Back To Top

 ತೇಜಸ್ವಿ ಹೇಳಿದ ಮಹಾ ಪಲಾಯನದ ಕತೆ | ತೇಜಸ್

ತೇಜಸ್ವಿ ಹೇಳಿದ ಮಹಾ ಪಲಾಯನದ ಕತೆ | ತೇಜಸ್

ಈ ಶತಮಾನ ನಾಗರೀಕತೆಯ ಹೆಸರಿನಲ್ಲಿ, ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಯಾವ ಶಿಲಾಯುಗದ ಮನುಷ್ಯನು ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರಿವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರೆಪಿಸುತ್ತದೆ. (ಮುನ್ನುಡಿ)

‘ಮಹಾ ಪಲಾಯನ’ ಇದು ಕನ್ನಡದ ಪ್ರಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಅನುವಾದ ಮಾಡಿರುವ ಅದ್ಭುತ ಕೃತಿ, ರಷ್ಯಾದ ಲೇಖಕ ‘ಸ್ಲಾವೊಮಿರ್ ರಾವಿಸ್ಕಿ ಬರೆದ ಅದ್ಭುತ ಕೃತಿ “ದಿ ಲಾಂಗ್ ವಾಕ್” ಎಂಬ ಕೃತಿಯ ಭಾಷಾನುವಾದವೇ ಈ ‘ಮಹಾಪಲಾಯನ’. ಅದು 19ನೇ ಶತಮಾನದಲ್ಲಿ ರಷ್ಯಾದಲ್ಲಿ ಕಮುನಿಷ್ಟರ ಕಾರುಬಾರು ನೆಡೆಯುತ್ತಿರುವ ಕಾಲದಲ್ಲಿ ರಷ್ಯಾದ ಕಮುನಿಷ್ಟರು ಸೋವಿಯತ್‌ ರಷ್ಯಾದ ಕಮುನಿಷ್ಟ್ ವಿರೋಧಿಗಳ ವಿರುದ್ಧ ಮಾಡುತ್ತಿದ್ದ ಕುತಂತ್ರದ ಜಾಲವನ್ನು ಬಯಲು ಮಾಡುವ ಕೆಲವೇ ಕೆಲವು ಅಮೂಲ್ಯ ಕೃತಿಗಳಲ್ಲಿ ಈ ಮಹಾ ಪಲಾಯನವೂ ಒಂದು, ಅದರಲ್ಲೂ ಕನ್ನಡದ ಓದುಗರನ್ನು ಅಯಸ್ಕಾಂತದಂತೆ ಸೆಳೆಯುವ ತೇಜಸ್ವಿ ಬರಹದ ಛಾಪನ್ನು ಈ ಕೃತಿಯಲ್ಲೂ ಕಾಣಬಹುದು.

ಸೋವಿಯತ್ ರಷ್ಯಾದ ಕಮುನಿಷ್ಟರನ್ನು ವಿರೋಧಿಸಿದ ಕಾರಣದಿಂದ ಸೈಬಿರಿಯಾದ ಹಿಮನಾಡಿಗೆ ಸೆರೆಯಾಳುಗಳಾಗಿ ಹೋಗುವವರನ್ನ ಆ ಹಿಮನಾಡಿನಲ್ಲಿ ನೆಡೆಸಿಕೊಳ್ಳವ ರೀತಿ, ಅವರಿಗೆ ಕೊಡುತ್ತಿದ್ದ ಮೈಮೂಳೆ ಮುರಿಯುವಂತ ಕೆಲಸ, ಬಕಾಸುರನ ಹೊಟ್ಟೆಗೆ ಕೊಡುತ್ತಿದ್ದ ಒಣಗಿದ ಬ್ರೆಡ್ಗಳು, ಅಷ್ಟಲ್ಲದೆ ಯುವ ವಯಸ್ಸಿನಲ್ಲಿ ಸ್ವತಂತ್ರದ ಕನಸು ಕಾಣುತ್ತಿದ್ದ ಸ್ಲಾವೊಮಿರ್ ರಾವಿಸ್’ನಂತ ಯುವ ಜನರಿಗೆ ಸ್ವತಂತ್ರದ ಬಯಕೆ ಆ ಹಿಮನಾಡು ಸೈಬೀರಿಯಾದಲ್ಲಿ ಬೆಳೆಯಲು ಅವರ ಅತ್ಮಾಭಿಮಾನವೇ ಕಾರಣ ಎನ್ನುವುದನ್ನು ತೇಜಸ್ವಿ ಅಮೋಘವಾಗಿ ಚಿತ್ರಿಸಿದ್ದಾರೆ.

