ಬರವಣಿಗೆಯನ್ನು ಒಂದು ಸಶಕ್ತ ಮಾಧ್ಯಮವನ್ನಾಗಿ ಮಾಡಿಕೊಂಡು ಮಿಂಚಿರುವ ಸುಧಾ ಮೂರ್ತಿ


‘ಸುಧಾಮೂರ್ತಿ ಅವರ ಚಿಂತನೆಗಳು ನಮ್ಮನ್ನು ಉನ್ನತಿಗೆ ಕೊಂಡೊಯ್ಯುವ ಉದಾತ್ತ ವಿಚಾರಗಳಿಂದ ತುಂಬಿವೆ. ಅವರ ಸಾಹಿತ್ಯ, ಮಾತು, ಕೃತಿಗಳು ವ್ಯಾಪಕ ಅನುಭವಗಳನ್ನೇ ಮೂಲ ದ್ರವ್ಯವನ್ನಾಗಿಸಿಕೊಂಡಿವೆ’ ಎನ್ನುತ್ತಾರೆ ಜಿ.ಎನ್. ಉಪಾಧ್ಯ. ಅವರು ‘ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ- ಡಾ. ಸುಧಾಮೂರ್ತಿ’ ಅವರ ಕೃತಿ ಕುರಿತು ಬರೆದ ಅರಿಕೆ ನಿಮ್ಮ ಓದಿಗಾಗಿ.

ಬಹುಮುಖ ಪ್ರತಿಭೆಯ ಸುಧಾ ಮೂರ್ತಿ ಅವರದು ಧೀರೋದಾತ್ತ ವ್ಯಕ್ತಿತ್ವ. ಇಂಜಿನಿಯರ್ ವೃತ್ತಿಗೆ ವಿದಾಯ ಹೇಳಿ ವೈವಿಧ್ಯಮಯವಾದ ಸಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ನೊಂದವರ, ಬೆಂದವರ, ದೀನ ದಲಿತರ ಕಣ್ಣೀರನೊರಸುವ ಕೆಲಸವನ್ನು ಅವರು ಮಾಡುತ್ತಾ ಬಂದಿದ್ದಾರೆ. ತಮ್ಮ ಬಹುಮುಖಿ ಕಾರ್ಯ ಚಟುವಟಿಕೆಗಳಿಂದ ಅವರು ದೇಶ ವಿದೇಶಗಳಲ್ಲಿ ನಾಮಾಂಕಿತರಾಗಿದ್ದಾರೆ. ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸಲು ಅವರು ತನು ಮನ ಧನದಿಂದ ಶ್ರಮಿಸುತ್ತಿರುವುದು ಉಲ್ಲೇಖನೀಯ ಅಂಶ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಮದಂಡಿಯಾಗಿ ಸಾಹಿತ್ಯ ಕೃಷಿ ಮಾಡಿ ಅವರು ಪಡೆದ ಪ್ರಸಿದ್ದಿ ನಾಡಿಗೆ ಹೆಮ್ಮೆಯ, ಅಭಿಮಾನದ ಸಂಗತಿ. ಅವರದು ಅನೂನ ವ್ಯಕ್ತಿತ್ವ. ಸುಧಾಮೂರ್ತಿ ಅವರ ಚಿಂತನೆಗಳು ನಮ್ಮನ್ನು ಉನ್ನತಿಗೆ ಕೊಂಡೊಯ್ಯುವ ಉದಾತ್ತ ವಿಚಾರಗಳಿಂದ ತುಂಬಿವೆ. ಅವರ ಸಾಹಿತ್ಯ, ಮಾತು, ಕೃತಿಗಳು ವ್ಯಾಪಕ ಅನುಭವಗಳನ್ನೇ ಮೂಲ ದ್ರವ್ಯವನ್ನಾಗಿಸಿಕೊಂಡಿವೆ. ಬರವಣಿಗೆ ಮತ್ತು ಬದುಕಿನ ನಡುವೆ ವಿರೋಧಾಭಾಸ ಎದ್ದು ಕಾಣುತ್ತಿರುವ ವರ್ತಮಾನದ ಸಂದರ್ಭದಲ್ಲಿ ಅವರು ಅಪರೂಪದ ಚಿಂತಕರಾಗಿ, ಸಾಹಿತಿಯಾಗಿ, ನೈಜ ಸಮಾಜ ಸೇವಕರಾಗಿ ಗಮನ ಸೆಳೆದವರು. ಬರವಣಿಗೆಯನ್ನು ಒಂದು ಸಶಕ್ತ ಮಾಧ್ಯಮವನ್ನಾಗಿ ಮಾಡಿಕೊಂಡು ಮಿಂಚಿರುವ ಸುಧಾ ಮೂರ್ತಿ ಅವರ ವಾಙ್ಮಯ ಕಾರ್ಯ ಹಾಗೂ ವರ್ಣರಂಜಿತ ವ್ಯಕ್ತಿತ್ವದ ಕಿರು ದರ್ಶನ ಪ್ರಸ್ತುತ ಕೃತಿಯಲ್ಲಿ ದಾಖಲಾಗಿದೆ.

