Book Watchers

ವಿಜಯ ಅಮೃತರಾಜ್

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ರ್‍ಯಾವಣಕಿ ಗ್ರಾಮದವರು. ತಂದೆ ಷಣ್ಮುಖಯ್ಯ ಮತ್ತು ತಾಯಿ ಸರ್ವಮಂಗಳಾ. ಸದ್ಯ ಕೊಪ್ಪಳ ನಿವಾಸಿ. ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕೊಪ್ಪಳದಲ್ಲಿ , ನಂತರ ಕಾನೂನು ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಈ ನಡುವೆ ಎರಡು ವರ್ಷ ಮಂಡಲಗೇರಿಯಲ್ಲಿ ಐ.ಟಿ.ಐ. ಫಿಟ್ಟರ್ ಹಾಗೂ ಜೆ.ಓ.ಡಿ.ಸಿ. ಎಲೆಕ್ಟ್ರಿಕಲ್ ಕೊಪ್ಪಳದಲ್ಲಿ ಮತ್ತು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ. ವೃತ್ತಿಯಿಂದ ನ್ಯಾಯವಾದಿ ಪ್ರವೃತ್ತಿಯಿಂದ ಸಾಹಿತ್ಯ ಕೃಷಿ. ಅವರು ರಾಜ್ಯ ವಕೀಲರ ಸಾಹಿತ್ಯ ಪರಿಷತ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರು. ’ಹುರಿಗಾಳು’ ಆರಿಸಿ ತಂದ ಕವಿತೆ. ಉಳಿದ ಕೃತಿಗಳು-ಒಡೆದ ಹೃದಯಕ್ಕೆ ಔಷಧಿ (ಕವನ ಸಂಕಲನ), ಭಾವಗೀತೆ, ವೀರ ರಾಣಿ ಕಿತ್ತೂರು ಚೆನ್ನಮ್ಮ ಲಾವಣಿ ಸಿ.ಡಿಗಳು.

Articles

ಗಾಢ ಭಾವದ ’ಒಡಲ ಖಾಲಿ ಪುಸ್ತಕ’

'ತುಪ್ಪದ ಬಣ್ಣ' ಈ ಸಾಲು ಅದ್ಭುತ ಕಲ್ಪನೆ ಇದು ಹೊಸ ಶಬ್ದದ ಪ್ರಯೋಗ ಅನಿಸುತ್ತೆ ನನ್ನ ಮಟ್ಟಿಗೆ, ಇದನ್ನು ಇದುವರೆಗೂ ನಾನು ಎಲ್ಲಿಯೂ ಗಮನಿಸಿಲ್ಲ. ಹುಡುಗರು ಸಿನಿಮಾ ಪೋಸ್ಟರ್ ನೋಡಿಬರುವಂತೆ, ಹುಡುಗಿಯರು ಆ ವಯಸ್ಸಿನಲ್ಲಿ ಟೈಲರ್ ಹೊಲಿದು ಹಾಕಿದ್ದ ಲಂಗಾ ನೋಡಿ ಖುಷಿಪಡುವ ರೂಪಕವಾಗಿ ಚೆನ್ನಾಗಿದೆ, ಸಹಜವಾಗಿದೆ.

Read More...