Back To Top

 ‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಗರಿ

‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಗರಿ

ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆದ ವಾರ್ಷಿಕ ನಿಯತಕಾಲಿಕೆಯ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೊರತಂದ ‘ಮನೀಷಾ’ ನಿಯತಕಾಲಿಕೆಗೆ ‘ಅತ್ಯುತ್ತಮ ಕಾಲೇಜು ಮ್ಯಾಗಝಿ಼ನ್’ ಪ್ರಶಸ್ತಿ ದೊರೆತಿದೆ.

ಇತ್ತೀಚೆಗೆ ಮಂಗಳೂರು ವಿವಿಯ ಸೆನೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಅವರಿಗೆ ಪ್ರಥಮ ಬಹುಮಾನಿತ ಮನ್ನಣೆಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಆಡಳಿತಾಂಗ ಕುಲಸಚಿವರಾದ ಕೆ. ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವರಾದ ಡಾ. ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಡಾ. ಸಂಗಪ್ಪ ವೈ. ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಡಾ. ಪರಿಣಿತಾ ಅವರ ಅಧ್ಯಕ್ಷತೆಯ ಕಾಲೇಜು ಮ್ಯಾಗಝೀನ್ ತಜ್ಞರ ಆಯ್ಕೆ ಸಮಿತಿಯು ವಿ.ವಿ. ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ವಾರ್ಷಿಕ ಸಂಚಿಕೆಗಳನ್ನು ಪರಿಶೀಲಿಸಿ ‘ಮನೀಷಾ’ ಸಂಚಿಕೆಯನ್ನು ಮೊದಲ ಬಹುಮಾನಕ್ಕೆ ಆಯ್ಕೆ ಮಾಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಡಾ. ಪರಿಣಿತಾ ಅವರು ‘ಮನೀಷಾ’ ಸಂಚಿಕೆಯ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ, ಕಲೆ ಮತ್ತು ಸ್ಥಳೀಯ ಆರಾಧನಾ ವಿಧಾನಗಳ ಕುರಿತ ಲೇಖನಗಳು ಈ ಸಂಚಿಕೆಯನ್ನು ವಿಭಿನ್ನವಾಗಿಸಿವೆ. ಸಮಕಾಲೀನವೆನ್ನಿಸುವ ಆಲೋಚನಾ ಕ್ರಮಗಳೊಂದಿಗೆ ಭಾಷೆ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳನ್ನು ದಾಖಲಿಸುವ ಪ್ರಯೋಗಶೀಲತೆಯ ಕಾರಣಕ್ಕಾಗಿ ‘ಮನೀಷಾ’ ಕ್ಕೆ ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು ಎಂದು ಡಾ. ಪರಿಣಿತಾ ತಿಳಿಸಿದರು.

Prev Post

ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

Next Post

ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

post-bars

Leave a Comment

Related post