Book Watchers

ಶಿವು ಕೆ. ಲಕ್ಕಣ್ಣವರ

ಶಿವು ಲಕ್ಕಣ್ಣವರ, ಶಾಲಾ ದಿನಗಳಲ್ಲೇ ಪ್ರೇಮ ಕಾವ್ಯದಿಂದ ಶುರುವಾದ ಬರವಣಿಗೆ ಮುಂದೆ ಕಾಲೇಜು ದಿನಗಳಿಂದ ಸಾಮಾಜಿಕ ಸ್ಪಂದನದ ಬರವಣಿಗೆಗೆ ಬೆಳೆಯಿತು. 'ಹೀಗೊಂದು ಮುಟ್ಟಬಾರದರ ಕತೆ' ಕವನ ಸಂಕಲನ ಮತ್ತು ಕಾಲೇಜು ದಿನಗಳಲ್ಲೇ ಬರೆದ 'ಸಾಮರಸ್ಯ ಬಿಂದು' ಇನ್ನೂ ಹಸ್ತಪ್ರತಿಯಲ್ಲೇ ಇವೆ. ಅವುಗಳನ್ನು ಈಗ ಪುಸ್ತಕ ರೂಪದಲ್ಲಿ ತರುವ ಆಸೆ ಹೊತ್ತಿದ್ದಾರೆ… ಹೀಗೆ ಹವ್ಯಾಸಿ ಬರಹಗಾರರಾಗಿದ್ದು, ಪತ್ರಕರ್ತರೂ ಹೌದು. ಅರಕೇರಿಯವರ ಆಗಿನ 'ಈ ವಾರ' ವಾರ ಪತ್ರಿಕೆಯಲ್ಲಿ ಕಾಲೇಜು ದಿನಗಳಲ್ಲೇ ಧಾರವಾಡ ಜಿಲ್ಲೆಯ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಶೂದ್ರ ಶ್ರೀನಿವಾಸರ ವಾರ ಪತ್ರಿಕೆಗೆ ಸಾಹಿತ್ಯಕ ಬರವಣಿಗೆ. ಆನಂತರ 'ಅಗ್ನಿ' ವಾರ ಪತ್ರಿಕೆಗೆ ವರದಿ, ಲೇಖನ ಬರೆದಿದ್ದಾರೆ.

Articles

ಹೆಣ್ಣಿನ ಸ್ವಾಭಿಮಾನಿ ಬದುಕಿನ ಚಿತ್ರಣ ಸಾಯಿಲಕ್ಷ್ಮಿಯವರ 'ಹೂಬತ್ತಿ' ಕಾದಂಬರಿ

ಇಂದು ಹೆಣ್ಣು ಹೇಗಿರಬೇಕು-ಹೇಗಿರಬೇಡವೆಂದು ಮೊದಲೇ ನಿರ್ಧರಿಸಲ್ಪಡುತ್ತಿರುವಾಗ ಮತ್ತು ಇಂತಹ ದುರ್ಗಮ ಪುರುಷ ಪ್ರಧಾನ ಕಾಲಘಟ್ಟದಲ್ಲಿ ಮಹಿಳೆಯು ವಿಭಿನ್ನ ವಾತಾವರಣದಲ್ಲಿ ಜೀವಿಸುತ್ತಿದ್ದಾಳೆ. ಇಂತಹ ದುರ್ಗಮ ಸನ್ನಿವೇಶದಲ್ಲಿರುವ ಮಹಿಳೆಯರು ವರ್ತಮಾನದ ಈ ಕಾಲಘಟ್ಟದಲ್ಲಿ ಮಹಿಳೆಗೆ ಆತ್ಮಸ್ಥೈರ್ಯ ತುಂಬುವ ಸಾಹಿತ್ಯ ಕೃತಿಗಳ ಅಗತ್ಯ ಸಂದರ್ಭದಲ್ಲಿ ಸಾಯಿಲಕ್ಷ್ಮಿಯವರ ಈ 'ಹೂಬತ್ತಿ'ಯೊಂದು ಮಾರ್ಗೋಪಾಯದಂತೆ ಗೋಚರಿಸುತ್ತದೆ. ಅಂತಹ ಸಾಹಿತ್ಯ ಕೃತಿಯೂ ಸಾಯಿಲಕ್ಷ್ಮಿಯವರ ಈ ಕೃತಿಯೂ ಆಗಿದೆ 'ಹೂಬತ್ತಿ'.

