Back To Top

 ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ನಸ್ಸು ಶೂನ್ಯವಾಗಿದ್ದರೂ ನಗುತ್ತದೆ. ಮನಸ್ಸಿನಿಂದ ನಕ್ಕಾಗ ನಾವು ಹುದ್ದೆ, ಸ್ಥಾನ-ಮಾನ, ಗೌರವ ಹೀಗೇ ಯಾವುದನ್ನೂ ನೋಡುವುದಿಲ್ಲ. ಮುಕ್ತವಾಗಿ ನಮ್ಮ ಜಗತ್ತಿನಲ್ಲಿ ನಾವು ಕಳೆದು ಹೋಗುತ್ತೇವೆ. ನಗು ಎನ್ನುವುದು ಎಷ್ಟು ವಿಚಿತ್ರ ಎಂದ್ರೆ. ಸುಮ್ಮ ಸುಮ್ಮನೇ ನಕ್ಕರೆ ಅವನನ್ನ ಹುಚ್ಚಾ ಅಂತಾರೆ. ಆದರೆ ಹುಚ್ಚನ್ನು ಸಹ ಗುಣ ಮಾಡುವ ಶಕ್ತಿ ಈ ನಗುವಿಗೆ ಇದೆ. ಗುಂಡಪ್ಪ ಅವರು ನಗುವಿನ ಬಗ್ಗೆ “ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ನಕ್ಕು ನಗಿಸುವುದು ಆತಿಶಯದ ಧರ್ಮ” ಎಂದಿದ್ದಾರೆ. ಇದಕ್ಕೆ ಸೀಮಿತ ಅರ್ಥ ಇಲ್ಲ.

ಇನ್ನು ನಗುವಿನಲ್ಲಿ ಹಲವು ವಿಧಗಳು. ಮುಗುಳು ನಗು, ಸಹಜ ನಗು, ಹೊಟ್ಟೆ ಹುಣ್ಣಾಗಿಸುವ ನಗು, ಹುಸಿ ನಗು ಹೀಗೇ ಹಲವು. ಪ್ರತಿ ನಗುವೂ ಬೇರೆ ಬೇರೆ ಕಾರಣಕ್ಕೆ, ಬೇರೆ ಸಮಯಕ್ಕೆ ಪ್ರತಿಕ್ರಿಯೆಯ ರೀತಿಯಲ್ಲಿ ನಮ್ಮಲ್ಲಿ ಹುಟ್ಟುತ್ತದೆ. ಕ್ರಿಯೆ ಏನು ಎಂಬುದರ ಮೇಲೆ ನಮ್ಮ ಉತ್ತರ ಇರುತ್ತದೆ. ನಗುವಿನ ಬಗ್ಗೆ ಇಷ್ಟು ಪ್ರಸ್ತಾಪ ಮಾಡಲು ಕಾರಣ, ಅದರ ಚಿಕಿತ್ಸಕ ಗುಣದ ಬಗ್ಗೆ ತಿಳಿದುಕೊಳ್ಳಲು.

ಡಾ. ಅಜಿತ್ ಪ್ರಸಾದ್ ಜೈನ್ ಅವರು ಚೆನ್ನುಡಿಯಲ್ಲಿ ತಿಳಿಸಿದ ಸುಂದರ ಘಟನೆ ಒಂದಿದೆ. ಸಾಧು ವಾಸ್ವಾನಿ ಅವರದೊಂದು ಆಶ್ರಮವಿದೆ ಪುಣೆಯಲ್ಲಿ. ಅಲ್ಲಿ ನಿತ್ಯ ಭಜನೆ, ಸತ್ಸಂಗ, ಪ್ರವಚನ, ಶ್ರವಣ, ಭಕ್ತಿ, ಸಂಗೀತದಿಂದ ಕಾರ್ಯಕ್ರಮಗಳು ನಡೆಯುತ್ತವೆ. ಒಮ್ಮೆ ಅಲ್ಲಿಗೊಬ್ಬ ರೋಗಿ ಬಂದ.

