About the Author

ಪುರಾತತ್ತ್ವ ಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಪ್ರೊ. ಅ. ಸುಂದರ ಮೂಲತ: ಬ್ರಹ್ಮಾವರ ಸಮೀಪದ ನೀಲಾವರದವರು. ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿ ನಂತರ ಧಾರವಾಡದ ಕರ್ನಾಟಕ ವಿಶ್ವದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರೂ, ವಿಭಾಗ ಮುಖ್ಯಸ್ಥರೂ ಆಗಿದ್ದರು. ಭಾರತದ ಪುರಾತತ್ವ ಸರ್ವೇಕ್ಷಣ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾಗಿ ಸೇರಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಉತ್ಖನನ ಕಾರ್ಯದಲ್ಲಿ ತೊಡಗಿದ  ಅ. ಸುಂದರರು ಕರ್ನಾಟಕದ ಇಂಡಿ, ಸಿಂದಗಿ, ಮದ್ದೇಬಿಹಾಳ, ನರಗುಂದ, ರೋಣ, ಹನೂರುಗಳಲ್ಲಿ ಗತಕಾಲದ ಗವಾಕ್ಷಗಳನ್ನು ತೆರೆದವರು. ಉತ್ತರ ಕರ್ನಾಟಕದಲ್ಲಿ ಬೃಹತ್‌ ಶಿಲಾಯುಗದ ಜನರ ಸಂಸ್ಕೃತಿಯನ್ನು ಕುರಿತು ಬರೆದ ಮಹಾಪ್ರಬಂಧಕ್ಕಾಗಿ ಪುಣೆ ವಿಶ್ವವಿದ್ಯಾನಿಲಯ ಡಾಕ್ಟೊರೇಟ್‌ ಪಡೆದಿರುತ್ತಾರೆ. ಕರ್ನಾಟಕ ಸರ್ಕಾರದ ಪುರಾತತ್ವ ಮತ್ತು ವಸ್ತು ಸಂಗ್ರಾಲಯಗಳ ನಿರ್ದೇಶಕರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಪ್ರಸ್ತುತ ಶಿವಮೊಗ್ಗದಲ್ಲಿ ವಾಸ. ಶಿಲಾ ಕಲೆ (ರಾಕ್ ಆರ್ಟ್) ಹಾಗೂ ಶಿಲಾಯುಗದ ಕುರಿತು ವಿಶೇಷ ಅಧ್ಯಯನ ನಡೆಸಿರುವ ಇವರ ಪ್ರಸಿದ ಕೃತಿ ಅರ್ಲಿ ಚೇಂಬರ್ ಆಫ್ ಸೌತ್ ಇಂಡಿಯಾ'. ಹಲವಾರು ಪ್ರಾಗೈತಿಹಾಸಿಕ ನೆಲೆಗಳ ಕುರಿತು ಆಳವಾದ ಅಧ್ಯಯನ ನಡೆಸಿ ಆ ಕುರಿತು 300ಕ್ಕೂ ಹೆಚ್ಚು ಮಹತ್ವದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

 

ಅ. ಸುಂದರ