About the Author

ಉದಯೋನ್ಮುಖ ಬರಹಗಾರ ಶ್ರೀಕಾಂತ ಮದರಗಾಂವಕರ್, ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ 15-2-1979ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಖಾಸಗಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ 'ಕಾಲಜ್ಞಾನ' (ಕವನಸಂಕಲನ) 'ಶುಭೋದಯ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕಾವ್ಯನಾಮ ಶ್ರೀರಾಮ ಕವಿ. ವಚನಾಂಕಿತ ಕಾಲಜ್ಞ ಎಂದಾಗಿದೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ ಆಕಾಶವಾಣಿಯಿಂದ ಪ್ರಕಟ, ಪ್ರಸಾರವಗಿವೆ. ಮತ್ತು 2002ರಲ್ಲಿ ಬಸವಕಲ್ಯಾಣ ಶರಣನಗರ (ಕಿಣಿ) ಗ್ರಾಮದ ಜ್ಞಾನಸೂರ್ಯ ತರುಣಿ ಸಂಘ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರಿಗೆ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ 'ಕವಿರತ್ನ ಶ್ರೀ ಪ್ರಶಸ್ತಿ, 2015ರಲ್ಲಿ 'ಕನ್ನಡ ಕಾವ್ಯರತ್ನ ಪ್ರಶಸ್ತಿ' ನೀಡಿದ್ದಾರೆ. 2016ರಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘದ ವತಿಯಿಂದ 'ಕನ್ನಡ ಸೇವಾ ರತ್ನ, ಹಾಗೂ 2017ರಲ್ಲಿ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ 'ಕನಕ ಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಎಂ. ಆರ್. ಶ್ರೀಕಾಂತ