Back To Top

 ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ ವರ್ಣನೆ ಭಾವನೆಯ ಪರಿಧಿಯಿದೆ.

ಈ ಪುಸ್ತಕದಲ್ಲಿ ಅಂತಹ ಹಲವಾರು ಘಟನೆಯಿದೆ. ಇಸ್ರೇಲಿನ ಕ್ರೂರ ದಿನಗಳಿವೆ. ನಾಜಿಗಳ ಆಳ್ವಿಕೆಯ ಕಾಲದಲ್ಲಿ ಯಹೂದಿಗಳ ಮೇಲಾದ ದಬ್ಬಾಳಿಕೆ ಇದೆ. ಅಲ್ಲಿಂದ ಆ ಕ್ರೂರ ತಾಣದಿಂದ ತಪ್ಪಿಸಿಕೊಂಡು ಬಂದ ಹೆಣ್ಣುಮಗಳ ಚರಿತ್ರೆಯಿದೆ. ಯಹೂದಿಯಾದ ಅವಳು ಭಾರತಕ್ಕೆ ಬಂದು ಹಿಂದುವಾಗಿ ಬಾಳುವ ಅವಳ ಕಥೆ ಪ್ರಾರಂಭವಾಗುವುದು ದೇಶ, ದೇಶ ಸುತ್ತಬೇಕು. ಎಂದೋ ಬೆರ್ಪಟ್ಟ ತನ್ನವರ ಬಗ್ಗೆ ತಿಳಿಯಬೇಕು ಎಂಬ ಆಸೆಯಿಂದ ಎಲ್ಲಾ ದೇಶವನ್ನು ಸುತ್ತುವ ಹ್ಯಾನಾ ಕೊನೆಗೆ ತನ್ನವರೂ ಎನಿಸಿಕೊಂಡ ಪ್ರೀತಿಯ ಅಕ್ಕನ್ನು ಅಂತೂ ಇಂತೂ ಹುಡುಕಿ ತನ್ನೆಲ್ಲಾ ಕುಟುಂಬದ ಬಗ್ಗೆ ತಿಳಿಯುವ ಇವಳಿಗೆ ಅಕ್ಕನ ಕರಾಳದಿನಗಳಲ್ಲಿ ತಾನು ಭಾರತದಲ್ಲಿ ಒಂದು ಕುಟುಂಬದೊಟ್ಟಿಗೆ ಹೇಗಿದ್ದೆ ಎಂಬ ಸನ್ನಿವೇಶಕ್ಕೂ ಅಜಗಜಾಂತರದ ಭಾವ.

ಯಾವುದೋ ಒಂದು ಸಿದ್ಧಾಂತ ಅದರದ್ದೆ ಸ್ಥಾಪನೆಗಾಗಿ ಹೇಗೆಲ್ಲಾ ಕ್ರೂರವಾಗಿ ನಡೆದುಕೊಳ್ಳುತ್ತಿದೆ ಮತ್ತು ಲೆಕ್ಕಕ್ಕೆ ಸಿಗದಷ್ಟು ಜಾತಿ, ಧರ್ಮಗಳಿರುವ ಭಾರತವಿರುವ ರೀತಿಯನ್ನು ಯಾರಾದರೂ ಪ್ರಶಂಸಿಸಲೇಬೇಕು. ಆದರೂ ಪ್ರತೀ ಒಂದು ಧರ್ಮದಲ್ಲಿಯೂ ಹುಳುಕುಗಳಿವೆ. ಅಲ್ಲಾ ತಪ್ಪು ತಪ್ಪಿರುವುದು ಧರ್ಮದಲ್ಲಿಯಲ್ಲ ತಾನು ಹೇಳಿದ್ದೇ ಸರಿ ಎಂಬ ಭಾವನೆಯಲ್ಲಿ. ನಾನು ಎನ್ನುವ ಭಾವನೆಯಲ್ಲಿ ಅಷ್ಟೆ. ಈ ಪುಸ್ತಕದಲ್ಲಿ ಪ್ರತೀ ಧರ್ಮವನ್ನೂ ಟೀಕಿಸಿದ್ದಾರೆ ಹಾಗೆ ಒಳ್ಳೆಯ ವಿಚಾರವನ್ನು ಹೇಳಿದ್ದಾರೆ.