ಆ ಕಮುನಿಷ್ಟರ ಹಿಮ ಜೈಲಿಂದ ಸ್ವಾತಂತ್ರ್ಯದ ನಾಡಿಗೆ ಹೋಗುವ ಕನಸಲ್ಲಿ ಇದ್ದ ಕೆಲವರು ಈ ಸ್ಲಾವೊಮಿರ್’ನ ಜೊತೆಗೆ ಬಂದು ನಿಲ್ಲವುದು, ಪಲಾಯನದ ಸುಳಿವು ಕಮುನಿಷ್ಟರ ಅಧಿಕಾರಿಗಳಿಗೆ ತಿಳಿದರೆ ಅವರನ್ನು ನಾಯಿಗಳ ತರ ಬೋನಿನಲ್ಲಿ ಬಂಧಿಸುತ್ತಿದ್ದರು ಎಂಬ ಅಪಾಯವನ್ನು ಅರಿತು ಅವರ ಪಲಾಯನದ ಕೆಲಸ ಮಾಡಬೇಕಾಗಿತ್ತು, ಅಂತಹ ಸಂದರ್ಭದಲ್ಲಿ ಈ ಮಹಾ ಪಲಾಯನಕ್ಕೆ ಒಂದು ತಿರುವು ನೀಡುವ ಆ ಕಮುನಿಷ್ಟ ಜೈಲರ್‌ನ ಹೆಂಡತಿ, ಆ ಸೈಬೀರಿಯಾದ ಜೈಲಿನ ನೀತಿಗೊ ಅಥವಾ ತನ್ನ ಗಂಡನನ್ನು ಈ ಜಾಗಕ್ಕೆ ವರ್ಗಮಾಡಿದ ಕಮುನಿಷ್ಟರಿಗೆ ಬುದ್ದಿ ಕಲಿಸಲೆಂದೊ, ಅಂತಹ ಹಿಮ ನಾಡಿನ ಒಬ್ಬಂಟಿ ಜೀವನಕ್ಕೆ ಬೇಸತ್ತೋ . ಆ ಜೈಲರ್‌ನ ಹೆಂಡತಿ ಕೂಡ ಈ ಮಹಾಪಲಾಯನಕ್ಕೆ ಉತ್ತೇಜನ ನೀಡುತ್ತಾಳೆ.

ಅವರಿಗೆ ಮಾಡುವ ಸಹಾಯ, ಸ್ಲಾವೊಮಿರ್ ಆಕೆಯ ಸಹಾಯ ಮತ್ತು ಸೂಚನೆಯಂತೆ ತನ್ನಂತೆ ಪಲಾಯನದ ಹಾದಿಕಾಯುತ್ತಿದ್ದ 6 ಜನರೊಂದಿಗೆ ಆ ಭಯಂಕರ ಹಿಮನಾಡು ಸೈಬಿರಿಯಾದ ಜೈಲಿನಿಂದ ಕಮುನಿಷ್ಟ್ ಸೈನಿಕರ ಕಣ್ಗಾವಲು ತಪ್ಪಿಸಿ ಪರಾರಿಯಾಗುತ್ತಾರೆ. ಸಿಕ್ಕಿಬಿದ್ದರೆ ಕಮುನಿಷ್ಟರು ಕೊಡುವ ಶಿಕ್ಷೆಯನ್ನು ನೆನದು ಬರಿಗಾಲಿನಲ್ಲಿಯೇ ಯಾರಿಗೂ ತಿಳಿಯದಂತೆ ನೂರಾರು ಮೈಲುಗಳ ಪಯಣ ಬೆಳೆಸುತ್ತಾರೆ. ಕಮುನಿಷ್ಟರ ಹುಡುಕಾಟ ನಿಂತಿರವಾಗಿರಬಹುದು ಎಂಬ ಸೂಚನೆ ಸಿಕ್ಕರೂ ತಮ್ಮ ಗುರಿಯನ್ನು ಮುಟ್ಟಲು ಅವರು ಮಾಡುವ ಸಹಸ, ಕಾಡಿನ ದಾರಿಯಲ್ಲಿ ಕಮುನಿಷ್ಟರ ರಾಕ್ಷಸ ಕೈಯಿಂದ ತಪ್ಪಿಸಿಕೊಂಡು, ತಮ್ಮಂತದೇ ಮತ್ತೊಂದು ಸ್ಥಿತಿಯಲ್ಲಿದ್ದ ಅನಾಥ ಬಾಲಕಿಯ ಮೇಲೆ ಇವರು ತೋರುವ ಕರುಣೆ ಮನಮುಟ್ಟುತ್ತದೆ.

