Back To Top

 ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಸುತ್ತಲೂ ಕತ್ತಲು
ರಸ್ತೆ ಬದಿಯಲಿ ನಿಂತಿರಲು,
ಅಲಂಕಾರ ಸಮೇತ
ಕೈಯಲ್ಲೊಂದು ಟಾರ್ಚ್ ಲೈಟ್!
ಇದು ಎಷ್ಟುತಾನೇ ಬೆಳಕು ನೀಡಬಲ್ಲದು
ಅವಳ ರೆಡ್ ಲೈಟ್ ಬದುಕಿಗೆ!!

ಬೆರಳ ಸನ್ನೆಯಲಿ
ಬೆಲೆ ನಿಗದಿ ಮಾಡುವಳು ದೇಹಕೆ,
ಒಪ್ಪದ ಮನಸ್ಸು ಬಿಡದ ಸನ್ನಿವೇಶ
ಮೈಯನ್ನೇ ತಣಿಸುವಳು
ಮೈತುಂಬಿರುವ ಸಾಲಕೆ!

ಬಾಳ ದನಿ ಕಳಚಿದರೂ
ನೋವಿನ ಚಹರೆಗಳಿಗೆ
ಗೋಡೆ ಕಟ್ಟಿ ನಗುತಿರಲು!!

ಶರಣಪ್ಪ ದಿನ್ನಿ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Prev Post

ನಾಳೆಯಿಂದ ಗೋವಿಂದ ದಾಸ ಕಾಲೇಜಿನಲ್ಲಿ ಯುವ ಕಥೆಗಾರರಿಗೆ ದೇಸಿ ಕಥಾಕಮ್ಮಟ

Next Post

ನೇಸರನ ಚಿತ್ತಾರಕ್ಕೆ ಆಗಸವೇ ಕ್ಯಾನ್ವಾಸ್‌ | ಈಶ ಎಸ್‌ ಪಿ

post-bars

One thought on “ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಚೆನ್ನಾಗಿದೆ ಬಾಸ್

Reply

Leave a Comment

Related post