಅರ್ಥವಾಗಿಬಿಟ್ಟಿದೆ. ಇವತ್ತಿನ ಓದು, ಬರಹ ಮತ್ತು ವಾದಗಳು ಏಕಮುಖ ದಾಟಿಯವು. ಇದಕ್ಕೆ ಎಡ, ಬಲ, ನಡು ಎಂಬ ಭೇದವಿಲ್ಲ. ಒಂದಕ್ಕೊಂದು ಎದುರಾಗುತ್ತಾ ಎಲ್ಲವೂ ಒಂದೇ ತೆರೆನಾದ ಅರಿವಿನ ಅಹಮ್ಮು ಮತ್ತು ಅಂಧಕಾರಕ್ಕೆ ಒಳಗಾಗುತ್ತಿರುವ ಹೊತ್ತು ಇದು. ಇಂತಹ ಹೊತ್ತಿನಲ್ಲಿ ಹಲವು ಭಿನ್ನ ತಾತ್ವಿಕಮಾರ್ಗಗಳಲ್ಲಿ ನಮ್ಮ ಪೂರ್ವಿಕರು ಮತ್ತು ಸುಧಾರಕರು ಹೇಗೆ ಬದುಕಿದ್ದರು ಎಂಬುವುದನ್ನು, ಅವರ ನಡುವಿನ ಸಂವಾದವನ್ನು ಆರಿಸಿ ಆರಿಸಿ ಅನುವಾದಿಸಿ ನಮಗೆ ಕೊಟ್ಟಿದ್ದಾರೆ ಮಳಗಿಯವರು.

Read More...

‘ರಾಷ್ಟ್ರ ಬಾವುಟ ಹಿಡಿದ ಹುಡುಗಿ, ರಾಷ್ಟ್ರವೂ ಬಾವುಟದಂತೆ ಮಾರಾಟಕ್ಕಿದೆ!’

ಈ ಸಂಕಲನ ಶುರುವಾಗುವುದೇ ಹೊರಡುವ ಬಗ್ಗೆ ಸರಹದ್ದು, ಗಡಿರೇಖೆಗಳ ದಾಟಿ ಹೊರಡುವ ಬಗ್ಗೆ.. ಭೌತಿಕವಾದ ಗಡಿಗಳಿಂದ ಶುರುವಾಗಿ ಮಾನಸಿಕವಾದ ಮೇರೆಗಳನು ಮೀರುವ ಬಗೆಗೆ ಮಾತಾಡುತ್ತಲೇ ಕವಿ ಅಲ್ಲೊಂದು ರಮ್ಯತೆಯನ್ನು ಬೆಸೆದು ಬಿಡುವುದು ಗಂಭೀರತೆಯ ನಡುವೆ ಕೆನ್ನೆಗಳನು ಕೆಂಪೇರಿಸುತ್ತದೆ.

Read More...