ಅತ್ಯಂತ ದುಃಖ ತಪ್ಪೇನಿದೆ ರೋಗಿಯ. ಆಸ್ಪತ್ರೆಗಳ ವೈದ್ಯರು ಈತ ಬದುಕಲಾರ ಎಂದು ಅಂತಿಮವಾಗಿ ನಿರಾಶೆ ಮೂಡಿಸಿದರು. ಆದರೆ ಆಶ್ರಮಕ್ಕೆ ಬಂದ ಆ ರೋಗಿಯನ್ನು ಹೊಸ ಚಿಕಿತ್ಸೆಗೆ ಒಳಪಡಿಸಲಾಯಿತು. ಯಾವ ಚಿಕಿತ್ಸೆ ಗೊತ್ತೇ? ನಗೆಯ ಚಿಕಿತ್ಸೆ.

ಪ್ರತಿದಿನವೂ ನಗುವ ಸಂದರ್ಭಗಳು, ಹಾಸ್ಯ ಚಟಾಕಿಗಳು, ಹಾಸ್ಯ ಕವಿತೆಗಳು, ವಿಡಂಬನೆಯ ಕಿರುನಾಟಕಗಳು, ಇಂಥ ಪರಿಸರದಲ್ಲೇ ಈ ಕ್ಯಾನ್ಸರ್ ಪೀಡಿತನನ್ನು ಅಡ್ಡಾಡಲು, ಮುಕ್ತವಾಗಿ ಸಂಚರಿಸಲು ಅನುಮತಿಸಲಾಯಿತು.

ಭಜನೆ, ಸಂಗೀತ, ಸತ್ಸಂಗಗಳಲ್ಲೂ ಭಾಗವಹಿಸುತ್ತಿದ್ದ ಆ ರೋಗಿ ಆಶ್ರಮದ ಹಚ್ಚ ಹಸುರಿನ ವಾತಾವರಣದಲ್ಲಿ ಅಡ್ಡಾಡುತ್ತಿದ್ದ. ಆಶ್ರಮ ವಾಸಿಗಳು ಒಡನೆ ನಕ್ಕು ನಗುವ ವಾತಾವರಣದಲ್ಲಿ ಅಡ್ಡಾಡುತ್ತಿದ್ದ. ನಗು ನಗುತ್ತಾ ಕುಣಿದು ಕುಪ್ಪಳಿಸಲು ಕಲಿತ. ನಗೆಯೇ ಆತನ ಪಾಲಿಗೆ ಟಾನಿಕ್ ಇದ್ದಂತೆ.

ನಗೆಯೇ ರೋಗನಿವಾರಕ ಔಷಧಿ, ಇಂಜೆಕ್ಷನ್, ಗುಳಿಗೆಯಾಯ್ತು. ಆರೇ ತಿಂಗಳಲ್ಲಿ ಕಾಯಿಲೆ ಅರ್ಧದಷ್ಟು ಗುಣವಾಯ್ತು. ಮತ್ತೆ ಒಂದು ವರ್ಷವಾಗುತ್ತಿದ್ದಂತೆ ಗುಣಮುಖರಾಗಿ ಆತ ತನ್ನ ಊರಿಗೆ ಹಿಂದಿರುಗಿದ. ಇದು ನಗುವಿನ ವೈದ್ಯಕೀಯ ಶಕ್ತಿ.

ಆಪತ್ತುಗಳನ್ನು, ವಿಪತ್ತು ಸಂಕಟಗಳನ್ನು ಎದುರಿಸಲು ಕಲಿಯಬೇಕು. ಸಂಕಟಗಳನ್ನು ಕೊಟ್ಟ ಭಗವಂತನೇ ಅದರ ನಿವಾರಣೋಪಾಯ ನೀಡಬಲ್ಲ. ನಗು ನಗುತ್ತಾ ಆಪತ್ತುಗಳನ್ನು ಎದುರಿಸಲು ಕಲಿಯೋಣ.ನಾವು ನಗುತ್ತಾ ಬದುಕಲು ಕಲಿಯೋಣ.

ಸಿಂಚನ ಜೈನ್. ಮುಟ್ಟದ ಬಸದಿ
ಬಿ. ಕಾಮ್‌ ದ್ವಿತೀಯ ವರ್ಷ
ಎಸ್‌.ಡಿ.ಎಮ್‌ ಕಾಲೇಜು, ಹೊನ್ನಾವರ

Prev Post

ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

Next Post

ಮಾರ್ಚ್ 23ಕ್ಕೆ ‘ಎಲ್ಲರೊಳಗೊಂದಾಗು’ ಕೃತಿ ಲೋಕಾರ್ಪಣೆ

post-bars

Leave a Comment

Related post