Book Watchers

ವಸುಧೇಂದ್ರ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತವಾದ ಹೆಸರು ವಸುಧೇಂದ್ರ. ಬರಹಗಾರರೂ ಪ್ರಕಾಶಕರೂ ಆಗಿರುವ ಇವರ ಮುಖ್ಯವಾದ ಬರವಣೆಗೆ ಪ್ರಕಾರಗಳೆಂದರೆ ಕತೆ, ಕಾದಂಬರಿ, ಲಲಿತ ಪ್ರಬಂಧಗಳು. ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರಾದ ವಸುಧೇಂದ್ರ ಅವರು ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ.

Articles

ಒಳಿತಿನ ಕಡೆಗಿನ ನಡೆ: ವರ್ಜಿನ್ ಮೊಹಿತೊ ಯಶಸ್ಸಿಗೆ ಮೂಲ ಕಾರಣ

ಬೊಂಬಾಯಿ ಪೆಟ್ಟಿಗೆ, ಹೈಡ್ ಪಾರ್ಕ್, ಮೂರು ಮುಖಗಳು, ಕಾಣದ ಕೈಗಳ ಆಟ - ನಾಲ್ಕೂ ಕತೆಗಳಲ್ಲಿ ಭೂತ-ವರ್ತಮಾನಗಳು ಥಳಕು ಹಾಕಿಕೊಳ್ಳುವ ಪರಿ ಇಷ್ಟವಾಯ್ತು. ಭೂತದಲ್ಲಿ ನಡೆದ ಯಾವುದೋ ಘಟನೆ ಇಂದಿನ ಬದುಕಿಗೆ ಹೆಣಿಗೆ ಹಾಕಿಕೊಂಡು ತಲ್ಲಣ ಮೂಡಿಸುವ ಕ್ರಮ ಈ ನಾಲ್ಕರಲ್ಲೂ ಯಶಸ್ವಿಯಾಗಿ ಬಳಕೆಯಾಗಿದೆ.

Read More...

ಸಿನಿಮಾ ವಿಸ್ತೃತರೂಪವಾಗಿ ’ಅಶ್ವತ್ಥಾಮನ್’

ಯಾವತ್ತೂ ಮನಸ್ಸಿಗೆ ನೆಮ್ಮದಿಯಿಲ್ಲದೆ ಜಗತ್ತನ್ನು ಅಂಡಲೆಯುವ ಶಾಪವನ್ನು ಹೊತ್ತವನು ಅಶ್ವತ್ಥಾಮ. ದುಷ್ಟಚತುಷ್ಟಯರೊಡನೆ ಸೇರಿದ್ದರೂ ಅಶ್ವತ್ಥಾಮ ವಿಪರೀತ ಕೆಟ್ಟವನಲ್ಲ. ದ್ರೌಪದಿಯ ವಸ್ತ್ರಾಪಹರಣದ ಹೊತ್ತಿನಲ್ಲಿ ಗೆಳೆಯರ ದೌರ್ಜನ್ಯ ಕಂಡು ಬಿಸಿಯುಸಿರು ಬಿಟ್ಟು ಸಿಟ್ಟು ಮಾಡಿಕೊಂಡವನು.

Read More...

ಸಾವಿನ ಪ್ರತಿಬಿಂಬದ ಕಥನ

ಸಾವಿನ ಕುರಿತು ಅನೇಕರು ವಿಭಿನ್ನ ರೀತಿಗಳಲ್ಲಿ ಬರೆದಿದ್ದಾರೆ. ಸಾವಿನ ಕದ ತಟ್ಟಿ ಬಂದವರು ಆತ್ಮಕತೆಯನ್ನು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿಯ ವಸ್ತು ತುಸು ವಿಭಿನ್ನವಾಗಿದೆ. ಒಂದು ಸಾವಿಗೆ ಸಲ್ಲಬೇಕಾದ ಶೋಕವನ್ನು ನಾವು ಸಲ್ಲಿಸದಿದ್ದರೆ, ಅದು ಮತ್ತೊಂದು ಸಾವಿನ ಪಯಣದಲ್ಲಿ ಅನುಭವಿಸುವಂತೆ ಮಾಡುತ್ತದಂತೆ.

Read More...