ಇತ್ತೀಚೆಗೆ ನಮ್ಮ ವಿಶ್ವವಿದ್ಯಾಲಯ ಆಯೋಜಿಸಿದ್ದ 'ಸುಧಾಮೂರ್ತಿ ಅವರ ಸಾಹಿತ್ಯ ಸಾಧನೆ; ಒಂದು ಅವಲೋಕನ' ಕಾರ್ಯಕ್ರಮದಲ್ಲಿ ಸ್ವತಃ ಅವರೇ ಮೂರು ಗಂಟೆಗಳ ಕಾಲ ಹಾಜರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಎಲ್ಲರನ್ನು ಬೆರಗುಗೊಳಿಸಿದರು. ಸುಧಾ ಮೂರ್ತಿ ಅವರ ಸಾಧನೆಯ ಕುರಿತು ಅಂದು ಮಾತನಾಡಿದ ಪ್ರಾಸ್ತಾವಿಕ ಭಾಷಣ ಇದೀಗ ಕಿರು ಕೃತಿಯ ಮೂಲಕ ವಿಭಾಗದ ಪ್ರಕಟಣೆಯಾಗಿ ಬೆಳಕು ಕಾಣುತ್ತಿದೆ. ಅವರ ಬದುಕು ಬರಹದ ಪಕ್ಷಿನೋಟ ಇಲ್ಲಿದೆ.

21ನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿಯೇ ಸಮಕಾಲೀನ ಸಾಹಿತ್ಯವನ್ನು ನಾವು ಓದಿ ವಿಶ್ಲೇಷಿಸಬೇಕಾಗಿದೆ. ಅಂಥ ಒಂದು ಕಿರು ಪ್ರಯತ್ನವಿದು. ಮೊನ್ನೆ ಮೊನ್ನೆಯಷ್ಟೇ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪಡೆದ ಡಾ. ಸುಧಾ ಮೂರ್ತಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಕೃತಿಯನ್ನು ಹೊರತರುವಲ್ಲಿ ಸಹಕರಿಸಿದ ವಿಭಾಗದ ಮಿತ್ರರಾದ ಡಾ. ಪೂರ್ಣಿಮಾ ಶೆಟ್ಟಿ. ಡಾ. ಉಮಾ ರಾಮರಾವ್, ಕಲಾ ಭಾಗ್ವತ್, ಪ್ರತಿಭಾ ರಾವ್, ವಿದ್ಯಾ ರಾಮಕೃಷ್ಣ, ಸವಿತಾ ಎಸ್. ಶೆಟ್ಟಿ ಅವರಿಗೆ ವಿಶೇಷ ವಂದನೆಗಳು. ಈ ಕೃತಿಗೆ ಸುಂದರವಾದ ಮುಖಪುಟವನ್ನು ಮಾಡಿಕೊಟ್ಟ ಕಲಾವಿದ ಜಯ ಸಾಲ್ಯಾನ್ ಅವರಿಗೆ ಕೃತಜ್ಞತೆಗಳು. ಇದನ್ನು ಸೊಗಸಾಗಿ ಮುದ್ರಿಸಿಕೊಟ್ಟ ನವೀನ್ ಪ್ರಿಂಟರ್ಸ್‌ನ ಎಲ್ಲ ಮಿತ್ರರಿಗೆ ಧನ್ಯವಾದಗಳು.

-ಪ್ರೊ. ಜಿ. ಎನ್. ಉಪಾಧ್ಯ

MORE FEATURES

ಚಿತ್ರ ಮತ್ತು ಅಕ್ಷರದಲ್ಲಿ ಒಡಮೂಡಿದ ಅಜ್ಜ ಅಜ್ಜಿಯ ನೆನಪು

28-05-2024 ಬೆಂಗಳೂರು

'ಕನ್ನಡ ಮತ್ತು ಇಂಗ್ಲಿಷ್‌ನ ಹೆಸರಾಂತ ಪತ್ರಿಕೆಗಳಾದ ಪ್ರಜಾವಣಿ, ಡೆಕ್ಕನ್‌ ಹೆರಾಲ್ಡ್‌ನ ಸಂಸ್ಥಾಪ...

ಮನೆ ಮದ್ದು ನೀಡುವ ಪಂಡಿತರ ಸೇವಾ ಮನೋಭಾವದ ಕುರಿತ ಲೇಖನ ಇದು

28-05-2024 ಬೆಂಗಳೂರು

‘ಹಳ್ಳಿ ಮದ್ದಿನ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಆ ವಿದ್ಯೆಯನ್ನು ಹಸ್ತಾಂತರಿಸುವ, ಬೆಳೆಸ...

ನಮ್ಮ ದೇಹ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ಆಕ್ರಮಣಕ್ಕೆ ತೆರೆದ ಹೆಬ್ಬಾಗಿಲು

28-05-2024 ಬೆಂಗಳೂರು

‘ಪರಿಸರ ಜ್ಞಾನದ ಹಿನ್ನೆಲೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ತಿಳಿವಳಿಕೆಯನ್ನು ಸಂಶೋಧನಾತ್ಮಕ ವಿವರಗಳೊಂದ...