About the Author

ಸಾಹಿತಿ, ಅಧ್ಯಾಪಕ, ಬರಹಗಾರರಾಗಿದ್ದ ಅಚ್ಯುತಗೌಡ ಕಿನ್ನಿಗೋಳಿ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಿನ್ನಿಗೋಳಿ. ತಂದೆ ರಘುನಾಥಗೌಡ, ತಾಯಿ ಸುನಾಥಗೌಡ ಲಿಂಗಮ್ಮ. ಅ.ಗೌ.ಕಿ. ಎಂದು ಪರಿಚಿತರಾಗಿದ್ದ ಅವರು ಕಿನ್ನಿಗೋಳಿ ಲಿಟ್ಲ್‌ ಫ್ಲವರ್‌ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ 1976ರಲ್ಲಿ ನಿವೃತ್ತರಾದರು.

ಖಂಡಕಾವ್ಯ ರಚನೆಗೆ ಹೆಸರಾದ ಅವರು ಯೋಗಲಹರಿ, ಕ್ಷಾತ್ರದರ್ಶನ, ಶಿವಲೇಸ್ಯೆ ಎಂಬ ಮೂರು ಖಂಡಕಾವ್ಯ ಪ್ರಕಟಿಸಿದ್ದಾರೆ. ಒಡ್ಡಿದ ಉರುಳು, ಸಂಗ್ರಾಮಸಿಂಹ, ಸರಸ-ವಿರಸ, ದಾರಾ ಅವರ ಪ್ರಕಟಿತ ಕಾದಂಬರಿಗಳು. ಬಿಡುಗಡೆಯ ನಾಂದಿ, ಪರಾಶರಸತ್ಯ, ಪತನ, ಪ್ರಾಯಶ್ಚಿತ್ತ, ಮಂತ್ರರಹಸ್ಯ, ಅಜ್ಞಾನಸಂಹಾರ, ಗುಪ್ತ ತೀರ್ಥಾಟನೆ (ದಶ ಲಹರಿಗಳು), ಒಡ್ಡಿದ ಉರುಳು, ವತ್ಸ ವಿಜಯ ಪ್ರಕಟಿತ ಕೃತಿಗಳು.

ಅಚ್ಯುತಗೌಡ ಕಿನ್ನಿಗೋಳಿ