Back To Top

 ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಅಮ್ಮ– ಶಿವು….ಬಾ ಇಲ್ಲಿ
ಶಿವು– ಏನಮ್ಮ
ಅಮ್ಮ– ಶಿವು ಸ್ವಲ್ಪ ಅಂಗಡಿ ಹತ್ತಿರ ವ್ಯಾಪಾರ ನೋಡ್ಕೊಳ್ಳೊ… ನಾನು ಅಪ್ಪನಿಗೆ ತಿಂಡಿ ಮಾಡಿಟ್ಟು ಬೇಗ ಬರ್ತೀನಿ..
ಗ್ರಾಹಕ– ಹೆಂಗೆ ಟೊಮಾಟೊ.
ಶಿವು– ಹಾ…. ಅರ್ಥ ಆಗಲಿಲ್ಲ..
ಗ್ರಾಹಕ– ಟೊಮಾಟೊ ಹೆಂಗಪ್ಪ
ಶಿವು– ಆ.. ಟೊಮಾಟೊ ನಾ.. ಹೂ.. ಚೆನ್ನಾಗಿದೆ. ಬೆಳಗ್ಗೆನೆ ಅಪ್ಪ ಮಾರ್ಕೆಟಿಂದ ಫ್ರೆಷಾಗೆ ತಂದದ್ದು.
ಗ್ರಾಹಕ– [ ಎಂತ ಹೇಳ್ತಿದ್ದಾನೆ ಇವನು…] ಹೋಗಲಿ ನುಗ್ಗೆಕಾಯಿ ಹೆಂಗೆ..
ಶಿವು– [ ಎಂತ ಕೇಳ್ತೀದ್ದದಾರೆ ಇವರು. ಅರ್ಥವೇ ಆಗ್ತಿಲ್ಲವಲ್ಲ..] ನುಗ್ಗೆಕಾಯಿ ನಾ ಅದು ಚೆನ್ನಾಗಿದೆ.. ಎಳೆದು. ಘಮ ಘಮ ಅಂತಿದೆ.. (ಅಮ್ಮ ಬರುವಳು)
ಅಮ್ಮ– ಏನು ಬೇಕಿತ್ತು.
ಗ್ರಾಹಕ– ಟೊಮಾಟೊ ಹೆಂಗಪ್ಪ ಅಂದರೆ ನಿಮ್ಮ ಮಗ ಚೆನ್ನಾಗಿದೆ ಅಂತ ಏನೇನೋ ಹೇಳ್ತಿದ್ದಾನೆ.
ಅಮ್ಮ– [ ಮಗನನ್ನು ಒಮ್ಮೆ ಗುರಾಯಿಸಿ..] ಹೌದಾ….. ಅವನು ಹಾಗೆ ಬಿಡಿ.. ಟೊಮಾಟೊ ನಾ ಕೆ.ಜಿ 50 ರೂ
[ಶಿವುಗೆ ಸಿಡಿಲು ಬಡಿದಂತಾಯಿತು]
ಗ್ರಾಹಕ– 1 ಕೆ. ಜಿ ಕೊಡಿ. ನುಗ್ಗೆಕಾಯಿ ಹೆಂಗೆ?
ಅಮ್ಮ– ಜೋಡಿ 10 ರೂ
ಗ್ರಾಹಕ– ಕೊಡಿ…. [ ನಿರ್ಗಮಿಸುವನು]
ಅಮ್ಮ– ದಡ್ಬುರುಡೆನ ತಂದು…. ವ್ಯಾಪಾರ ಮಾಡೊ ಅಂದ್ರೆ ಎಂತ ಮಾಡ್ತಿದ್ಯಾ ನೀನು….?
ಶಿವು– ಅಮ್ಮ ಎಷ್ಟು ಅಂತ ಕೇಳಿದರೆ ಬೆಲೆ ಹೇಳ್ಬೋದು.. ಹೆಂಗೆ ಹೆಂಗೆ ಅಂದ್ರೆ ನಾನೇನಮ್ಮ ಹೇಳಿ.. ಅವರಿಗೆ ಕನ್ನಡಾನೆ ನೆಟ್ಟಗೆ ಗೊತ್ತಿಲ್ಲ.
ಅಮ್ಮ– ಅವರಿಗ? ನಿನಗ? ಹೆಂಗೆ ಅಂದ್ರು ಅದೇ ಅರ್ಥ ಕಣೋ..
ಶಿವು– ನಾನು ಪುಸ್ತಕದಲ್ಲಿ “ಎಷ್ಟು” ಅಂತಾನೇ ಓದಿರೋದು ಮಾ.. ಹೆಂಗೆ ಅಂದ್ರೆ, “ಎಷ್ಟು” ಅಂತ ಹೇಗಾಗುತ್ತೆ … ಹೆಂಗೆ ಅಂದ್ರೆ ಇಂಗ್ಲಿಷ್ ಅಲ್ಲಿ how ಅಂತ how much ಅಂತ ಅಲ್ಲ .
ಅಮ್ಮ– ನಿನ್ನ ಇಂಗ್ಲಿಷಿಗೆ ಒಂದಿಷ್ಟು ಬೆಂಕಿ ಹಾಕ… ಯಾರೊ ನಿನಗೆ ಭಾಷೆ ಹೇಳಿ ಕೊಟ್ಟವರೂ… ನಿನ್ನ ಕೈಯಲ್ಲಿ ಅಂಗಡಿ ಬಿಟ್ಟು ಹೋದವರ ಪಾಡು.. ಎಂದು ತಲೆ ಚಚ್ಚಿಕೊಂಡರು.

ಶಿಲ್ಪ. ಬಿ
ಪ್ರಥಮ ಪಿ ಯು ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು

Prev Post

ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

Next Post

ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್‌ ಗೊಲಾನ್‌

post-bars

Leave a Comment

Related post