Book Watchers

ಸ್ನೇಹಲತಾ ಗೌನಳ್ಳಿ

ಸ್ನೇಹಲತಾ ಗೌನಳ್ಳಿ ಕಲಬುರ್ಗಿಯ ಚಿಂಚೋಳಿ ತಾಲ್ಲೂಕು ಐನೋಳ್ಳಿ ಗ್ರಾಮದವರು. ಸರಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇಯ ತರಗತಿವರೆಗೆ ಓದಿದ್ದು ಐನೋಳ್ಳಿಯಲ್ಲಿಯೇ. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ವರ್ಷ ಚಿಂಚೋಳಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಯೊಂದರ ತಯಾರಿಯಲ್ಲಿದ್ದಾರೆ. ಸ್ನೇಹಲತಾ ತಮ್ಮ ಸಾಹಿತ್ಯದ ಮೂಲಕ ಕನ್ನಡವನ್ನು ಕಟ್ಟುವ ಕೆಲಸ ಮಾಡುವ ಸಂಪ್ರೀತಿಯನ್ನು ಹೊಂದಿದ್ದಾರೆ. ಬರವಣಿಗೆಗಿಂತ ಓದು ಅವರ ನೆಚ್ಚಿನ ಹವ್ಯಾಸ.

Articles

ಜೀವ ಬರಿಸುವ ಕವಿತೆಗಳ ‘ಜೀವ ಮಿಡಿತದ ಸದ್ದು’

ಜೀವ ಮಿಡಿತದ ಸದ್ದು' ಕವಿತೆಯಲ್ಲಂತೂ ಅವ್ವನೊಂದಿಗೆ ನಡೆವ ಮಗಳ ಸಂವಾದ ಇಡೀ ಹೆಣ್ಣು ಕುಲವನ್ನು ಪ್ರತಿನಿಧಿಸುವಂತಿವೆ.

Read More...

’ಸರಸಮ್ಮನ ಸಮಾಧಿ’ ನಾ ಕಂಡಂತೆ

ದಾಂಪತ್ಯ ಕೌಟುಂಬಿಕ ಪ್ರತಿಷ್ಟೆಯಾದರೆ ಮನಸ್ಸುಗಳು ಗೌಣವಾಗುತ್ತವೆ,ಆತ್ಮಗಳು ಪ್ರೇತವಾಗುತ್ತವೆ. ಶಾಸ್ತ್ರ, ಸಮಾಜಗಳಿಗೆ ಪ್ರಶ್ನಿಸುವ ವ್ಯಕ್ತಿತ್ವಗಳು ನಿಜಕ್ಕೂ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವವೇ ಶಿವರಾಮ ಕಾರಂತರು. 

Read More...