About the Author

ಕವಿ ಅಬ್ದುಲ್ ಮಜೀದ್‌ಖಾನ್‌ ಅವರು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ 1935 ಡಿಸೆಂಬರ್ 13ರಂದು ಜನಿಸಿದರು. ತಂದೆ ಮಹಮ್ಮದ್‌ ಯಾಕೂಬ್‌ಖಾನ್‌, ತಾಯಿ ಹಾಜಿರಾಬಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪಡೆದಿದ್ದಾರೆ. ಇಂಗ್ಲಿಷ್‌ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ತದನಂತರ ಸ್ವಯಂ ನಿವೃತ್ತಿ ಪಡೆದರು. ಕತೆ ಕವನಗಳ ರಚನೆಯೊಂದಿಗೆ ಅನುವಾದ ಕೆಲಸದಲ್ಲಿಯೂ ತೊಡಗಿಕೊಂಡಿದ್ದರು. .

ಕೇಂದ್ರ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿವೆ. ಇವರ ಪ್ರಮುಖ ಕೃತಿಗಳೆಂದರೆ ಉತ್ತರಗಳು, ದಾರಿ, ಗುರುತು (ಕವನ ಸಂಕಲನಗಳು),  ಮಿರ್ಜಾ ಗಾಲಿಬ್, ತಲೆಯಿಲ್ಲದ ಗೌತಮ, ಕೆಂಪುಜನ (ಅನುವಾದ), ಕೊಡುಗಿ, ಆಳು (ಕಥಾಸಂಕಲನಗಳು), ಅಂಧೇರಿನಗರಿ, ದಿಗಂತ (ಕಾದಂಬರಿಗಳು) ಮುಂತಾದವು.

ಅವರ ಗುರುತು ಕವನ ಸಂಕಲನಕ್ಕೆ ಕೇಂದ್ರ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದವು ಅವರಿಗೆ ಸಂದಿವೆ. 

ಅಬ್ದುಲ್ ಮಜೀದ್‌ಖಾನ್‌

(13 Dec 1935-23 Nov 2019)