Back To Top

 ಫಸ್ಟ್ ಕ್ಲಾಸಲ್ಲಿ ಪಾಸ್ ಆಯ್ತು ’12th ಫೇಲ್’ | ಹಣಮಂತ ಕಾಂಬಳೆ

ಫಸ್ಟ್ ಕ್ಲಾಸಲ್ಲಿ ಪಾಸ್ ಆಯ್ತು ’12th ಫೇಲ್’ | ಹಣಮಂತ ಕಾಂಬಳೆ

ಅನುರಾಗ ಪಾಠಕ್ ಅವರ ಇದೇ ಹೆಸರಿನ ಅತಿ ಹೆಚ್ಚು ಮಾರಾಟವಾದ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾದ ಚಿತ್ರ 12th ಫೇಲ್. ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಈ ಚಿತ್ರದ ಮೂಲಕ ಡಕಾಯಿತಿಗೆ ಹೆಸರಾಗಿದ್ದ ಚಂಬಲ್ ಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಬಂದು ದೇಶದ ಉನ್ನತ ಹುದ್ದೆಗಳಲ್ಲೊಂದಾದ ಐ ಪಿ ಎಸ್ ಆಗುವ ಆದರ್ಶನೀಯ ಕಥೆ ಪ್ರೇಕ್ಷಕರಿಗೆ ಪರಿಚಯಿಸ ಹೊರಟಿದ್ದಾರೆ.

ಹೌದು, ಚಿತ್ರದ ಕಥೆಯು ನೈಜ ಘಟನೆ ಆಧಾರಿತವಾಗಿದೆ . ಚಂಬಲ್ ನ ಸಣ್ಣ ಹಳ್ಳಿಯಿಂದ ಬಂದು ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಅವರ ಮತ್ತು ಅವರ ಹೆಂಡತಿ ಐ ಆರ್ ಎಸ್ ಅಧಿಕಾರಿ ಶ್ರದ್ಧಾ ಜೋಶಿಯವರ ನಿಜ ಜೀವನದ ಯಶಸ್ಸಿನ ಕಥೆಯಾಗಿದೆ. ಅವರ ಪರಿಶ್ರಮ, ವೈಫಲ್ಯ, ನಿರಂತರ ಹೋರಾಟ, ಪ್ರೀತಿ, ಮನೆ ಪರಿಸ್ಥಿತಿ ಹೀಗೆ ನಾನಾ ವಿಷಯಗಳ ಕುರಿತು ಚಿತ್ರದಲ್ಲಿ ಕಾಣಬಹುದು.

ಸಾಧನೆಗೆ ಸ್ಫೂರ್ತಿ ತುಂಬುವ ಕಥೆ –

ಚಿತ್ರದ ಪ್ರತಿ ಹಂತವು ನೋಡುರಿಗೆ ಒಂದೊಂದು ಪಾಠ ಹೇಳುತ್ತಲೇ ಸಾಗುತ್ತದೆ. ಚಿತ್ರದ ಆರಂಭದಿಂದಲೂ ಆ ಕಷ್ಟಗಳು, ದಿಟ್ಟ ಕನಸುಗಳು, ಗಟ್ಟಿ ನಿರ್ಧಾರಗಳು, ಕಥೆಯ ನಾಯಕ ವಿಕ್ರಾಂತ್ ಮಾಸ್ಸೇ ತಮ್ಮ ಮನೋಜ್ ಕುಮಾರ್ ಪಾತ್ರದ ಮೂಲಕ ತಿಳಿಸಿ ಕೊಡುತ್ತಾನೆ. ಐಪಿಎಸ್ ನಲ್ಲಿ ‘ಐ’ ಅಂದರೆ ಏನು ಎಂದು ಸಹ ತಿಳಿಯದ ಮನುಷ್ಯನ ಪಯಣ, ಸ್ಪರ್ಧಾರ್ಥಿಗಳ ಜೀವನ, ಸತತ ಪರಿಶ್ರಮ, ಆತನ ಸ್ವಾಭಿಮಾನ, ಎಲ್ಲವೂ ಒಂದೊಂದು ಪಾಠ.