ಒಂದು ಜೀವನದ ಪಯಣದ ಏರಿಳಿತಗಳಲ್ಲಿ ಭೂತ, ಭವಿಷ್ಯ ಹಾಗೂ ವರ್ತಮಾನದಲ್ಲಿನ ಜೀವನ. ಅನಿತಾ ಆಗಿ ಬದಲಾಗಿದ್ದ ಹ್ಯಾನಾಳ ಕಥೆ. ಇಸ್ರೇಲಿನ ಕರಾಳದಿನಗಳನ್ನು ಕೇಳಿದ ಅವಳ ಮನದಲ್ಲಿ ಅಷ್ಟೇ ಅಲ್ಲಾ ನಮ್ಮ ಮನದಲ್ಲಿಯೂ ಅದೇನೋ ಬೇಸರ. ಇಂತಹ ಇತಿಹಾಸವನ್ನು ಹೂತುಬಿಡುವ ಬಯಕೆ. ಹೊಸ ದಿನಗಳನ್ನು ಪ್ರೀತಿ, ಸ್ನೇಹ, ವಿಶ್ವಾಸದ ಮೂಲಕ ಕಟ್ಟಿಬೆಳೆಸಬೇಕು ಎಂಬ ಮನಸ್ಸು ಅತೀಯಾಗಿ ಕಾಡುತ್ತದೆ. ಇತಿಹಾಸ ಮರುಕಳಿಸುತ್ತದೆ ಎನ್ನುವ ಮಾತು ಸತ್ಯವಾಗುವ ಸಾಧ್ಯತೆಯಿದೆ. ಯಾವಾಗ ಇತಿಹಾಸವನ್ನು ನಾವು ಅರ್ಥೈಸಿಕೊಳ್ಳದೆ ಅದರ ಆಳ, ಉದ್ದ, ಅಗಲವನ್ನು ತಿಳಿಯದೆ ಮುಂದುವರೆದರೆ ಖಂಡಿತ ಇತಿಹಾಸದ ಕ್ರೌರ್ಯ ಮರುಕಳಿಸುತ್ತದೆ ಎಂಬುದು ಸತ್ಯ.

ಈ ಪುಸ್ತಕ ಒಂದು ಪಯಣ. ಇಸ್ರೇಲಿನಿಂದ ಭಾರತದವರೆಗೂ ಹಾಗೂ ಭಾರತದಿಂದ ಬೇರೆಲ್ಲಾ ದೇಶಕ್ಕೆ. ನಮ್ಮದೂ ಒಂದು ಪಯಣವಾಗುತ್ತದೆ. ನಾವೂ ನೋವಿನಲ್ಲಿ ಬೆಂದು ಕಣ್ಣೀರಿಟ್ಟು ಮತ್ತೆ ಬಿಡದೇ ಓದಿಮುಗಿಸುವ ಪುಸ್ತಕ. ಇಲ್ಲಿ ಪ್ರಮುಖವಾಗಿ ನೇಮಿಚಂದ್ರರ ಈ ಬರಹವನ್ನು ಪ್ರಶಂಸಿಸಲೇಬೇಕು. ಅವರ ಪಯಣಕ್ಕೆ, ಚಾಣಾಕ್ಯತನಕ್ಕೆ, ಬರವಣಿಗೆಯ ಶೈಲಿಗೆ ಹಾಗೂ ಸಂಶೋಧನೆಗೆ. ಅದೆಲ್ಲೋ ಗೋರಿಪಾಳ್ಯದ ಒಂದು ಸಮಾದಿಯನ್ನು ಪ್ರಮುಖವಾಗಿ ಇಟ್ಟುಕೊಂಡು ಅದರ ಸುತ್ತ ಹೆಣೆಯುತ್ತಾ ಹೋದ ಕಥೆಗೆ ನಿಜವಾಗಿಯೂ ಸಾಷ್ಟಾಂಗ ನಮಸ್ಕಾರ. ಒಂದು ಅದ್ಭುತ ಓದು ಇದು. ನೀವೂ ಓದಿ.


ದಿವ್ಯಶ್ರೀ ಹೆಗಡೆ
ಎಸ್. ಡಿ. ಎಂ ಕಾಲೇಜು, ಉಜಿರೆ

Prev Post

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

Next Post

ಅಮ್ಮ ತಪಸ್ವಿ | ಶಿಲ್ಪ .ಬಿ 

post-bars

Leave a Comment

Related post