Back To Top

 ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ಚಂಬಲ್ ಕಣಿವೆಯ ಕುಖ್ಯಾತಿಯನ್ನು ಪರಿಚಯಿಸುತ್ತಾ ಶುರುವಾಗುವ 12th ಫೇಲ್ ಸಿನಿಮಾ ಅಂತ್ಯವಾಗುವಾಗ ಒಂದಷ್ಟು ಪ್ರೇರಣೆಯ ಜೊತೆಗೆ ವೀಕ್ಷಕರ ಕಣ್ಣಂಚಿನಲ್ಲಿ ನೀರನ್ನೂ ತರಿಸುತ್ತದೆ. ಅತ್ಯಂತ ಬಡ ಹಾಗೂ ಸ್ವಾಭಿಮಾನಿ ಕುಟುಂಬದಿಂದ ಬರುವ ಮನೋಜ್ ಕುಮಾರ್ ಶರ್ಮಾ (ವಿಕ್ರಾಂತ್ ಮ್ಯಾಸಿ) ಈ ಕಥೆಯ ನಾಯಕ. ದಿಲ್ಲಿ ಸೇರಿ ಆರ್ಥಿಕ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟಿ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಐಪಿಎಸ್ ಅಧಿಕಾರಿಯಾಗುವ ಈ ಯಶೋಗಾಥೆ ನೈಜ ಘಟನೆ ಆಧಾರಿತ ಸಿನಿಮಾ.

ವಿಧು ವಿನೋದ್ ಚೋಪ್ರಾ ನಿರ್ದೇಶನದಲ್ಲಿ ತೆರೆ ಕಂಡಿರುವ ಈ ಚಿತ್ರ ಆರ್ಥಿಕ ಪರಿಸ್ಥಿತಿ ಸಾಧಿಸುವ ಛಲವಿದ್ದವನಿಗೆ ಮುಳುವಾಗಲಾರದು ಎಂಬ ಸಂದೇಶವನ್ನು ಸಾರಿ ಹೇಳುತ್ತವೆ. ಸಿನಿಮಾದಲ್ಲಿನ ‘ರೀಸ್ಟಾರ್ಟ್’ ಎಂಬ ಹಾಡು ನೋಡುಗನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಸಿನಿಮಾದ್ದುದ್ದಕ್ಕೂ ಕುಟುಂಬ ಹಾಗೂ ಗೆಳೆತನದ ಭಾವನಾತ್ಮಕ ಬೆಸುಗೆ ನೋಡುಗರ ಕಣ್ಣನ್ನು ಆದ್ರಗೊಳಿಸುತ್ತವೆ.

ತನ್ನೆಲ್ಲ ಸಂಕಷ್ಟಗಳನ್ನು ಹಿಮ್ಮೆಟ್ಟಿ ಐಪಿಎಸ್ ಅಧಿಕಾರಿಯಾಗುವ ಮನೋಜನ ಕಥೆ ಯುಪಿಎಸ್‌ಸಿ ಕನಸು ಕಂಡು ಕೈಚೆಲ್ಲಿ ಕೂತವರನ್ನು ಕಾಡದೇ ಇರಲಾರದು.

ನೈದಿಲೆ
ಎಸ್.ಡಿ.ಎಂ. ಕಾಲೇಜು, ಉಜಿರೆ

Prev Post

ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

Next Post

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

post-bars

Leave a Comment

Related post