ಈ ಮಹಾ ಪಲಾಯನದ ಯಾನದಲ್ಲಿ ಅನಾಥ ಬಾಲಕಿ ಇವರ ಜೊತೆಯಲ್ಲಿ ಬರುವುದು, ದಾರಿಯಲ್ಲಿ ಹೆಪ್ಪುಗಟ್ಟುವ ಚಳಿಯಲ್ಲಿದ್ದ ಸೈಬಿರಿಯನ್ ರಷ್ಯನ್ ನದಿಗಳನ್ನು ದಾಟುವ ಸಾಹಸ, ರಷ್ಯನ್ನರ ಕಣ್ಣಿಗೆ ಬೀಳದಂತೆ ಬೃಹತ್ ರಷ್ಯಾವನ್ನು ದಾಟಿ ಮಂಗೋಲಿಯಾ ತಲುಪುವುದು ಅವರಿಗೆ ಗುರಿಯಾಗಿತ್ತು. ಮಂಗೋಲಿಯಾ ತಲುಪಿದಾಗ ತಾವು ಸ್ವಲ್ಪ ಮಟ್ಟಿಗೆ ಸುರಕ್ಷಿತ ಎನಿಸಿದಾಗಲೂ ನಿಲ್ಲದೆ ರೋಚರ ಯಾತ್ರೆ ಮುಂದುವರೆಯುತ್ತದೆ. ಕಮುನಿಷ್ಟರ ಕಾಟದಿಂದ ಮನುಷ್ಯ ಜನಾಂಗದ ಮೇಲೆ ನಂಬಿಕೆ ಕಳೆದುಕೊಂಡ ಈ ಮಹಾಪಲಾಯನಿಗಳಿಗೆ ಅಲೆಮಾರಿ ಮಂಗೋಲಿಯನ್ನರು ಸಹಾಯ ಮಾಡುತ್ತಾರೆ. ಹೊಟ್ಟೆಯ ಹಸಿವನ್ನು ತಾಳಲಾರದೆ ಕಳ್ಳತನಕ್ಕೂ ಇಳಿಯುತ್ತಾರೆ. ಕೊನೆಗೆ ಅವರು ಮಂಗೋಲಿಯಾ ದಾಟಿ ಚೀನಾಕ್ಕೆ ಬಂದು ಸೇರುತ್ತಾರೆ.

ಅವರಿಗೆ ಅರಿವಿಲ್ಲದಂತೆ ಭಯಂಕರ ‘ಗೋಬಿ’ ಮರುಭೂಮಿಯ ಪ್ರವೇಶ ಹಿಮದ ಸಮುದ್ರ ದಾಟಿ ಬಂದವರು ಮತ್ತೆ ಮರಳಿನ ಸಾಗರ ದಾಟಬೇಕಾಗಿತ್ತು. ಹಗಲು ಬಿಸಿಲುಗಳ ಲೆಕ್ಕವಿಲ್ಲದೇ ಗೊತ್ತಿಲ್ಲದ ಭೀಕರ ಗೋಬಿ ಮರುಭೂಮಿಯಲ್ಲಿ ಭೂಮಿಯೆಂಬ ಓಯಸಿಸ್‌ ಹುಡುಕಿ ಪಯಣ ಸಾಗುತ್ತದೆ. ಆ ಸಾಹಸ ಯಾತ್ರೆಯ ನಡುವೆಯೇ ಅವರ ಜೊತೆಯಲ್ಲಿ ಪಲಾಯನ ದಿಕ್ಕಿನಲ್ಲಿ ಸಾಗುತ್ತಿದ್ದ ಅನಾಥ ಬಾಲಕಿಯ ಸಾವು, ನಂತರ ಈ ಗೋಬಿ ಮರುಭೂಮಿಯಲ್ಲಿ ಮತ್ತೊಬ್ಬ ಜೊತೆಗಾರನ ಸಾವು ಅವರನನು ಕಾಡುತ್ತದೆ. ಆಹಾರವಿಲ್ಲದೆ ದಿನಗಟ್ಟಲೆ ಮರುಭೂಮಿಯ ಭೀಕರ ಪಯಣ ಎಲ್ಲಾರಿಗೂ ಇಲ್ಲೇ ಕೊನೆ  ಎಂದು ತಿಳಿದಿರುತ್ತಾರೆ. ಬದುಕುಳಿವ ಆಸೆಯ ಒಸರಿಗಾಗಿ ಅಲ್ಲಿ ಸಿಕ್ಕುವ ಹಾವುಗಳನ್ನು ತಿಂದು ಬದುಕುತ್ತಾರೆ.