Read More...

ಕಾಳೇಗೌಡ ನಾಗವಾರರ 'ಮಂಗಳಕರ ಚಿಂತನೆ'ಯ ಧ್ಯಾನ..!

'ಮಂಗಳಕರ ಚಿಂತನೆ'ಯಲ್ಲಿ ವೈಚಾರಿಕ, ಸಾಹಿತ್ಯ ವಿಮರ್ಶೆ ಲೇಖನಗಳು, ಅವರೊಂದಿಗೆ ಹಲವಾರು ನಡೆಸಿದ ಸಂದರ್ಶನಗಳು, ವಿಚಾರವಾದ ಮತ್ತು ನಾನಾ ಬಗೆಯ ಹೋರಾಟಗಾರರ ವ್ಯಕ್ತಿಗತ ಲೇಖನಗಳು, ಜಾನಪದ ಪರಂಪರೆಯ ವೈಚಾರಿಕ ಲೇಖನಗಳು, ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಮತ್ತು ಅವರ ಬದುಕಿನ ಹೆಜ್ಜೆಗಳು ಹೀಗೆಯೇ ಹತ್ತು ಹಲವು ಬಗೆಯ ಲೇಖನಗಳು.........

Read More...

ವಿಶಿಷ್ಟ ಮತ್ತು ವಿಭಿನ್ನ ಶೈಲಿಯ ಅದ್ವಿತೀಯ ಕೃತಿ 'ನಾನು ಕಸ್ತೂರ್'..!

ಗಾಂಧಿಯೊಂದಿಗೆ ಸುಮಾರು 62 ವರ್ಷ ಕಾಲ ಸಂಸಾರ ನಡೆಸಿದ ಕಸ್ತೂರ ಬಾ ಅವರ ಬದುಕು ಹೇಗಿತ್ತು, ಸ್ವಾತಂತ್ಯ್ರ ಹೋರಾಟದಲ್ಲಿ ಅವರ ಭಾಗವಹಿಸುವಿಕೆ ಹೇಗಿತ್ತು ಮುಂತಾದ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ...  

Read More...

ಕುರುಗಾಹಿ ’ಸ್ಯಾಂಟಿ’ಯಾನ ಹುಡುಗಾಟ

'ಸ್ಯಾಂಟಿಯಾಗೋ' ಎಂಬ ಕುರುಬನ ಪಾತ್ರದ ಚಿತ್ತ ಜಂಗಮನದು. ನಿಧಿ ಹುಡುಕುತ್ತಾ ಈಜಿಪ್ಟ್ ತಲುಪುವ ಅವನ‌ ಕಣ್ಣು, ಮರುಭೂಮಿಯನ್ನು ದಾಟುವುದರಲ್ಲಿ ನಾನಾ ಅನುಭವವನ್ನು ಗ್ರಹಿಸುತ್ತದೆ. ಕೊಂಚ ಓದಿಕೊಂಡು ಅವನ ಮನಸ್ಸು ಸೂಕ್ಷ್ಮವಾಗಿರುವುದರಿಂದ ತನ್ನನ್ನೂ ವಿಮರ್ಶಿಸಿಕೊಳ್ಳುತ್ತಾನೆ.

Read More...

ಕೇರಳ ಕಥೆಗಾರ್ತಿಯರ ದಾರುಣ ಕಥೆಗಳು

ಪ್ರಸಿದ್ಧ ಸಾಹಿತಿ ಕಮಲಾ ಹೆಮ್ಮಿಗೆ ಅವರು ಮಲೆಯಾಳಂ ಭಾಷೆಯಿಂದ ಕನ್ನಡಕ್ಕೆ ತಂದ ಅಪೂರ್ವ ಕಥೆಗಳಿವು. ವಿವಿಧ ತಲೆಮಾರಿಗೆ ಸಂಬಂಧಸಿದ 30 ಕಥೆಗಾರ್ತಿಯರು ಇದ್ದಾರೆ. ಅಧಿಕ ಸಾಕ್ಷರತೆ ಇರುವ ಹೆಣ್ಣು ಮಕ್ಕಳಿಗೂ ಕಷ್ಟ ಎಂಬುದನ್ನು ಇಲ್ಲಿ ಮನಗಾಣಬಹುದು.

Read More...