Back To Top

 ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ ಭೋವಿ

ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ ಭೋವಿ

ಬಲುಜೋರು ನಮ್ಮ ಸಂಸದರಿವರು
ತಿರುಗುವವರು ಕೆಂಪುಗುಟದ ಕಾರಿನಲ್ಲಿ ಊರೂರು
ತುಂಬಿ ತುಳುಕುತಿವೆ ದನ ಕರುಗಳು ಮನೆಯಲ್ಲಿ
ಯಾರು ಕೇಳೋರಿಲ್ಲ ಮುಗ್ಧ ಜನರ ಗೋಳ

ಮತಗಳ ಕೇಳುತ ಕೈ ಮುಗಿದು ಬರುವರು
ಜನರಿಗೆ ಸುಳ್ಳಿನ ಹೊಳೆಯೇ ನೀಡುವರು
ನಿಮಗೆ ಉಚಿತ ಮನೆ ಕೊಡುವೆನು
ಭಾಗ್ಯಗಳ ಮಳೆಯೇ ಸುರಿಸುವೆನು ಎಂದು.

ಕೊಡುವರು ಗೆದ್ದ ನಂತರ ಬೆಲೆ ಏರಿಕೆ ಬಿಸಿಯಾ
ಮಳೆಯಿಂದ ಬರಗಾಲದೆಡೆಗೆ ಜನರ ಭಾಗ್ಯಗಳ
ಹೇಳುವವರು ಸಭೆ ಸಮಾರಂಭಗಳಲ್ಲಿ
ಜನರ ಕಷ್ಟಗಳೇ ನಮ್ಮ ಕಷ್ಟಗಳೆಂದು ಕೈ ಮುಗಿದು

ಅವರಬಳಿ ಕಷ್ಟಗಳೆಂದು ಹೋದರೆ ಹೇಳುವವರು ಸರಿ-ಸರಿ ಎಂದು..
ನಡೆಯುತ್ತಿರುವಾಗ ಸದನದಲ್ಲಿ ಚರ್ಚೆ
ಜನರ ಕಷ್ಟಗಳ ಸೈಡ್ಗೆ ಸರಿಸಿ ನಿದ್ರಿಸುವರು

ದಿನವಿಡಿ ನಿದ್ರೆಯ ಮಬ್ಬಿನಲ್ಲಿಹರು
ನಮ್ಮ ಸಂಸದರು
ಮುಳುಗುವವರು ಭ್ರಷ್ಟಾಚಾರದ ಸಮುದ್ರದಲ್ಲಿ
ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು

ಮಲ್ಲಪ್ಪ ಭೋವಿ
ಬಿ.ಎ.ಅಂತಿಮ ವರ್ಷ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುದಗಲ್

Prev Post

ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

Next Post

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

post-bars

Leave a Comment

Related post