Back To Top

 ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಭಾರತೀಯರು ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಚರಣೆ ಪದ್ಧತಿಗಳು ಹೆಚ್ಚು. ಅಪರ ಕರ್ಮಗಳನ್ನು ಮಾಡುವಾಗಲೂ ಅದು ಅನ್ವಯವಾಗುತ್ತದೆ. ಯಾವುದೇ ವ್ಯಕ್ತಿ ಸತ್ತ ನಂತರದ ಕ್ರಿಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಸತ್ತ ನಂತರದ ಮುಂದಿನ ಹಾದಿಯು ಯಾವ ರೀತಿ. ಭವ ಬಂಧನವನ್ನು ಕಳಚಿ ಇಹ ಲೋಕ ತ್ಯಜಿಸಿ ಪರ ಲೋಕ ಪಡೆಯಲಿ ಎಂಬ ಮಹತ್ವದ ಉದ್ದೇಶದಿಂದ ಬ್ರಾಹ್ಮಣ ಸಮಾಜದಲ್ಲಿ ಸತ್ತ ನಂತರ ಜನರಿಗೆ ಹಲವಾರು ಕಾರ್ಯಗಳನ್ನು ಮಾಡುವ ಪದ್ಧತಿ ಇದೆ.

"ಕರ್ಮ" ಕಾದಂಬರಿ
“ಕರ್ಮ” ಕಾದಂಬರಿ

ಗರುಡ ಪುರಾಣಗಳಲ್ಲಿನ ವರ್ಣನೆಯ ಅನುಸಾರ ಅವರುಗಳ ಮುಕ್ತಿ ಮಾರ್ಗ ದೊರೆಯುತ್ತದೆ ಎಂಬ ನಂಬಿಕೆ. ಸತ್ತ ನಂತರದ 12 ದಿನಗಳಲ್ಲಿ ನಡೆಯುವ ಕಾರ್ಯವನ್ನು ವಿಷಯ ವಸ್ತುವನ್ನಾಗಿ ಇಟ್ಟುಕೊಂಡು ಬರೆದಂತಹ ಕಾದಂಬರಿಯೇ ಕರ್ಮ.

ಇಂದಿನ ಕಾಲಘಟ್ಟದಲ್ಲಿ ಆಧುನಿಕತೆಯ ಮೆಟ್ಟಿಲುಗಳನ್ನು ಹತ್ತಿದ ನಂತರ ಹೇಗೆಲ್ಲಾ ಬದಲಾವಣೆಗಳಾಗಬಹುದು. ನಂಬಿಕೆ ಆಚಾರ ವಿಚಾರ ಶ್ರದ್ಧೆಗಳಲ್ಲಿ ಯಾವೆಲ್ಲಾ ರೀತಿಯ ಹೊಸ ರೀತಿಯ ಉದಯ ಹಾಗೂ ನಮ್ಮ ಮನಸ್ಥಿತಿಯ ಪರಿವರ್ತನೆಯಾಗಿದೆ ಎಂಬ ಚಿತ್ರಣವನ್ನು ಕೊಡುತ್ತದೆ.

ಸಿಟಿಯಲ್ಲಿ ಇರುವಂತಹ ಸುರೇಂದ್ರನ ನಂಬಿಕೆ ಶ್ರದ್ಧೆಗೂ ಮನೆಯಲ್ಲಿರುವ ನರಹರಿಯ ಭಾವ ಭಕ್ತಿಯನ್ನು “ಕರ್ಮ” ಕಟ್ಟಿಕೊಡುತ್ತದೆ. ಇಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಪ್ರಶ್ನೆಯಲ್ಲ ನಂಬಿಕೆ ಹಾಗೂ ಶ್ರದ್ದೆಯ ಮೇಲಿನ ಅವಲಂಬನೆಯ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತದೆ. ನಮ್ಮ ಮೇಲಿನ ಅವಲಂಬನೆ ಮತ್ತು ಪರರ ಮೇಲಿನ ಅವಲಂಬನೆಯ ಕುರಿತ ಜಿಜ್ಞಾಸೆಯು ಇಲ್ಲಿ ತಲೆ ಎತ್ತಿ ನಿಲ್ಲುತ್ತದೆ.

ಇಂತಹ ವಸ್ತುವಿರುವ ಒಂದು ಕಥಾ ಹಂದರವನ್ನು ಕರಣಂ ಪವನ್ ಪ್ರಸಾದ್ ಅವರು ಓದುಗರ ಕೈಗೆ ನೀಡಿದ್ದಾರೆ. ಇದರಲ್ಲಿ ಕಾಮ, ಪ್ರೀತಿ, ಅಸೂಯೆ, ಆಸೆ ಎಲ್ಲವೂ ಇದೆ. ನಮ್ಮನ್ನೇ ನಾವು ಪ್ರಶ್ನೆಗೆ ಒಡ್ಡಿಕೊಳ್ಳುವ ಪರಿಯೂ ಇದೆ.

ಪುಸ್ತಕ : ಕರ್ಮ
ಲೇಖಕ: ಕರಣಂ ಪವನ್‌ ಪ್ರಸಾದ್‌
ವಿಭಾಗ : ಕಾದಂಬರಿ

ದಿವ್ಯಶ್ರೀ ಹೆಗಡೆ
ಎಸ್‌.ಡಿ.ಎಂ ಕಾಲೇಜು, ಉಜಿರೆ

Prev Post

ಕಂಬಳ ಓಟಗಾರ ಶ್ರೀನಿವಾಸ ಗೌಡರ ಕುರಿತಾದ ‘ಕಂಬಳ ಶ್ರೀ’ ಕೃತಿ ಬಿಡುಗಡೆ

Next Post

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

post-bars

One thought on “ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

G S Kumarsays:

Wonderful review

Reply

Leave a Comment

Related post