ಶ್ರದ್ಧಾ ಎಂಬ ತಿರುವು

ಅಪ್ಪನ ಪ್ರಾಮಾಣಿಕತೆ, ಅಣ್ಣನ ಹುಂಬತನದಿಂದ ದಿಕ್ಕೆಟ್ಟ ಮನೋಜನಿಗೆ ಡಿಎಸ್ಪಿ ದುಶಂತ್ ಸಿಂಗ್ ಅವರನ್ನು ನೋಡಿದ ಮೇಲೆ ನಾನು ಬದುಕಿನಲ್ಲಿ ಇವರಂತೆಯೇ ಆಗಬೇಕೆಂಬ ಛಲ ಮೂಡಿ ದೆಹಲಿ ಸೇರಿ ಶ್ರಮಪಟ್ಟು ಓದುತ್ತಿದ್ದಾಗ ಆತನ ಬಾಳಿಗೆ

ಬಂದವಳೇ ಶ್ರದ್ಧಾ. ಆಕೆಯಿಂದಲೇ ಆತ ಒಮ್ಮೆ ಎಡವಿದರೂ ನಂತರ ಅವಳ ಬೆಂಬಲದಿಂದ ಬೆಟ್ಟದಂತಹ ಸಾಧನೆಗೆ ಮುನ್ನುಗ್ಗುವ ಪರಿಯನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.

ವೈಶಿಷ್ಟ್ಯಪೂರ್ಣ ಪಾತ್ರಗಳ ಬಲ –

ಚಿತ್ರದಲ್ಲಿ ನಾಯಕ ಮನೋಜ್ ನ ಸುತ್ತ ಸುತ್ತುವ ಪ್ರತಿ ಪಾತ್ರಕ್ಕೂ ತನ್ನದೇ ಆದ ತೂಕವಿದೆ. ಪ್ರತಿಯೊಂದು ವಾಸ್ತವ ಜೀವನದ ಒಂದೊಂದು ಸಮಸ್ಯೆಗಳನ್ನು ಹೊಂದಿಕೊಂಡಂತಿವೆ. ಮನೋಜನ ತಂದೆಯಾಗಿ ಹರೀಶ್ ಖನ್ನಾ, ತಾಯಿಯಾಗಿ ಗೀತಾ ಅಗರವಾಲ್ ಶರ್ಮಾ, ಗೆಳೆಯನಾಗಿ ಅಂಶುಮಾನ್ ಪುಷ್ಕರ್. ಮತ್ತು ನಾಯಕಿಯಾಗಿ ಮೇಧಾ ಶಂಕ‌ರ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನೂ ಚಿತ್ರ ನಿರ್ಮಾಣದ್ದಾಗಿದ್ದು.ಶಾಂತನು ಸಂಗೀತ, ಸ್ಟುಡಿಯೊಸ್ ರವರ ಮೋಯಿತಾ ರಾಮಬದ್ರನ್ ರಂಗರಾಜನ್ ಛಾಯಾಗ್ರಹಣ ಮಾಡಿದ್ದಾರೆ. ಒಟ್ಟಾರೆಯಾಗಿ ಚಿತ್ರ ಪ್ರಸ್ತುತ ಯುವ ಸಮುದಾಯಕ್ಕೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಭರವಸೆಯ ಬಲ ಮತ್ತು ಮಾರ್ಗದರ್ಶಕದಂತ ಕೆಲಸ ಮಾಡುವುದು ಸುಳ್ಳಲ್ಲ.


ಹಣಮಂತ ಕಾಂಬಳೆ
ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ,
ತುಮಕೂರು 

Prev Post

ಸಂಜೆಯಲಿ ಬಾನು ನಸುಗೆಂಪು ರಂಗೇರಿದ ಹೊತ್ತು | ಯೋಗೀಶ ಪಿ

Next Post

ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್‌

post-bars

Leave a Comment

Related post