Book Watchers

ಶ್ರೀನಿವಾಸ ಕಾರ್ಕಳ

ಚಿಂತಕರು ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀನಿವಾಸ ಕಾರ್ಕಳ ಅವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು. ಪತ್ರಕರ್ತೆ ರಾಣಾ ಅಯೂಬ್‌ ಅವರ ಗುಜರಾತ್‌ ಫೈಲ್ಸ್‌ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Articles

ಕುಂದಾಪ್ರ ಕನ್ನಡದಲ್ಲೊಂದು ಚಂದದ ಕಾದಂಬರಿ ‘ಕಾಡ ಸೆರಗಿನ ಸೂಡಿ’

ಮಂಜುನಾಥ ಚಾಂದ್ ರ ಕಾದಂಬರಿ ‘ಕಾಡ ಸೆರಗಿನ ಸೂಡಿ’ಯ (ಅಕ್ಷರಮಂಡಲ ಪ್ರಕಾಶನ) ಬಹುತೇಕ ಪಾತ್ರಗಳು ಮಾತನಾಡುವುದು ಈ ಸೊಗಸಾದ ಕುಂದಗನ್ನಡದಲ್ಲಿ. ಈ ಭಾಷೆಯನ್ನು ಬಳಸಿಕೊಂಡಿರುವ ಮತ್ತು ದುಡಿಸಿಕೊಂಡಿರುವ, ಹಾಗೆಯೇ ನನಗೆ ತುಂಬ ಪರಿಚಯವಿದ್ದ ಆ ಭಾಗದ ಪರಿಸರವನ್ನು ಬಳಸಿಕೊಂಡು ಬರೆದಿರುವುದರಿಂದಲೂ ಈ ಕಾದಂಬರಿ ನನಗೆ ಇಷ್ಟವಾಯಿತು.

Read More...

‘ದುಪ್ಪಟ್ಟು’ ಬಹಿರಂಗಪಡಿಸುವ ಕಹಿ ಸತ್ಯಗಳು

ಮಂಗಳೂರಿನಲ್ಲಿ ರಿಫೈನರಿ ಸ್ಥಾಪನೆಯಾದಾಗ ಅನೇಕ ಕೃಷಿಕರು ತಮ್ಮ ಜಮೀನು ಕಳೆದುಕೊಂಡರು. ಒಂದು ಕಾಲನಿ ಸ್ಥಾಪಿಸಿ ಅಲ್ಲಿ ಅವರಿಗೆ ವಸತಿ ಕಲ್ಪಿಸಲಾಯಿತು. ಈ ಸಂದರ್ಭ ಗೆಳೆಯ ನಟೇಶ ಉಳ್ಳಾಲ್ ಈ ನಿರ್ವಸಿತರ ಬಗ್ಗೆ ಒಂದು ಸಾಕ್ಷ್ಯ ಚಿತ್ರ ನಿರ್ಮಿಸಿದರು. ಅದರಲ್ಲಿ ಒಬ್ಬಳು ವಯೋವೃದ್ದೆ ಮಾತನಾಡುತ್ತಾ “ಇತ್ತೆ ದಾದ ಮಲ್ಪುನ ಮಗ, ಬಾನ ತೂವೊಂದು ಕುಲ್ಲುನ” (ಈಗ ಏನು ಮಾಡುವದು ಮಗಾ, ಆಕಾಶ ನೋಡುತ್ತ ಕೂರುವುದು) ಎಂದು ನೋವಿನಿಂದ ಹೇಳುತ್ತಾಳೆ!

Read More...