ಅವರು ಆ ಭೀಕರ ಮರುಭೂಮಿ ದಾಟಿದ್ದು. ನಂತರ ಟಿಬೇಟ್ ದಾರಿ ಹಿಡಿಯುತ್ತಾರೆ. ಟಿಬೇಟಿಯನ್ನರಿಂದ ಅತಿಥಿ ಸತ್ಕಾರ ಸ್ವೀಕರಿಸುತ್ತಾರೆ. ಅವರ ಸಹಾಯದ ನಂತರ ಪ್ರಪಂಚದ ಅತೀ ದೊಡ್ಡ ಪರ್ವತ ಶ್ರೇಣಿ ಹಿಮಾಲಯದ ಮೇಲಿನ ಯಾತ್ರೆ ಆರಂಭವಾಗುತ್ತದೆ. ಯಾವುದೇ ವೈಜ್ಞಾನಿಕ ಸಲಕರಣೆಗಳು ಇಲ್ಲದೇ ಹಿಮಾಲಯದ ಶಿಖರಗಳನ್ನು ಏರಲು ಆರಂಭಿಸುತ್ತಾರೆ. ಹಿಮಪಯಣದಲ್ಲಿ ಮತ್ತೊಬ್ಬನ ಸಾವು ಸಂಭವಿಸುತ್ತದೆ. ಆದರೂ ಗುರಿಯೆಡೆಗೆ ಸಾಗುವ ಈ ಪಲಾಯನಕಾರರ ಛಲ ಕುಂದುವುದಿಲ್ಲ.

ಇನ್ನೆನೂ ಹಿಮಾಲಯದ ದಾಟಿ ತಮ್ಮ ಗುರಿ ತಲುಪಿದರು ಎನ್ನುವಷ್ಟರಲ್ಲಿ ಬೃಹತ್ ಕಂದಕದೊಳಗೆ ಮತ್ತೊಬ್ಬ ಕಾಣದಂತೆ ಮಾಯವಾಗುತ್ತಾನೆ. ಹಿಮಾಲಯ ಮುಗಿದು ಭಾರತ ಸಮೀಪವಾದಗ ಅದುವರೆಗೊ ಅವರು ನೊಡದ ವಿಚಿತ್ರ ಮಾನವ ರೀತಿಯ ಪ್ರಾಣಿ ಎದುರಾಗುತ್ತದೆ. ಕೊನೆಗೆ ಭಾರತದ ಗಡಿಗೆ ಬಂದು ಸೇರುತ್ತಾರೆ. ಇದು ಅವರಿಗೆ ಸುಕ್ಷಿತ ತಾಣ ಎಂಬ ಅರಿವಿರುತ್ತದೆ. ಅವರು ಬಯಸಿದಂತೆ ಇಲ್ಲಿ ರಕ್ಷಣೆಯೂ ಸಿಗುತ್ತದೆ.

ನಾಲ್ಕು ಸಾವಿರ ಮೈಲಿಗಳ ಮಹಾ ಪಲಾಯನದ ನಂತರ ಅವರು ಮತ್ತೆ ಮೊದಲಿನಂತೆ ಆಗಲು ಭಾರತೀಯರು ಸಹಾಯ ಮಾಡುತ್ತಾರೆ. ಈ ಎಂಟು ಜನರ ಮಹಾ ಪಲಾಯನದ ಅಂತ್ಯದಲ್ಲಿ ಗುರಿ ತಲುಪಿದವರು ಮೂವರು ಮಾತ್ರ, ಅದರಲ್ಲಿ ಈ ಕತೆಯ ನಾಯಕನ ಸ್ಲಾವೊಮಿರ್ ಕೂಡ ಒಬ್ಬ. ನಾಲ್ಕು ಸಾವಿರ ಮೈಲಿಗಳು ಈ ಮಹಾ ಪಲಾಯನವನ್ನು ಅವರು ತಮ್ಮ ಗುರಿಯನ್ನು ಮುಟ್ಟಲು ಮಾಡುವ ಮಹಾ ಸಾಹಸವನ್ನು, ಕಮುನಿಷ್ಟರ ಕ್ರೌರ್ಯ, ಬಡ ಜನರ ಮಾನವೀಯತೆಯ ಮುಖಗಳ ಅನುಭವನ್ನು ಅಕ್ಷರಕ್ಕೆ ಇಳಿಸಿದ್ದಾರೆ. ತೇಜಸ್ವಿಯವರು ಭಾಷಾಂತರಿಸಿದರೂ ಓದಿಗೆ ತೊಡಕಾಗದಂತೆ ಮಹಾ ಪಲಾಯನವನ್ನು ಮಂಡಿಸಿದ್ದಾರೆ. ಓದುವಾಗ ಸ್ಲಾವೊಮಿರ್ ಜೊತೆಯಲ್ಲಿ ನಮ್ಮ ಪಯಣವೂ ಇದೆ ಎಂದೆನಿಸುತ್ತದೆ.

ತೇಜಸ್
ಎಸ್‌. ಡಿ. ಎಮ್‌. ಕಾಲೇಜು, ಉಜಿರೆ

Prev Post

‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ

Next Post

ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ

post-bars

Leave a Comment

Related post