Book Watchers

ಶಿ.ಜು ಪಾಶ

ಶಿ.ಜು.ಪಾಶ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ಪರಿಚಿತರಾದವರು ಕವಿ ಜುಬೇರ್ ಪಾಷ. ಎರಡು ಕವನ ಸಂಕಲನಗಳು, ಹಾಗೂ ಒಂದು ಕಥಾ ಸಂಕಲನವನ್ನು ಹೊರತಂದಿದ್ದಾರೆ. ಕವಿತೆ, ಕಥೆ, ಪ್ರಬಂಧ ಬರೆಯುವುದರಲ್ಲಿ ನಿರತರಾದ ಪಾಶ ಅವರು ಪತ್ರಕರ್ತರೂ ಆಗಿದ್ದಾರೆ.

Articles

ಪರದೆ ಸರಿಸಿದ ’ಕೌದಿ’ಯ ಕವಿತೆಗಳಿವು

ತಣ್ಣಗೆ ನಡೆದಿದೆ ದೃಶ್ಯಗಳ ಅವಲೋಕನ ಎಂದು ಇವರ ಕವಿತೆ `ಪರದೆ ಸರಿದಂತೆ’ ಆರಂಭವಾಗುತ್ತದೆ. ಒಂದೊಂದೇ ಪರದೆ ಸರಿದಂತೆ ಅಲ್ಲಿನ ಲೋಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಮ್ಮನ ನೆನಪು ಮಾಡಿಕೊಳ್ಳುತ್ತಲೇ ಅಲ್ಲಿ ನಿರಹಂಕಾರದ, ನಿರಾಡಂಬರದ ಜಗತ್ತನ್ನು ವಿವರಿಸುತ್ತಲೇ ಆಳ ಕಣಿವೆಯ ಪ್ರಪಾತದ ದರ್ಶನ ಮಾಡಿಸುತ್ತಾರೆ.

Read More...

ಶಿವಕುಮಾರ ಮಾವಲಿಯವರ ’ಚಲಿಸುವ ಕಥೆಗಳು’!

ಇಲ್ಲಿರುವ ಕಥೆಗಳೆಲ್ಲವೂ ಬಯಲಿಗೆ ತಮ್ಮನ್ನು ತಾವು ಒಡ್ಡಿಕೊಂಡು ಮಳೆಯಲ್ಲಿ ನೆನೆಯುತ್ತವೆ. ಭಾವನೆಗಳ ಜೊತೆ ಹೋರಾಡುತ್ತವೆ. ಚಂದದ ಬಿಸಿಲಿನೊಂದಿಗೆ ಲೀನಗೊಂಡು ಅರಳುತ್ತವೆ. ಹೊರಳುತ್ತವೆ. ಕೆಲವೊಮ್ಮೆ ಕೆರಳಲು ಹೋಗಿ ಮತ್ತೆ ಯಥಾ ‘ಅಂಕಣ’ಕ್ಕೆ ಮರಳುತ್ತವೆ.

Read More...

ಜನಪದ ಸಾಹಿತ್ಯದಲ್ಲಿ ತವರುಮನೆ  ಹುಡುಕಿದ ಮುಮ್ತಾಜ್ ಬೇಗಂ

ಜನಪದ ಸಾಹಿತ್ಯ ಎಂಬುದು ಸಮುದ್ರವಿದ್ದಂತೆ. ಆ ಸಮುದ್ರಕ್ಕೆ ಅದೆಲ್ಲೋ ತುತ್ತ ತುದಿಯಲ್ಲಿ ಈ ತವರುಮನೆಯ ನಂಟು ಬೆಳೆದಿದೆ. ಹೆಣ್ಣು ಹುಟ್ಟಿ ಬೆಳೆದ ಪರಿಸರದಿಂದ ಮದುವೆ ಎನ್ನುವ ಬಂಧನಕ್ಕೆ ಒಳಗಾದ ನಂತರ ಬೇರೊಂದು ಪರಿಸರದಲ್ಲಿ ಬದುಕು ಸಾಗಿಸುವ ಅನಿವಾರ್ಯತೆಯನ್ನು ಪುರುಷಪ್ರಧಾನ ವ್ಯವಸ್ಥೆಯ ಲಕ್ಷಣವಾಗಿಯೇ ಕಾಣುತ್ತದೆ.

Read More...

ಕವಿ- ಕವಿತೆಯ ನಡುವಿನ ಸಂಘರ್ಷ

‘ಆತ್ಮಕ್ಕೆ ಹತ್ಯೆ’ ಎಂಬ ಕವಿತೆಯಲ್ಲಿ ಸಾಕಷ್ಟು ಕಾಡುವ ಸಾಲುಗಳಿವೆ. ಒಮ್ಮೆ ಬಂದೇ ಬರುವ ಸಾವಿಗೇಕೆ ಭಯ? ಎಂದು ಪ್ರಶ್ನಿಸುತ್ತಲೇ ಗೀಚಲು ಆರಂಭಿಸುತ್ತಾರೆ ಗಜೇಂದ್ರಸ್ವಾಮಿ. ಇದ್ದಕ್ಕಿದ್ದ ಹಾಗೆ ಮಗುವಾಗಲು ಆಸೆಪಟ್ಟು ತಮ್ಮನ್ನು ತಾವೇ ಕೂಸಾಗಿಸಿಕೊಳ್ಳುವ ಪ್ರಯತ್ನದಲ್ಲೂ ಮುಂದಾಗುತ್ತಾರೆ.

Read More...

ಮಮತಾರ ಮೇಣದ ಬತ್ತಿ ’ಸಂತೆ ಸರಕು’

ರಂಗಭೂಮಿಯ ಸಖ್ಯದಲ್ಲಿ ಕವಿ ಮಮತಾ ಇರುವುದರಿಂದ ಅವರ ಕವಿತೆಗಳು ಪ್ರೇಕ್ಷಕಮುಖಿಯಾಗಿಯೂ, ವಾಚ್ಯತೆಯ ಭಾರದೊಂದಿಗೆ ಕೆಲವೊಮ್ಮೆ ನರಳುತ್ತವೆ; ಸೆಗಣಿ ಗೂಡು ಕಲ್ಲಿನ ಮನೆಯು- ಕವಿತೆಯ `ಸಿದ್ಧ ಸೂತ್ರ ಬದಲಾಗಬೇಕು ಅಜ್ಜಿ ಕತೆಯಲ್ಲಿ ಅರಿವು ಜೊತೆಯಾಗಬೇಕು ಹೊಸ ಕತೆಗಳ ಬರೆಯಬೇಕು ಅಕ್ಷರ ಲೋಕದಲ್ಲಿ’ – ಇಲ್ಲಿ ಕಾವ್ಯ ತನ್ನ ಗುಣವನ್ನು ಋಣದತ್ತ ವಾಲಿಸಿಬಿಡುತ್ತದೆ.

Read More...