About the Author

ವೃತ್ತಿಯಲ್ಲಿ ಮನೋವಿಜ್ಞಾನಿಯಾಗಿರುವ ಅ. ಶ್ರೀಧರ್‌ ಅವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವವರು. ಇವರು ಜನಿಸಿದ್ದು 1949 ಮೇ 5ರಂದು. ಮನೋವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಶ್ರೀಧರ್‌ ಅವರು ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಸುಮಾರು 400 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 

ಇವರ ಅನಂತ ಇಂಗ್ಲಿಷ್‌- ಕನ್ನಡ ಮನೋವಿಜ್ಞಾನ ಪದಕೋಶಕ್ಕೆ 2004ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಉತ್ತಮ ಪುಸ್ತಕ ಪ್ರಶಸ್ತಿ ಸಂದಿದೆ. ಮನಸ್ಸು ಮತ್ತು ಆಗೋಗ್ಯ ಮುಂತಾದವು ಇವರ ಪ್ರಮುಖ ಕೃತಿಗಳು.

ಅ. ಶ್ರೀಧರ

(05 May 1949)