Book Watchers

ಸಿದ್ದು ಯಾಪಲಪರವಿ

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಇವರು ಕಳೆದ ಮೂರು ದಶಕಗಳಿಂದ ಗದುಗಿನ ಕನಕದಾಸ ಸಮಿತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಸಾವಿರಾರು ಉಪನ್ಯಾಸಗಳು, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳ ಸಂಚಾರವನ್ನು ನಡೆಸಿ, ಜೀವನ ಕೌಶಲ್ಯಗಳ ಕುರಿತಾದ ತರಬೇತಿಯನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

Articles

ಅನಂತಮೂರ್ತಿ ಕಥಾಲೋಕದ ಬೆರಗು `ಐದು ದಶಕದ ಕಥೆಗಳು’

ಲಂಕೇಶ್, ತೇಜಸ್ವಿ ಅವರ ಸಮಕಾಲೀನರಾದ ಅನಂತಮೂರ್ತಿ ಎಲ್ಲರಿಗಿಂತ ಹೆಚ್ಚು ಕಲರ್ ಫುಲ್.‌ ಅವರ ವ್ಯಕ್ತಿತ್ವ, ಆಕರ್ಷಕವಾಗಿ ಮಾತನಾಡುವ ಶೈಲಿ, ವಿದೇಶಿ ಶಿಕ್ಷಣದ ಜೊತೆಗೆ ಮಲೆನಾಡಿನ ಘಮಲು ಬೇರೆ!  ಲಂಕೇಶ್, ತೇಜಸ್ವಿ ಅವರಂತೆ ನೇರಾ ನೇರ ದೇಸಿಯ ಸೊಗಡಿರದಿದ್ದರೂ ಅದೇನೋ ಸೊಗಸು.

Read More...

ಯಂಡಮೂರಿಯ ಸ್ಥಾಯಿ ಭಾವ `ಆನಂದೋ ಬ್ರಹ್ಮ'

ಮೂರು ದಶಕ ಕಳೆದ ಮೇಲೆ ಮನುಷ್ಯ ಸಂಪೂರ್ಣ ಟೆಕ್ನಾಲಜಿ ದಾಸನಾಗುತ್ತಾನೆ ಎಂಬ ಕಾಲ್ಪನಿಗೆ ಹೊಸ ಜಗತ್ತಿನಿಂದ ಆರಂಭವಾಗುವ ಕಾದಂಬರಿ, ತನ್ನ ಉತ್ತರಾರ್ಧದಲ್ಲಿ ಇಪ್ಪತ್ತನೇ ಶತಮಾನದ ಪ್ರೀತಿಗೆ ತೆರಳಿದಾಗ ಯಂಡಮೂರಿ ಹೇಳಿದ ಮೇಲಿನ ಸಾಲುಗಳು ಮಹತ್ವ ಪಡೆಯುತ್ತವೆ.

Read More...

ರೋಚಕತೆಯನ್ನು ಮುಂದಿಡುವ ‘ಇಂದಿರೆಯ ಮಗ ಸಂಜಯ’

ಅನೇಕ ಸತ್ಯಗಳು ಹೆಚ್ಚು ನಿಚ್ಚಳವಾಗಿ ಹೊರ ಬೀಳುತ್ತವೆ. ಹೇಳುವಾಗ ಹಿಂಜರಿಕೆ ಕೂಡ ಕಡಿಮೆಯಾಗುತ್ತದೆ.  ವಿನೋದ ಮೆಹ್ತಾ ಬರೆದ ಕೃತಿಯ ಅನುವಾದ ಅನ್ನಲಾಗದು, ರವಿ ಅನುವಾದ ಅನ್ನೋ ಹಾಗಿರಲ್ಲ, ಅದರದೇ ಆದ ಸೊಗಡಿರುತ್ತದೆ. 

Read More...

ಪಟೇಲರ ಹುಚ್ಚು ಮತ್ತು ಪತ್ರಕರ್ತ ಕೆ.ಎನ್.ರೆಡ್ಡಿ

ವಿಧಾನ ಸಭಾ ಕಲಾಪಗಳಲ್ಲಿ ಪಟೇಲರ ರಿಪ್ಲೈ ಇದೆ ಎಂದು ಗೊತ್ತಾದ ಕೂಡಲೇ ಸದನದಲ್ಲಿ ಮೈಯಲ್ಲ ಕಿವಿ. ಹಾಸ್ಯ,ವ್ಯಂಗ್ಯ,ವಿನೋದ, ಆಳವಾದ ವೈಜ್ಞಾನಿಕ ವಿವರಣೆ, ಕರಾರುವಾಕ್ಕಾದ ಅಂಕಿ ಅಂಶಗಳು, ಎದುರಾಳಿಗಳನ್ನು ಕೇವಲ ತಮ್ಮ ಹಾಸ್ಯ ಪ್ರಜ್ಞೆಯಿಂದ ಬಗ್ಗು ಬಡಿಯುವ ಛಾತಿ ಮತ್ಯಾವ‌ ರಾಜಕಾರಣಿಗಳಿಗೆ ಇರಲಿಲ್ಲ.

Read More...

ಪೊಸಿಟಿವ್ ದೃಷ್ಟಿಕೋನದ ಅವಲೋಕನ: 'ಇದೊಂಥರಾ ಆತ್ಮಕಥೆ’ 

’ಇದೊಂಥರಾ ಆತ್ಮಕಥೆ’  ವಿಠ್ಠಲಮೂರ್ತಿಯ ಪ್ರಾಮಾಣಿಕ ಮನಸ್ಥಿತಿಯನ್ನು ಅನಾವರಣ ಮಾಡುತ್ತದೆ. ಪ್ರತಿಯೊಬ್ಬ ರಾಜಕೀಯ ನಾಯಕರಲ್ಲಿ ಇರುವ ಅಥವಾ ಇರಬಹುದಾದ ಒಳ್ಳೆಯ ಮುಖ ಮತ್ತು ಸಂದೇಶಗಳ ಮೇಲೆ ಬೆಳಕು ಚೆಲ್ಲುತ್ತದೆ. ಯಾರನ್ನಾದರೂ ಪ್ರಾಮಾಣಿಕ ಎಂದು ಕರೆಯಲು ಭಯವಾಗುವಷ್ಟು ಹಿಪ್ಪೊಕ್ರೇಟ್ಸ್ ತುಂಬಿ ತುಳುಕುತ್ತಿದ್ದಾರೆ.

Read More...

Magazine
With us

Top News
Exclusive
Top Events