Book Watchers

ಸುಭಾಷ ರಾಜಮಾನೆ

ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸುಭಾಷ ರಾಜಮಾನೆ ಅವರು ಮೂಲತಃ ಬೆಳಗಾವಿಯವರು. ಧಾರವಾಡದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ ಪದವಿ ಪಡೆದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದ ಕನ್ನಡ ವಿಮರ್ಶೆ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದರು. ಸಿನಿಮಾ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿರುವ ಅವರು ’ದಿ ಆರ್ಟಿಸ್ಟ್‌’ ಸಿನಿಮಾದ ಚಿತ್ರಕತೆಯನ್ನು ಕನ್ನಡೀಕರಿಸಿ ಪ್ರಕಟಿಸಿದ್ದಾರೆ. ವಿಕ್ಟರ್‌ ಫ್ರಾಂಕ್‌ನ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದ್ದಾರೆ.

Articles

ಬುದ್ಧಿ, ಭಾವಗಳ ‘ಪಕ್ಕಿಹಳ್ಳದ ಹಾದಿಗುಂಟ’

ಕಾದಂಬರಿ ಓದಿದಾಗ ನಮ್ಮೊಳಗೆ ಏನಾಗುತ್ತದೆ? ಕಾದಂಬರಿ ಏಕಕಾಲದಲ್ಲಿ ಹಲವು ನಿಲುವುಗಳನ್ನು ನಿರೂಪಿಸುತ್ತಿರುತ್ತದೆ. ನಾವು ಓದುವಾಗ ಹಲವು ದ್ವನಿಗಳು ನಮ್ಮೊಳಗೂ ಇಳಿದು ವಿಶಿಷ್ಟ ಅನುಭವವನ್ನು ಒದಗಿಸುತ್ತದೆ. ಈ ಕಾದಂಬರಿಯ ಓದು ನಮ್ಮ ಅಂತರಂಗವನ್ನು ಕಲಕದೇ ಇರುವುದಿಲ್ಲ. ಬದುಕಿನ ನಿಗೂಢತೆಯನ್ನೂ ಶೋಧಿಸುವ ಹಾಗೂ ಅದನ್ನು ತೆರೆದಿಡುವ ಕ್ರಮದಲ್ಲಿಯೇ ಈ ಕೃತಿಯ ಹೆಚ್ಚುಗಾರಿಕೆ ಇದೆ.

Read More...

ಕೃಷ್ಣೆ ಹರಿದಳು: ಬದುಕಿನ ವಾಸ್ತವತೆಗಳಿಗೆ ಕನ್ನಡಿಯಾಗಲು ಹಂಬಲಿಸಿದ ಕಥನ

ಸದರಿ ಕಾದಂಬರಿಯಲ್ಲಿ ಆಧುನಿಕ ಶಿಕ್ಷಣವನ್ನು ಪಡೆದ ಹೊಸ ತಲೆಮಾರಿನ ಆಸೆ ಆಕಾಂಕ್ಷೆಗಳು ಏನು ಎಂಬುದು ತಿಳಿಯಲಾರದು; ಯಾಕೆಂದರೆ ಕಾದಂಬರಿಯಲ್ಲಿ ಗುರುಪಾದಪ್ಪನ ಮನೆತನದ ಚರಿತ್ರೆಯ ನಿರೂಪಣೆಯೇ ಮುಕ್ಕಾಲು ಪಾಲು ಜಾಗವನ್ನು ಆಕ್ರಮಿಸಿಕೊಂಡಿರುವುದರಿಂದ ಹೊಸ ಪೀಳಿಗೆಯ ಶಿವಲಿಂಗೇಗೌಡ, ಗೌರಿ, ಬಾಪು ಒಂದೆರಡು ಸಲವಷ್ಟೇ ಬಾಲ್ಯದ ಶಾಲಾ ದಿನಗಳು ದಾಖಲಾಗುತ್ತವೆ.

Read More...